'ನಮ್ಮಲ್ಲಿ ಹೆಚ್ಚುವರಿ ಕಚ್ಚಾ ತೈಲ ಲಭ್ಯವಿಲ್ಲ': ಅಮೆರಿಕ ನಿರ್ಬಂಧ ಸಡಿಲಿಕೆ ಬೆನ್ನಲ್ಲೇ ಇರಾನ್ ಮಹತ್ವದ ಘೋಷಣೆ
ಮುಂಬೈಯಲ್ಲಿರುವ ಇರಾನ್ ಕಾನ್ಸುಲೇಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರಸ್ತುತ ಇರಾನ್ ಬಳಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸಲು ಕಚ್ಚಾ ತೈಲ (floating crude) ಹೆಚ್ಚುವರಿ ಸಂಗ್ರಹ ಇಲ್ಲ ಎಂದು ಹೇಳಿದೆ.

ನಿನ್ನೆ ಅಂದರೆ ಮಾರ್ಚ್ 20ರವರೆಗೆ ಹಡಗುಗಳಲ್ಲಿ ತುಂಬಿಸಿ ಈಗಾಗಲೇ ಸಮುದ್ರದಲ್ಲಿ ಸಿಲುಕಿರುವ ಇರಾನ್ ಮೂಲದ ಕಚ್ಚಾ ತೈಲದ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ಅಮೆರಿಕದ ನಿರ್ಧಾರವನ್ನು ಇರಾನ್‌ನ ತೈಲ ಸಚಿವಾಲಯ ತಿರಸ್ಕರಿಸಿದೆ.
ಮುಂಬೈಯಲ್ಲಿರುವ ಇರಾನ್ ಕಾನ್ಸುಲೇಟ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರಸ್ತುತ ಇರಾನ್ ಬಳಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಸಲು ಕಚ್ಚಾ ತೈಲ (floating crude) ಹೆಚ್ಚುವರಿ ಸಂಗ್ರಹ ಇಲ್ಲ. ಅಮೆರಿಕದ ಖಜಾನೆ ಕಾರ್ಯದರ್ಶಿಯ ಹೇಳಿಕೆಗಳು ಖರೀದಿದಾರರಿಗೆ ಭರವಸೆ ನೀಡಲು ಮತ್ತು ಮಾರುಕಟ್ಟೆಯ ಮನೋಭಾವವನ್ನು ನಿಯಂತ್ರಿಸುವ ಉದ್ದೇಶಿತವಾಗಿವೆ ಎಂದು ತಿಳಿಸಿದೆ.
ಇರಾನ್‌ನ ಈ ನಿರಾಕರಣೆ ಈಗಾಗಲೇ ಅಸ್ಥಿರವಾಗಿರುವ ಮಾರುಕಟ್ಟೆಯನ್ನು ಇನ್ನಷ್ಟು ಆತಂಕಕ್ಕೊಳಪಡಿಸಬಹುದು. ಪಶ್ಚಿಮ ಏಷ್ಯಾದ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆಗಳು ಈಗಾಗಲೇ ಜಾಗತಿಕ ಮಟ್ಟದಲ್ಲಿ ಏರಿಕೆ ಕಂಡುಬಂದಿವೆ.
ನಿರ್ಬಂಧ ಸಡಿಲಿಸಿದ ಅಮೆರಿಕ
ಅಮೆರಿಕ ಏಪ್ರಿಲ್ 19ರವರೆಗೆ ಇರಾನ್ ಮೂಲದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸುವುದಾಗಿ ನಿನ್ನೆ ಘೋಷಿಸಿತ್ತು. ಇದರಲ್ಲಿ ಇರಾನ್ ತೈಲವನ್ನು ಅಮೆರಿಕದಲ್ಲೇ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಈ ನಿರ್ಧಾರದ ವಿವರಗಳನ್ನು ಅಮೆರಿಕ ಖಜಾನೆ ಇಲಾಖೆಯ ‘ಆಫೀಸ್ ಆಫ್ ಫಾರೆನ್ ಅಸೆಟ್ಸ್ ಕಂಟ್ರೋಲ್’ (OFAC) ಪ್ರಕಟಣೆಯಲ್ಲಿ ನೀಡಲಾಗಿದ್ದು, ಮಾರ್ಚ್ 20ರೊಳಗೆ ಹಡಗುಗಳಲ್ಲಿ ಲೋಡ್ ಮಾಡಲಾದ ಇರಾನ್ ಮೂಲದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆಗೆ ಮತ್ತು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಈ ವಿನಾಯಿತಿಗಳು ಏಪ್ರಿಲ್ 19ರವರೆಗೆ ಜಾರಿಯಲ್ಲಿರುತ್ತವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಅನುಮತಿ ಅಡಿಯಲ್ಲಿ ಇರಾನ್ ಮೂಲದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಅಮೆರಿಕಕ್ಕೆ ಆಮದು ಮಾಡುವುದಕ್ಕೂ ಅವಕಾಶ ಇದೆ ಎಂದು ಹೇಳಲಾಗಿದೆ.
ಇದಕ್ಕೂ ಮೊದಲು, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಸಮುದ್ರದಲ್ಲಿ ಸಿಲುಕಿರುವ ಇರಾನ್ ಕಚ್ಚಾ ತೈಲದ ಮಾರಾಟಕ್ಕೆ ತಾತ್ಕಾಲಿಕ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದರು. ಇದರ ಉದ್ದೇಶ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸುವುದು, ಇದನ್ನು ನಿಖರವಾಗಿ ಗುರಿತಪ್ಪದ, ಅಲ್ಪಾವಧಿಯ ಅನುಮತಿ ಎಂದು ಹೇಳಿದ್ದಾರೆ.
ಈ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ಅವರು, ಪ್ರಸ್ತುತ ನಿರ್ಬಂಧಿತ ಇರಾನ್ ತೈಲವನ್ನು ಚೀನಾ ಕಡಿಮೆ ಬೆಲೆಗೆ ಸಂಗ್ರಹಿಸುತ್ತಿದೆ. ಈ ಸಂಗ್ರಹಿತ ತೈಲವನ್ನು ತಾತ್ಕಾಲಿಕವಾಗಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಸುಮಾರು 140 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ತರಬಹುದು, ಇದು ಪೂರೈಕೆಯ ಮೇಲಿನ ತಾತ್ಕಾಲಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




