ವಿದೇಶ

ಇರಾನ್, ಹೆಜ್ಬೊಲಾ ಕ್ಷಿಪಣಿ ದಾಳಿ; ದಕ್ಷಿಣ ಲೆಬನಾನ್‌ನಲ್ಲಿ ನಾಲ್ವರು ಇಸ್ರೇಲಿ ಸೈನಿಕರ ಹತ್ಯೆ- IDF

ಘಟನೆ ವೇಳೆ ಇತರ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಎಲ್ಲಾ ಸಂತ್ರಸ್ತ ಯೋಧರ ಕುಟುಂಬಗಳಿಗೆ ಸೂಚನೆ ನೀಡಲಾಗಿದೆ ಎಂದು ಸೇನೆ ತಿಳಿಸಿದೆ.

ಇರಾನ್, ಹೆಜ್ಬೊಲಾ ಕ್ಷಿಪಣಿ ದಾಳಿ; ದಕ್ಷಿಣ ಲೆಬನಾನ್‌ನಲ್ಲಿ ನಾಲ್ವರು ಇಸ್ರೇಲಿ ಸೈನಿಕರ ಹತ್ಯೆ- IDF
ಮೃತಪಟ್ಟ ಇಸ್ರೇಲಿ ಸೈನಿಕರು
Published On :

ಜೆರುಸಲೆಂ: ದಕ್ಷಿಣ ಲೆಬನಾನ್‌ನಲ್ಲಿ ನಾಲ್ವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ. ಈ ಕುರಿತು ಇಸ್ರೇಲ್ ರಕ್ಷಮಾ ಪಡೆ IDF ಮಂಗಳವಾರ ದೃಢಪಡಿಸಿದೆ. ದಕ್ಷಿಣ ಲೆಬನಾನ್ ನಲ್ಲಿ ಹೋರಾಡುತ್ತಿರುವಾಗ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು IDF ಹೇಳಿರುವುದಾಗಿ ಜೆರುಸಲೆಂ ಪೋಸ್ಟ್ ವರದಿಮಾಡಿದೆ. ಮೃತ ಸೈನಿಕರ ಹೆಸರನ್ನು ಉಲ್ಲೇಖಿಸಿದೆ.

ಘಟನೆ ವೇಳೆ ಇತರ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ .ಎಲ್ಲಾ ಸಂತ್ರಸ್ತ ಯೋಧರ ಕುಟುಂಬಗಳಿಗೆ ಸೂಚನೆ ನೀಡಲಾಗಿದೆ ಎಂದು ಸೇನೆ ತಿಳಿಸಿದೆ.

ಮಾರ್ಚ್ 2 ರಂದು ಹೆಜ್ಬೊಲಾ ಗಡಿಯಾಚೆಗಿನ ದಾಳಿ ಆರಂಭಿಸಿದ ನಂತರ ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ಹಾಗೂ ನೆಲದ ಮೇಲೆ ದಾಳಿ ನಡೆಸುತ್ತಿದೆ. ಇಸ್ರೇಲ್ ದಾಳಿಯಿಂದ 1,247 ಜನರು ಸಾವನ್ನಪ್ಪಿದ್ದು, 3,690 ಮಂದಿಗಾಯಗೊಂಡಿದ್ದಾರೆ ಎಂದು ಲೆಬನಾನ್ ಆಡಳಿತ ಹೇಳಿದೆ.

ಮತ್ತೊಂದೆಡೆ ಲೆಬನಾನ್ ಹೋರಾಟದಲ್ಲಿ ಇಲ್ಲಿಯವರೆಗೂ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು IDF ತಿಳಿಸಿದೆ. ಯುದ್ಧ ಪ್ರಾರಂಭವಾದಾಗಿನಿಂದ, ಲೆಬನಾನ್ ಮತ್ತು ಇರಾನ್‌ನಿಂದ ರಾಕೆಟ್ ಮತ್ತು ಕ್ಷಿಪಣಿ ಗುಂಡಿನ ದಾಳಿಯಿಂದ 22 ನಾಗರಿಕರು ಸಾವನ್ನಪ್ಪಿದ್ದಾರೆ.

ಗುರುವಾರ ಉತ್ತರ ಇಸ್ರೇಲ್‌ನಲ್ಲಿ ಹೆಜ್ಬೊಲ್ಲಾ ರಾಕೆಟ್‌ ದಾಳಿ ನಂತರ ನಹಾರಿಯಾದಲ್ಲಿ, 43 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇಪ್ಪತ್ತೈದು ಮಂದಿ ಗಾಯಗೊಂಡಿದ್ದಾರೆ ಎಂದು ಜೆರುಸಲೆಂ ಪೋಸ್ಟ್ ನಲ್ಲಿ ಹೇಳಲಾಗಿದೆ.

ಇರಾನ್ ಗಲ್ಫ್ ರಾಷ್ಟ್ರಗಳಲ್ಲಿ ಇಸ್ರೇಲ್ ಮತ್ತು ಯುಎಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳೊಂದಿಗೆ ಪ್ರತೀಕಾರ ತೀರಿಸಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.