West Asia conflict: ಹಾರ್ಮುಜ್ ಜಲಸಂಧಿ ಮುಕ್ತಮಾಡಲು ಗಡುವು; ಡೊನಾಲ್ಡ್ ಟ್ರಂಪ್ ಗೆ ತಿರುಗೇಟು ನೀಡಿದ ಇರಾನ್
ಈ ವ್ಯಂಗ್ಯ, ಡೊನಾಲ್ಡ್ ಟ್ರಂಪ್ ಇರಾನ್ಗೆ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮತ್ತೆ ಮುಕ್ತಮಾಡಲು 48 ಗಂಟೆಗಳ ಎಚ್ಚರಿಕೆ ನೀಡಿದರೆಂಬ ವರದಿಯ ನಂತರ ಬಂದಿದೆ.

ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ವಿರುದ್ಧ ವಾಗ್ದಾಳಿ ಮತ್ತು ಟೀಕೆಯನ್ನು ತೀವ್ರಗೊಳಿಸಿದ್ದು, ಅದರ ಒಬ್ಬ ವಕ್ತಾರ ಡೊನಾಲ್ಡ್ ಟ್ರಂಪ್ ವಿರುದ್ಧ “ಯು ಆರ್ ಫೈಯರ್ಡ್” ನಿಮ್ಮನ್ನು ಇಲ್ಲದಂತೆ ಮಾಡುತ್ತೇವೆ ಎಂಬ ವ್ಯಂಗ್ಯಾತ್ಮಕ ಪದವನ್ನು ಬಳಸಿದ್ದಾರೆ. ಈ ಹೇಳಿಕೆ, ಟ್ರಂಪ್ ಅವರ ಟಿವಿ ಕಾರ್ಯಕ್ರಮ The Apprentice ನಲ್ಲಿ ಪ್ರಸಿದ್ಧಿಯಾದ ಅವರ ಖ್ಯಾತ ವಾಕ್ಯವನ್ನು ಉಲ್ಲೇಖಿಸುತ್ತದೆ.
ಈ ವ್ಯಂಗ್ಯ, ಡೊನಾಲ್ಡ್ ಟ್ರಂಪ್ ಇರಾನ್ಗೆ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮತ್ತೆ ಮುಕ್ತಮಾಡಲು 48 ಗಂಟೆಗಳ ಎಚ್ಚರಿಕೆ ನೀಡಿದರೆಂಬ ವರದಿಯ ನಂತರ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ IRGC ವಕ್ತಾರ, ಹೇ ಟ್ರಂಪ್, ನಿಮ್ಮನ್ನು ಇಲ್ಲದಂತೆ ಮಾಡುತ್ತೇವೆ. ನಿಮಗೆ ಈ ಸಾಲು ಗೊತ್ತಿದೆ. ಈ ವಿಷಯಕ್ಕೆ ನಿಮ್ಮ ಗಮನಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇದು ಟ್ರಂಪ್ ತಮ್ಮ Truth Social ಪೋಸ್ಟ್ಗಳಲ್ಲಿ ಬಳಸುವ ಮತ್ತೊಂದು ಸಾಮಾನ್ಯ ವಾಕ್ಯವನ್ನು ಪ್ರತಿಧ್ವನಿಸುತ್ತದೆ.
ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್ನಲ್ಲಿ ಇರಾನ್ಗೆ ಎಚ್ಚರಿಕೆ ನೀಡುತ್ತಾ, ಇರಾನ್ 48 ಗಂಟೆಗಳೊಳಗೆ ಯಾವುದೇ ಬೆದರಿಕೆ ಇಲ್ಲದೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ, ಅಮೆರಿಕವು ಅವರ ವಿವಿಧ ವಿದ್ಯುತ್ ಘಟಕಗಳನ್ನು ನಾಶಮಾಡುತ್ತದೆ, ದೊಡ್ಡ ಬೆಲೆ ತೆರುತ್ತೀರಾ ಎಂದು ಬರೆದಿದ್ದರು.
ಇರಾನಿನ ಸೈನ್ಯ ಸಂಬಂಧಿತ ಮಾಧ್ಯಮಗಳು ಹಂಚಿದ ವಿಡಿಯೋ ಪ್ರಕಾರ, ಖಾತಮ್ ಅಲ್-ಅನ್ಬಿಯಾ ಕೇಂದ್ರ ಕಮಾಂಡ್ ಸಂಟರ್ ನಿಂದ ಮಾತನಾಡಿದ ವಕ್ತಾರರು, ಯುದ್ಧದ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ ಎಂದು ಹೇಳಿದ್ದಾರೆ. ಇದೇ ವೇಳೆ, ಟ್ರಂಪ್ ಬೇರೆ ಪೋಸ್ಟ್ಗಳಲ್ಲಿ ಇರಾನ್ನಲ್ಲಿ ಸೈನಿಕ ಕ್ರಮಗಳನ್ನು ಕಡಿಮೆ ಮಾಡುವ ಸೂಚನೆಯನ್ನೂ ನೀಡಿದ್ದಾರೆ.
ಇರಾನಿನ ರಾಜ್ಯ ಮಾಧ್ಯಮಗಳು, ಟೆಹ್ರಾನ್ ಮೇಲೆ ಹಾರುತ್ತಿದ್ದ ಇಸ್ರೇಲ್-ಅಮೆರಿಕಾ ಸಂಬಂಧಿತ ರಿಕಾನೈಸನ್ಸ್ ಡ್ರೋನ್ ನ್ನು ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ವರದಿ ಮಾಡಿವೆ.
ಇರಾನ್ನ ತೈಲ ಅಥವಾ ವಿದ್ಯುತ್ ಮೂಲಸೌಕರ್ಯಗಳ ಮೇಲೆ ಯಾವುದೇ ದಾಳಿ ನಡೆದರೆ, ಅಮೆರಿಕಾ ಮತ್ತು ಇಸ್ರೇಲ್ನ ಇಂಧನ, ಐಟಿ ಮತ್ತು ನೀರಿನ ಶುದ್ಧೀಕರಣ ಘಟಕಗಳ ಮೇಲೆ ಪ್ರತೀಕಾರ ದಾಳಿ ನಡೆಯಲಿದೆ ಎಂದು ಐಆರ್ ಜಿಸಿ ಎಚ್ಚರಿಸಿದೆ.
ಹಾಗೆಯೇ, ಇರಾನ್ನ ವಿದ್ಯುತ್ ಘಟಕಗಳ ಮೇಲೆ ದಾಳಿ ನಡೆದರೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ತಿಳಿಸಿದೆ. ಇದು ಜಾಗತಿಕ ತೈಲ ಸರಬರಾಜಿಗೆ ದೊಡ್ಡ ಅಡ್ಡಿ ಉಂಟುಮಾಡಬಹುದು.
ಪ್ರತ್ಯೇಕವಾಗಿ, ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಖೇರ್ ಕ್ವಾಲಿಬಫ್ ಎಕ್ಸ್ ಸಂದೇಶದಲ್ಲಿ, ಇರಾನ್ನ ವಿದ್ಯುತ್ ಸೌಲಭ್ಯಗಳ ಮೇಲೆ ದಾಳಿ ನಡೆದರೆ, ಪ್ರಾದೇಶಿಕ ಮಟ್ಟದಲ್ಲಿ ಮಹತ್ವದ ಮೂಲಸೌಕರ್ಯಗಳ, ವಿಶೇಷವಾಗಿ ಇಂಧನ ಮತ್ತು ತೈಲ ಸ್ಥಾಪನೆಗಳ ನಾಶವಾಗಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



