ವಿದೇಶ

ಇರಾನ್‌ನ ಇಸ್ಫಹಾನ್ ಮೇಲೆ ಅಮೆರಿಕ 900 ಕೆಜಿ ಬಂಕರ್ ಬಸ್ಟರ್ ಬಾಂಬ್ ದಾಳಿ; ವಿಡಿಯೋ ಹಂಚಿಕೊಂಡ ಡೊನಾಲ್ಡ್ ಟ್ರಂಪ್!

ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಸುಮಾರು 540 ಕೆಜಿಗೂ ಹೆಚ್ಚು ಯುರೇನಿಯಂ ದಾಸ್ತಾನುಗಳನ್ನು ಇಸ್ಫಹಾನ್‌ನಲ್ಲಿರುವ ಭೂಗತ ಸೌಲಭ್ಯಕ್ಕೆ ಸಾಗಿಸಿರಬಹುದು ಎನ್ನಲಾಗಿದೆ.

ಇರಾನ್‌ನ ಇಸ್ಫಹಾನ್ ಮೇಲೆ ಅಮೆರಿಕ 900 ಕೆಜಿ ಬಂಕರ್ ಬಸ್ಟರ್ ಬಾಂಬ್ ದಾಳಿ; ವಿಡಿಯೋ ಹಂಚಿಕೊಂಡ ಡೊನಾಲ್ಡ್ ಟ್ರಂಪ್!
ಇರಾನ್‌ನ ಇಸ್ಫಹಾನ್ ಮೇಲೆ ದಾಳಿ
Published On :

ಟೆಹ್ರಾನ್: ಮಂಗಳವಾರ ಮುಂಜಾನೆ ಇರಾನ್‌ನ ಇಸ್ಫಹಾನ್ ನಗರದಲ್ಲಿ ಸಂಭವಿಸಿದ ಬೃಹತ್ ಸ್ಫೋಟದ ವಿಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಈ ದೃಶ್ಯಗಳು ಸರಣಿ ಸ್ಫೋಟಗಳನ್ನು ತೋರಿಸುತ್ತವೆ. ಆಕಾಶದೆತ್ತರಕ್ಕೆ ಬೆಂಕಿಯು ಚಿಮ್ಮುತ್ತದೆ.

ಇದು ಯಾವ ಸಂದರ್ಭದಲ್ಲಿನ ವಿಡಿಯೋ ಎಂದು ಟ್ರಂಪ್ ಹೇಳಿಲ್ಲವಾದರೂ, ಮಾಧ್ಯಮ ವರದಿಗಳು ಇದು 2.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಮತ್ತು ಬದ್ರ್ ಮಿಲಿಟರಿ ವಾಯುನೆಲೆಯಾಗಿರುವ ಇರಾನ್‌ನ ಇಸ್ಫಹಾನ್‌ ನಗರದಲ್ಲಿರುವ ಪ್ರಮುಖ ಶಸ್ತ್ರಾಸ್ತ್ರ ಡಿಪೋದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಾಗಿದೆ ಎಂದು ಹೇಳುತ್ತವೆ.

ವಾಲ್ ಸ್ಟ್ರೀಟ್ ಜರ್ನಲ್ ಉಲ್ಲೇಖಿಸಿದ ಅಮೆರಿಕದ ಅಧಿಕಾರಿ ಪ್ರಕಾರ, ಅಮೆರಿಕದ ಪಡೆಗಳು ಇಸ್ಫಹಾನ್‌ನಲ್ಲಿರುವ ಮದ್ದುಗುಂಡು ಡಿಪೋವನ್ನು 2,000 ಪೌಂಡ್ (ಸುಮಾರು 907-ಕಿಲೋಗ್ರಾಂ) ಬಂಕರ್ ಬಸ್ಟರ್ ಬಾಂಬ್‌ಗಳೊಂದಿಗೆ ಸ್ಫೋಟಿಸಿವೆ. 'ದಾಳಿಗೆ ಹೆಚ್ಚಿನ ಪ್ರಮಾಣದ ಬಂಕರ್ ಬಸ್ಟರ್‌ಗಳು ಅಥವಾ ಪೆನೆಟ್ರೇಟರ್ ಮದ್ದುಗುಂಡುಗಳನ್ನು ಬಳಸಲಾಗಿದೆ' ಎಂದು ಅಧಿಕಾರಿ ಹೇಳಿದರು.

ವರದಿಗಳ ಪ್ರಕಾರ, ಈ ದಾಳಿಯಿಂದಾಗಿ ಪ್ರಬಲವಾದ ದ್ವಿತೀಯಕ ಸ್ಫೋಟಗಳ ಸರಣಿಯನ್ನು ಪ್ರಚೋದಿಸಿತು. ಅದು ಈ ಪ್ರದೇಶದಾದ್ಯಂತ ಬೆಂಕಿಯ ಜ್ವಾಲೆಗಳು ಚಿಮ್ಮುವುದು ಮತ್ತು ಆಘಾತದ ಅಲೆಗಳನ್ನು ಸೃಷ್ಟಿಸಿತು. ಯುದ್ಧವು ಎರಡನೇ ತಿಂಗಳಿಗೆ ಕಾಲಿಡುತ್ತಿದ್ದಂತೆ, ಪಾಕಿಸ್ತಾನ, ಈಜಿಪ್ಟ್, ಸೌದಿ ಅರೇಬಿಯಾ ಮತ್ತು ಟರ್ಕಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿರುವಾಗ, ಈ ದಾಳಿಯು ಭಯವನ್ನು ಹೆಚ್ಚಿಸಿದೆ.

ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಸುಮಾರು 540 ಕೆಜಿಗೂ ಹೆಚ್ಚು ಯುರೇನಿಯಂ ದಾಸ್ತಾನುಗಳನ್ನು ಇಸ್ಫಹಾನ್‌ನಲ್ಲಿರುವ ಭೂಗತ ಸೌಲಭ್ಯಕ್ಕೆ ಸಾಗಿಸಿರಬಹುದು ಎನ್ನಲಾಗಿದೆ. ಕಳೆದ ವರ್ಷ ಬೇಸಿಗೆಯಲ್ಲಿ ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಅಡಿಯಲ್ಲಿ ಅಮೆರಿಕದ ದಾಳಿಯ ಸಮಯದಲ್ಲಿ ಈ ನಗರವನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಈ ದಾಳಿಯು ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ಗಮನ ಕೇಂದ್ರೀಕರಿಸಿತ್ತು.

ಶೀಘ್ರದಲ್ಲೇ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಬಾರದಿದ್ದರೆ, ಇರಾನ್‌ನ ಇಂಧನ ಸಂಪನ್ಮೂಲಗಳು ಮತ್ತು ಪರಮಾಣು ಸೌಲಭ್ಯಗಳು ಮತ್ತು ಜಲ ಸ್ಥಾವರಗಳು ಸೇರಿದಂತೆ ಇತರ ಪ್ರಮುಖ ಮೂಲಸೌಕರ್ಯಗಳನ್ನು ವ್ಯಾಪಕವಾಗಿ ನಾಶಪಡಿಸುವುದಾಗಿ ಟ್ರಂಪ್ ಸೋಮವಾರ ಬೆದರಿಕೆ ಹಾಕಿದ್ದರು. ಅದಾದ ಒಂದು ದಿನದ ನಂತರ ಈ ದಾಳಿ ನಡೆದಿದೆ.

'ಹೊಸ ಮತ್ತು ಹೆಚ್ಚು ಸಮಂಜಸವಾದ ಆಡಳಿತ'ದೊಂದಿಗೆ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಮತ್ತು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ ಅಮೆರಿಕ ಇರಾನಿನ ಇಂಧನ ತಾಣಗಳನ್ನು ನಾಶಪಡಿಸುತ್ತದೆ ಎಂದು ಟ್ರಂಪ್ ಹೇಳಿದ್ದರು.

ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ನಿರ್ಮಿಸುವ ಹಾದಿಯಲ್ಲಿ ತುಂಬಾ ಹತ್ತಿರಕ್ಕೆ ತಲುಪಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪದೇ ಪದೆ ಆರೋಪಿಸುತ್ತಿದ್ದಾರೆ. ಆದರೆ, ಅದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ಹೇಳಿದೆ. ಕಳೆದ ವರ್ಷ ದಾಳಿಗಳಲ್ಲಿ ಪ್ರಮುಖ ತಾಣಗಳನ್ನು 'ನಾಶಪಡಿಸಲಾಗಿದೆ' ಎಂದು ಟ್ರಂಪ್ ಅವರೇ ಹೇಳಿದ್ದರು.

ಬಂಕರ್ ಬಸ್ಟರ್‌ಗಳು ಎಂದರೇನು?

'ಬಂಕರ್ ಬಸ್ಟರ್‌ಗಳು' ಎಂದರೆ ಗಟ್ಟಿಯಾದ ಸ್ಟೀಲ್ ಕವಚಗಳಿಂದ ವಿನ್ಯಾಸಗೊಳಿಸಲಾದ ಬಾಂಬ್‌ಗಳು, ಅವು ಮಣ್ಣು ಮತ್ತು ಕಾಂಕ್ರೀಟ್ ಪದರಗಳನ್ನು ಭೇದಿಸಿ ನಿರ್ದಿಷ್ಟ ಆಳವನ್ನು ತಲುಪಿದ ನಂತರವೇ ಸ್ಫೋಟಗೊಳ್ಳಲು ಅನುವು ಮಾಡಿಕೊಡುತ್ತದೆ.

'ವಾಸ್ತವವಾಗಿ ಅವು ಸಣ್ಣ ಸ್ಫೋಟಕ ಪೇಲೋಡ್‌ಗಳನ್ನು ಹೊಂದಿರುತ್ತವೆ... ಆದರೆ ಅವು ನೆಲವನ್ನು ಅಗೆಯಲು, ಒಂದು ರೀತಿಯ ಡ್ರಿಲ್‌ನಂತೆ ಮತ್ತು ನಂತರ ಈ ಗುರಿಗಳನ್ನು ನಾಶಮಾಡಲು ಅನುವು ಮಾಡಿಕೊಡುವ ಕವಚ ಇದು' ಎಂದು ಅಮೆರಿಕ ಮೂಲದ ಥಿಂಕ್ ಟ್ಯಾಂಕ್ ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್‌ನ ಯುದ್ಧಸಾಮಗ್ರಿ ತಜ್ಞ ರಯಾನ್ ಬ್ರೋಬ್ಸ್ಟ್ ಪ್ರಸಾರಕರಾದ NPRಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.