Made in China: ನಿಂತಿದ್ದ ಬಾಲಕನ ಕಪಾಳಕ್ಕೆ ಹೊಡೆದ Dancing Robot; ವಿಡಿಯೋ ವೈರಲ್
ರಸ್ತೆ ಪ್ರದರ್ಶನ (Street Performance) ವೇಳೆ ರೋಬೋಟ್ ವೊಂದು ಬಾಲಕನ ಕಪಾಳಕ್ಕೆ ಹೊಡೆದ ವಿಡಿಯೋ ವೈರಲ್ ಆಗುತ್ತಿದೆ.

ಬೀಜಿಂಗ್: ಚೀನಾದಲ್ಲಿ ಇತ್ತೀಚೆಗೆ ರೋಬೋಟ್ ಗಳ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದ್ದು, ಇದೀಗ ಮತ್ತೊಂದು ರೋಬೋ ಬಾಲಕನ ಕಪಾಳಕ್ಕೆ ಹೊಡೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದೆ.
ಈ ಹಿಂದೆ ರೋಬೋ ವೊಂದು ಮಹಿಳೆಯೊಂದಿಗೆ ಜಗಳ ಮಾಡಿದ್ದ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದೀಗ ರಸ್ತೆ ಪ್ರದರ್ಶನ (Street Performance) ವೇಳೆ ರೋಬೋಟ್ ವೊಂದು ಬಾಲಕನ ಕಪಾಳಕ್ಕೆ ಹೊಡೆದ ವಿಡಿಯೋ ವೈರಲ್ ಆಗುತ್ತಿದೆ.
ಮಾರ್ಚ್ 21 ರಂದು ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಸಾರ್ವಜನಿಕ ನೃತ್ಯ ಪ್ರದರ್ಶನದ ಸಮಯದಲ್ಲಿ ಹುಮನಾಯ್ಡ್ ರೋಬೋಟ್ ನ ಕೈ ಆಕಸ್ಮಿಕವಾಗಿ ಚಿಕ್ಕ ಹುಡುಗನ ಮುಖಕ್ಕೆ ಹೊಡೆದಿದೆ. ರಸ್ತೆ ಮಧ್ಯೆ ತಿರುಗುತ್ತಾ ಬಾಲಕನ ಬಳಿ ರೋಬೋಟ್ ಬಂದಿದೆ. ಈ ವೇಳೆ ರೊಬೋ ತಿರುಗುತ್ತಿದ್ದ ವೇಗಕ್ಕೆ ಬಾಲಕ ಸಿಲುಕಿದ್ದು ಆತನ ಮುಖಕ್ಕೆ ರೋಬೋಟ್ ಕೈ ತಗುಲಿ ಪೆಟ್ಟಾಗಿದೆ.
ಈ ವೇಳೆ ಕೂಡಲೇ ಎಚ್ಚೆತ್ತ ಅದರ ನಿರ್ವಾಹಕರು ಅದನ್ನು ಬಲವಂತವಾಗಿ ತಂದು ರಸ್ತೆ ಮಧ್ಯೆ ಬಿಟ್ಟರು. ಬಳಿಕ ರೋಬೊಟ್ ಇದಾವುದರ ಅರಿವೇ ಇಲ್ಲದಂತೆ ಬಂದು ನಿಂತಿತು. ಅದು ರಿಂಗ್‌ನ ಮಧ್ಯದಲ್ಲಿ ತನ್ನ ಪ್ರೋಗ್ರಾಮ್ ಮಾಡಲಾದ ದಿನಚರಿಯನ್ನು ಮುಂದುವರೆಸಿತು.
ಯಾವುದು ಈ ರೋಬೊಟ್?
ಈ ರೋಬೋಟ್ ಚೀನಾದ ತಂತ್ರಜ್ಞಾನ ಸಂಸ್ಥೆ ಯುನಿಟ್ರೀ ರೊಬೊಟಿಕ್ಸ್ ತಯಾರಿಸಿದ G1 ಹುಮನಾಯ್ಡ್ ಮಾದರಿ ಎಂದು ಹೇಳಲಾಗಿದೆ.
ಸುಮಾರು 35 ಕಿಲೋಗ್ರಾಂಗಳಷ್ಟು ತೂಕವಿರುವ ಮತ್ತು ಸುಮಾರು $13,500 ಬೆಲೆಯ ಈ ಯಂತ್ರವು ಸಂಶೋಧನೆ, ಶಿಕ್ಷಣ ಮತ್ತು ವಾಣಿಜ್ಯ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದರ ಕೀಲುಗಳಲ್ಲಿ 23 ಡಿಗ್ರಿ ಸ್ವಾತಂತ್ರ್ಯವನ್ನು ಹೊಂದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇದೇ ಮೊದಲೇನಲ್ಲ..
ಅಂದಹಾಗೆ ಈ ಯುನಿಟ್ರೀ ರೋಬೋಟ್ ಮನುಷ್ಯನ ಮೇಲೆ ಕೈ ಮಾಡಿರುವುದು ಇದೇ ಮೊದಲೇನಲ್ಲ.. ಈ ವರ್ಷದ ಆರಂಭದಲ್ಲಿ, ಇದೇ ಸಂಸ್ಥೆಯ ಒಂದು ರೋಬೋಟ್ ಆಕಸ್ಮಿಕವಾಗಿ ತನ್ನ ಮಾನವ ನಿರ್ವಾಹಕನನ್ನು ಒದೆದಿತ್ತು.
ನಂತರ ಈ ತಿಂಗಳ ಆರಂಭದಲ್ಲಿ, ಮಕಾವುದಲ್ಲಿ ಇದೇ ಸಂಸ್ಥೆಯ ಹ್ಯುಮನಾಯ್ಡ್ ರೋಬೊಟ್ ಹಿರಿಯ ಮಹಿಳೆಯೊಂದಿಗೆ ಜಗಳಕ್ಕೇ ಇಳಿದಿತ್ತು. ಇದರಿಂದ ಕಂಗಾಲಾಗಿದ್ದ ಹಿರಿಯ ಮಹಿಳೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರುವಂತಾಗಿತ್ತು. ಮಹಿಳೆಯನ್ನು ಹೆದರಿಸಿದ ಆರೋಪದ ಮೇರೆಗೆ ಈ ರೋಬೊಟ್ ಅನ್ನು ಪೊಲೀಸರು ಬಂಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



