ವಿದೇಶ

ನಿಮ್ಮ ಬುಡಕ್ಕೂ ಬರ್ತೀವಿ..: 4,000 ಕಿಮೀ ದೂರದ ಅಮೆರಿಕ-ಯುಕೆ ಸೇನಾನೆಲೆ ಗುರಿಯಾಗಿಸಿ Iran ಕ್ಷಿಪಣಿ ದಾಳಿ; ವರದಿ

ಇರಾನ್ ತನ್ನ ದಾಳಿ ತೀವ್ರತೆಯನ್ನು ಹೆಚ್ಚಿಸಿದ್ದು, ಬರೊಬ್ಬರಿ 4,000 ಕಿಮೀ ದೂರದಲ್ಲಿರುವ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಯುಕೆ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ.

ನಿಮ್ಮ ಬುಡಕ್ಕೂ ಬರ್ತೀವಿ..: 4,000 ಕಿಮೀ ದೂರದ ಅಮೆರಿಕ-ಯುಕೆ ಸೇನಾನೆಲೆ ಗುರಿಯಾಗಿಸಿ Iran ಕ್ಷಿಪಣಿ ದಾಳಿ; ವರದಿ
ಇರಾನ್ ಕ್ಷಿಪಣಿ ದಾಳಿ
Published On :

ವಾಷಿಂಗ್ಟನ್: ಇಷ್ಟು ದಿನ ತನ್ನ ನೆರೆಹೊರೆಯ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದ ಇರಾನ್ ಇದೀಗ ತನ್ನ ಯುದ್ಧ ಮಾದರಿಯನ್ನೇ ಬದಲಿಸಿದ್ದು, ನೇರವಾಗಿ ಅಮೆರಿಕ ಬುಡಕ್ಕೇ ಬೆಂಕಿ ಇಟ್ಟಿದೆ.

ಹೌದು.. ಇರಾನ್ ತನ್ನ ದಾಳಿ ತೀವ್ರತೆಯನ್ನು ಹೆಚ್ಚಿಸಿದ್ದು, ಬರೊಬ್ಬರಿ 4,000 ಕಿಮೀ ದೂರದಲ್ಲಿರುವ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಯುಕೆ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ.

ಇರಾನ್ ಇಷ್ಟು ದೂರದ ಗುರಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದು ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ. ಅಂತೆಯೇ ಇದು ದೀರ್ಘ ದಾಳಿಯ ಸಾಧ್ಯತೆಯನ್ನು ಸೂಚಿಸುತ್ತದೆ ಎನ್ನಲಾಗಿದೆ.

ಹೌದು.. ಇರಾನ್ ಇತ್ತೀಚೆಗೆ ಹಿಂದೂ ಮಹಾಸಾಗರದ ಡಿಯಾಗೋ ಗಾರ್ಸಿಯಾದಲ್ಲಿರುವ ಅಮೆರಿಕ-ಬ್ರಿಟನ್ ಜಂಟಿ ಮಿಲಿಟರಿ ನೆಲೆಯ ಮೇಲೆ ತನ್ನ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಹೇಳಿಕೊಂಡಿತ್ತು.

ಆದರೆ ಈ ದಾಳಿಯನ್ನು ಅಮೆರಿಕದ ಅಧಿಕಾರಿಗಳು ತಳ್ಳಿಹಾಕಿದ್ದರು ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ಶುಕ್ರವಾರ ವರದಿ ಮಾಡಿತ್ತು.

ವರದಿಗಳ ಪ್ರಕಾರ ಇರಾನ್ ಸುಮಾರ್ 4 ಸಾವಿರ ಕಿ.ಮೀ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದಂತೂ ನಿಜ. ಆದರೆ ಈ ಕ್ಷಿಪಣಿಗಳು ಇರಾನ್ ಪ್ರದೇಶದಿಂದ ಸುಮಾರು 2,500 ಮೈಲುಗಳು (4,000 ಕಿಲೋಮೀಟರ್) ದೂರದಲ್ಲಿರುವ ಗುರಿಯನ್ನು ತಲುಪಿಲ್ಲ, ಆದರೆ ಈ ಉಡಾವಣೆಯು ಟೆಹ್ರಾನ್ ಹಿಂದೆ ಭಾವಿಸಿದ್ದಕ್ಕಿಂತ ಹೆಚ್ಚಿನ ವ್ಯಾಪ್ತಿಯ ಕ್ಷಿಪಣಿಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.

ಇರಾನ್ ಹಾರಿಸಿದ 2 ಕ್ಷಿಪಣಿಗಳ ಪೈಕಿ ಒಂದು ಹಾರಾಟದಲ್ಲಿ ವಿಫಲವಾದರೆ, ಮತ್ತೊಂದನ್ನು ಅಮೆರಿಕ ನೌಕಾಪಡೆಯ ಯುದ್ಧನೌಕೆಯಿಂದ ಹಾರಿಸಿದ ಇಂಟರ್‌ಸೆಪ್ಟರ್ ಗುರಿಯಾಗಿಸಿಕೊಂಡು ದಾಳಿ ಮಾಡಿ ಅದನ್ನು ನಾಶ ಮಾಡಿತು. ಆದರೂ ಕ್ಷಿಪಣಿಯನ್ನು ಹೊಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ದಿ ಜರ್ನಲ್ ವರದಿ ಮಾಡಿದೆ.

ಅಂದಹಾಗೆ ಚಾಗೋಸ್ ದ್ವೀಪಗಳಲ್ಲಿರುವ ಡಿಯಾಗೋ ಗಾರ್ಸಿಯಾ ಬ್ರಿಟನ್ ಇರಾನ್‌ನಲ್ಲಿ "ರಕ್ಷಣಾತ್ಮಕ" ಕಾರ್ಯಾಚರಣೆಗಳಿಗೆ ಯುನೈಟೆಡ್ ಸ್ಟೇಟ್ಸ್ ಬಳಸಲು ಅನುಮತಿಸುತ್ತಿರುವ ಎರಡು ನೆಲೆಗಳಲ್ಲಿ ಒಂದಾಗಿದೆ.

ಅಮೆರಿಕದ ಪಡೆಗಳು ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಅಮೆರಿಕ ಬಾಂಬ್ ದಾಳಿ ಸೇರಿದಂತೆ ಏಷ್ಯಾ ಕಾರ್ಯಾಚರಣೆಗಳ ಪ್ರಮುಖ ಕೇಂದ್ರವಾದ ಈ ನೆಲೆಯಲ್ಲಿ ಬಾಂಬರ್‌ಗಳು ಮತ್ತು ಇತರ ಉಪಕರಣಗಳನ್ನು ಇರಿಸಿವೆ.

ಅಂತೆಯೇ 1960 ರ ದಶಕದಿಂದ ಚಾಗೋಸ್ ದ್ವೀಪಗಳನ್ನು ಮಾರಿಷಸ್‌ಗೆ ಹಿಂತಿರುಗಿಸಲು ಬ್ರಿಟನ್ ಒಪ್ಪಿಕೊಂಡಿದೆ ಮತ್ತು ದ್ವೀಪಗಳಲ್ಲಿ ಅತಿ ದೊಡ್ಡದಾದ ಡಿಯಾಗೋ ಗಾರ್ಸಿಯಾದಲ್ಲಿನ ನೆಲೆಗೆ ಗುತ್ತಿಗೆಯನ್ನು ಕಾಯ್ದುಕೊಂಡಿದೆ.

ಪ್ರತಿಕ್ರಿಯೆಗೆ ಪೆಂಟಗನ್ ನಿರಾಕರಣೆ

ಇನ್ನು ಈ ದಾಳಿಯನ್ನು ಪೆಂಟಗನ್ ನಿರಾಕರಿಸಿದ್ದು, ಅಂತಹ ಯಾವುದೇ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನ ಈ ನಿರ್ಧಾರವನ್ನು ಖಂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.