ಇರಾಕ್‌ನಲ್ಲಿ US ಪಡೆ ತಂಗಿದ್ದ ಹೋಟೆಲ್ ಮೇಲೆ ಇರಾನ್ ಬೆಂಬಲಿತ ಗುಂಪು ದಾಳಿ!
ಎರ್ಬಿಲ್‌ನಲ್ಲಿರುವ ಹೋಟೆಲ್‌ನ ಮೇಲೆ ದಾಳಿಯ ಹೊಣೆಯನ್ನು ಇರಾಕಿನ ಸಶಸ್ತ್ರ ಗುಂಪು ಹೊತ್ತುಕೊಂಡಿದೆ. ಈ ಹೋಟೆಲ್ ನಲ್ಲಿ ಯುಎಸ್ ಪಡೆಗಳಿಗೆ ಆಶ್ರಯ ನೀಡಲಾಗಿತ್ತು ಎಂದು ಆರೋಪಿಸಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.

ಲೆಬನಾನ್: ಪಶ್ಚಿಮ ಏಷ್ಯಾದಾದ್ಯಂತ ಮಂಗಳವಾರವೂ ಉದ್ವಿಗ್ನತೆ ಮುಂದುವರೆದಿದೆ. ಇರಾಕ್, ಸೌದಿ ಅರೇಬಿಯಾ ಮತ್ತು ಲೆಬನಾನ್‌ನಲ್ಲಿ ಹಲವು ದಾಳಿಯ ಘಟನೆಗಳ ಬಗ್ಗೆ ವಿವಿಧ ಮಾಧ್ಯಮಗಳು ವರದಿ ಮಾಡಿವೆ.
ಎರ್ಬಿಲ್‌ನಲ್ಲಿರುವ ಹೋಟೆಲ್‌ನ ಮೇಲೆ ದಾಳಿಯ ಹೊಣೆಯನ್ನು ಇರಾಕಿನ ಸಶಸ್ತ್ರ ಗುಂಪು ಹೊತ್ತುಕೊಂಡಿದೆ. ಈ ಹೋಟೆಲ್ ನಲ್ಲಿ ಯುಎಸ್ ಪಡೆಗಳಿಗೆ ಆಶ್ರಯ ನೀಡಲಾಗಿತ್ತು ಎಂದು ಆರೋಪಿಸಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.
ಸೌದಿ ಅರೇಬಿಯಾದಲ್ಲಿ ರಿಯಾದ್ ಮತ್ತು ಅಲ್-ಖರ್ಜ್ ನಗರಗಳ ಬಳಿ ಎಂಟು ಡ್ರೋನ್‌ಗಳನ್ನು ತಡೆಹಿಡಿದು ನಾಶಪಡಿಸಲಾಗಿದೆ ಎಂದು ಸೌದಿ ರಕ್ಷಣಾ ಸಚಿವಾಲಯ ತಿಳಿಸಿರುವುದಾಗಿ ಅಲ್ ಅರೇಬಿಯಾ ಹೇಳಿದೆ. ಈ ಮಧ್ಯೆ ಲೆಬನಾನ್‌ನಲ್ಲಿ ಹಿಬ್ಜುಲಾ ಸಂಘಟನೆಯೊಂದಿಗೆ ಸೇರಿರುವ ಬ್ರಾಡ್‌ಕಾಸ್ಟರ್ ಅಲ್-ಮನಾರ್‌ನ ಪ್ರಧಾನ ಕಛೇರಿಯ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎಂದು IRNA ವರದಿ ಮಾಡಿದೆ.
ದಾಳಿಯಾದ ನಂತರ ಅಲ್-ಮನರ್ ತನ್ನ ಕಾರ್ಯಕ್ರಮಗಳ ಪ್ರಸಾರವನ್ನು ಪುನರಾರಂಭಿಸಿತು. ಇದಕ್ಕೂ ಮುನ್ನಾ ರಾತ್ರಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಗುಪ್ತಚರ ವಿಭಾಗದ ಮುಖ್ಯಸ್ಥನನ್ನು ಹತ್ಯೆಗೈಯಲಾಗಿದೆ. ಭಯೋತ್ಪಾದಕ ಗುಂಪಿನ ಮಿಲಿಟರಿ ಚಟುವಟಿಕೆಗಳನ್ನು ನಿಷೇಧಿಸುವುದಾಗಿ ಬೈರುತ್ ಹೇಳಿದೆ.
ಇಸ್ರೇಲ್ ರಕ್ಷಣಾ ಪಡೆಗಳು ಲೆಬನಾನಿನ ರಾಜಧಾನಿಯಲ್ಲಿ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹುಸೇನ್ ಮಕ್ಲೆಡ್ ನನ್ನು ಹತ್ಯೆ ಮಾಡಿವೆ. ಈತ ಹಿಜ್ಬುಲ್ಲಾ ಸಂಘಟನೆಯ ಗುಪ್ತಚರ ಪ್ರಧಾನ ಕಛೇರಿಯ ಮುಖ್ಯಸ್ಥ ಎನ್ನಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿದ ಹಗೆತನದ ನಡುವೆ ಈ ಬೆಳವಣಿಗೆಯಾಗಿದೆ. ಗಡಿಯಾಚೆಗಿನ ಉದ್ವಿಗ್ನ ಪರಿಸ್ಥಿತಿ ಮತ್ತು ವೈಮಾನಿಕ ದಾಳಿಗಳು ಈ ಪ್ರದೇಶದಲ್ಲಿ ಮತ್ತಷ್ಟು ಕಳವಳವನ್ನು ಹೆಚ್ಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



