ವಿದೇಶ

ಸಮುದ್ರದಲ್ಲೇ ಬಿಗ್ ಡೀಲ್‌: ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಭಾರತಕ್ಕೆ ಯು-ಟರ್ನ್!

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಚ್ಚರಿ ಬೆಳವಣಿಗೆಯೊಂದು ನಡೆದಿದ್ದು, ಚೀನಾದತ್ತ ಸಾಗುತ್ತಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಹಲವು ನೌಕೆಗಳು ತಮ್ಮ ಮಾರ್ಗ ಬದಲಿಸಿ ಭಾರತದತ್ತ ಧಾವಿಸುತ್ತಿವೆ.

ಸಮುದ್ರದಲ್ಲೇ ಬಿಗ್ ಡೀಲ್‌: ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಭಾರತಕ್ಕೆ ಯು-ಟರ್ನ್!
ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಭಾರತಕ್ಕೆ ಯು-ಟರ್ನ್!
Published On :

ನವದೆಹಲಿ: ಇರಾನ್-ಇಸ್ರೇಲ್ ಅಮೆರಿಕ ಯುದ್ಧದಿಂದಾಗಿ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳು ಇಂಧನ ಕೊರತೆ ಎದುರಿಸುತ್ತಿದ್ದು, ಈ ನಡುವೆ ಚೀನಾದತ್ತ ಹೊರಟ್ಟಿದ್ದಇಂಧನ ಟ್ಯಾಂಕರ್ ಯುಟರ್ನ್ ಹೊಡೆದಿದ್ದು, ಭಾರತದ ಮಂಗಳೂರಿನತ್ತ ಸಾಗಿದೆ.

ಹೌದು.. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಚ್ಚರಿ ಬೆಳವಣಿಗೆಯೊಂದು ನಡೆದಿದ್ದು, ಚೀನಾದತ್ತ ಸಾಗುತ್ತಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಹಲವು ನೌಕೆಗಳು ತಮ್ಮ ಮಾರ್ಗ ಬದಲಿಸಿ ಭಾರತದತ್ತ ಧಾವಿಸುತ್ತಿವೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಬದಲಾವಣೆ ಮತ್ತು ಮಧ್ಯಪ್ರಾಚ್ಯದ ಪೂರೈಕೆ ಕೊರತೆಯನ್ನು ನೀಗಿಸಲು ಭಾರತವು ರಷ್ಯಾದಿಂದ ತನ್ನ ತೈಲ ಆಮದನ್ನು ಗಣನೀಯವಾಗಿ ಹೆಚ್ಚಿಸಿದೆ.

ಚೀನಾದತ್ತ ಮುಖ ಮಾಡಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಇದ್ದಕ್ಕಿದ್ದಂತೆ 'ಯು-ಟರ್ನ್' ಪಡೆದು ಈಗ ಭಾರತದತ್ತ ಮುಖ ಮಾಡಿವೆ.

ರಷ್ಯಾದ ಪ್ರಿಮೊರ್ಸ್ಕ್ ನಿಂದ ಚೀನಾದ ರಿಝಾವೊ ಬಂದರಿಗೆ ಹೊರಟಿದ್ದ ಕಚ್ಚಾ ತೈಲ ಟ್ಯಾಂಕರ್ ಆಗ್ನೇಯ ಏಷ್ಯಾದಲ್ಲಿ ತನ್ನ ಮಾರ್ಗ ಬದಲಿಸಿದೆ.

marinetraffic.com ಪ್ರಕಾರ, ಕ್ಯಾಮರೂನ್ ನಲ್ಲಿ ನೋಂದಾಯಿಸಲಾದ ಟ್ಯಾಂಕರ್ ಅಕ್ವಾ ಟೈಟಾನ್ ಜನವರಿ 18 ರಂದು ರಷ್ಯಾದ ಬಂದರಿನಿಂದ ಹೊರಟಿತು. ಅದು ಪೋರ್ಟ್ ಸೂಯೆಜ್ ನಲ್ಲಿ ಲಂಗರು ಹಾಕಿತು ಮತ್ತು ಫೆಬ್ರವರಿ 21 ರಂದು ಹೊರಟಿತು ಎಂದು vesselsfinder.com ವರದಿ ಮಾಡಿದೆ. ಅಕ್ವಾ ಟೈಟಾನ್ ಆಗಮನವು ಸಂಸ್ಕರಣಾಗಾರ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ನ್ಯೂ ಮಂಗಳೂರು ಬಂದರು ಪ್ರಾಧಿಕಾರದ (NMPA) ಮೂಲಗಳು ತಿಳಿಸಿವೆ.

ಶಿಪ್-ಟ್ರ್ಯಾಕಿಂಗ್ ಡೇಟಾ ಪ್ರಕಾರ, 'ಆಕ್ವಾ ಟೈಟನ್' (Aqua Titan) ಎಂಬ ನೌಕೆಯು ಮಾರ್ಚ್ 21 ರಂದು ಮಂಗಳೂರಿನ ನವಮಂಗಳೂರು ಬಂದರನ್ನು ತಲುಪುವ ನಿರೀಕ್ಷೆಯಿದೆ.

ಜನವರಿ ಕೊನೆಯಲ್ಲಿ ರಷ್ಯಾದ ಬಾಲ್ಟಿಕ್ ಸಮುದ್ರದ ಬಂದರಿನಿಂದ 'ಯುರಲ್ಸ್' (Urals) ತೈಲವನ್ನು ಲೋಡ್ ಮಾಡಿಕೊಂಡಿದ್ದ ಈ ಹಡಗು, ಆರಂಭದಲ್ಲಿ ಚೀನಾದ 'ರಿಝಾವೊ' (Rizhao) ಬಂದರಿನತ್ತ ಸಾಗುತ್ತಿತ್ತು. ಆದರೆ, ಆಗ್ನೇಯ ಏಷ್ಯಾದ ಜಲಪ್ರದೇಶಕ್ಕೆ ಬರುತ್ತಿದ್ದಂತೆ ದಿಕ್ಕು ಬದಲಿಸಿ ಭಾರತದತ್ತ ಮುಖ ಮಾಡಿದೆ.

ಅಮೆರಿಕ ಗ್ರೀನ್ ಸಿಗ್ನಲ್

ಅಚ್ಚರಿಯೆಂದರೆ, ರಷ್ಯಾದಿಂದ ತೈಲ ಖರೀದಿಯನ್ನು ತಾತ್ಕಾಲಿಕವಾಗಿ ಹೆಚ್ಚಿಸಲು ಅಮೆರಿಕವು ಭಾರತಕ್ಕೆ ಹಸಿರು ನಿಶಾನೆ ತೋರಿಸಿದ ಕೆಲವೇ ದಿನಗಳಲ್ಲಿ ಬದಲಾವಣೆ ನಡೆದಿದೆ. ಭಾರತವು 30 ದಿನಗಳವರೆಗೆ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬಹುದು ಎಂದು ಅಮೆರಿಕ ಹೇಳಿದ ನಂತರ ಮಾರ್ಚ್ ಮಧ್ಯದಲ್ಲಿ ಹಡಗು ಯು-ಟರ್ನ್ ಮಾಡಿದೆ ಎಂದು ವರದಿಗಳು ತಿಳಿಸಿವೆ.

ರಷ್ಯಾದಿಂದ ತೈಲ ಆಮದನ್ನು ಭಾರತವು ದುಪ್ಪಟ್ಟುಗೊಳಿಸುತ್ತಿರುವ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಭಾರತದಿಂದ 30 ಮಿಲಿಯನ್ ಬ್ಯಾರೆಲ್ ತೈಲ ಖರೀದಿ!

ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಸ್ಥಗಿತಗೊಂಡಿರುವ ತೈಲ ಪೂರೈಕೆಯ ಕೊರತೆಯನ್ನು ನೀಗಿಸಲು ಭಾರತವು ರಷ್ಯಾ ಮೊರೆ ಹೋಗಿದೆ. ಕಳೆದ ಒಂದೇ ವಾರದಲ್ಲಿ ಭಾರತೀಯ ತೈಲ ಕಂಪನಿಗಳು ಬರೋಬ್ಬರಿ 30 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಖರೀದಿಸಿವೆ.

ಸರಕು ಶುಲ್ಕ ಮನ್ನಾ

ಭಾರತಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನ ಮೇಲೆ ಪರಿಣಾಮ ಬೀರುವ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ, ಮಂಗಳೂರು ಬಂದರು ಕಚ್ಚಾ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಟ್ಯಾಂಕರ್‌ಗಳ ಸರಕು ಶುಲ್ಕವನ್ನು ಮನ್ನಾ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಒಂದು ಲಕ್ಷ ಟನ್ ಕಚ್ಚಾ ತೈಲಕ್ಕೆ, ಸರಕು ಶುಲ್ಕ ಸುಮಾರು ₹34 ಲಕ್ಷದಷ್ಟಾಗುತ್ತದೆ. ಆದಾಗ್ಯೂ, ಹಡಗು-ನಿರ್ವಹಣಾ ಶುಲ್ಕವನ್ನು ಸಂಗ್ರಹಿಸುವುದನ್ನು ಮುಂದುವರಿಸಲಾಗುತ್ತದೆ. 26,000 ಟನ್ LPG ಯೊಂದಿಗೆ ನ್ಯೂ ಮಂಗಳೂರು ಬಂದರಿಗೆ ಆಗಮಿಸಬೇಕಿದ್ದ LPG ಟ್ಯಾಂಕರ್ ಶಿವಾಲಿಕ್‌ಗೆ, ಬಂದರು ₹50 ಲಕ್ಷ ಸರಕು ಶುಲ್ಕವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.