ಅರ್ಮೇನಿಯಾ, ಅಜರ್‌ಬೈಜಾನ್ ಗಡಿದಾಟಿ, ಇರಾನ್ ನಿಂದ ಸ್ವದೇಶಕ್ಕೆ 913 ಭಾರತೀಯರು ವಾಪಸ್!
ಅಂತರ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ಅರ್ಮೇನಿಯಾ ಮತ್ತು ಅಜರ್ ಬೈಜಾನ್ ಮೂಲಕ ಇರಾನ್‌ನಿಂದ ನಿರ್ಗಮಿಸುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ.

ನವದೆಹಲಿ: ಇರಾನ್‌ನಲ್ಲಿ ಸಿಲುಕಿರುವ ಹೆಚ್ಚಿನ ಭಾರತೀಯರು ನೆರೆಯ ದೇಶಗಳ ಭೂ ಮಾರ್ಗಗಳ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ. ಭಾರತೀಯ ರಾಯಭಾರಿಗಳ ನೆರವಿನ ಮೂಲಕ ಸ್ಥಳಾಂತರ ಪ್ರಕ್ರಿಯೆ ಮುಂದುವರೆದಿದೆ ಎಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.
ಅಂತರ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ಅರ್ಮೇನಿಯಾ ಮತ್ತು ಅಜರ್ ಬೈಜಾನ್ ಮೂಲಕ ಇರಾನ್‌ನಿಂದ ನಿರ್ಗಮಿಸುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ.
ಈ ಮೊದಲೇ ಹೇಳಿದಂತೆ, ಇರಾನ್‌ನಲ್ಲಿರುವ ಅನೇಕ ಭಾರತೀಯ ನಾಗರಿಕರು ಅರ್ಮೇನಿಯಾ ಮತ್ತು ಅಜರ್‌ಬೈಜಾನ್ ಮೂಲಕ ದೇಶಕ್ಕೆ ಮರಳುತ್ತಿದ್ದಾರೆ. ಅದರಲ್ಲಿ ಈಗ 913 ಭಾರತೀಯ ನಾಗರಿಕರು ಅರ್ಮೇನಿಯಾ ಮತ್ತು ಅಜರ್‌ಬೈಜಾನ್‌ನಲ್ಲಿ ಇರಾನ್‌ನಿಂದ ರಾಯಭಾರಿ ಕಚೇರಿಯ ಸಹಾಯದಿಂದ ಗಡಿ ದಾಟಿದ್ದಾರೆ. ಅವರಲ್ಲಿ ಅನೇಕ ಜನರು ಮರಳಿದ್ದಾರೆ ಎಂದು ಅವರು ಹೇಳಿದ್ದಾರೆ.

ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು; ಇದು ಇರಾನ್ ವಿರುದ್ಧ ಅಮೆರಿಕ, ಇಸ್ರೇಲ್ನ ಅಪ್ರಚೋದಿತ ಆಕ್ರಮಣ: ರಷ್ಯಾ
ಇರಾನ್‌ನಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ಭಾರತೀಯ ಯಾತ್ರಿಕರು ಈಗ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಹಿಂದೆ ಹೇಳಿದಂತೆ 284 ಯಾತ್ರಿಕರು ಅಲ್ಲಿ ಸಿಲುಕಿಕೊಂಡಿದ್ದರು. ಆ ಎಲ್ಲಾ 284 ಯಾತ್ರಿಕರು ಈಗ ಭಾರತಕ್ಕೆ ಮರಳಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.
ಸಹಾಯವಾಣಿ ಕುರಿತು ಮಾಹಿತಿ ನೀಡಿದ ಅವರು, ಮಾಹಿತಿ ಮತ್ತು ಬೆಂಬಲ ಬಯಸುತ್ತಿರುವ ಜನರಿಂದ ಸೀಮಿತ ಸಂಖ್ಯೆಯ ಕರೆಗಳನ್ನು ಸ್ವೀಕರಿಸಿದೆ. ನಿನ್ನೆಯವರೆಗೂ MEA ನಿಯಂತ್ರಣ ಕೊಠಡಿಗೆ ಒಟ್ಟು 10 ದೂರವಾಣಿ ಕರೆಗಳು ಮತ್ತು ಆರು ಇಮೇಲ್ ಬಂದಿವೆ. ಇವೆಲ್ಲವೂ ಹೆಚ್ಚಾಗಿ ವ್ಯಾಪಾರಿ ಹಡಗುಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಬಗ್ಗೆ ಮಾಹಿತಿ ಕೋರಿ ಬಂದ ಕರೆಗಳಾಗಿವೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


