ವಿದೇಶ

ಇರಾನ್ ಮಧ್ಯಂತರ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ನೇಮಕ! ಪ್ರತೀಕಾರದ ಶಪಥ

ಇರಾನ್ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಆಕ್ರಮಣಕಾರಿ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ರೆವೆಲ್ಯೂಷನರಿ ಗಾರ್ಡ್ಸ್ ಘೋಷಿಸಿದೆ.

ಇರಾನ್ ಮಧ್ಯಂತರ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ನೇಮಕ! ಪ್ರತೀಕಾರದ ಶಪಥ
ಅಲಿರೆಜಾ ಅರಾಫಿ
Published On :

ಟೆಹರಾನ್: ಇಸ್ರೇಲ್ ಹಾಗೂ ಅಮೆರಿಕದ ಜಂಟಿ ವೈಮಾನಿಕ ದಾಳಿಯಲ್ಲಿ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ.

ಇರಾನ್ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಆಕ್ರಮಣಕಾರಿ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ರೆವೆಲ್ಯೂಷನರಿ ಗಾರ್ಡ್ಸ್ ಘೋಷಿಸಿದೆ.

ಈ ನಡುವೆ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅಧಿಕಾರಕ್ಕೇರಲಿದ್ದಾರೆ ಎಂಬ ವದಂತಿಗಳ ನಡುವೆ ಗಾರ್ಡಿಯನ್ ಕೌನ್ಸಿಲ್ ನ ಧರ್ಮಗುರು ಅಯಾತೊಲ್ಲಾ ಅಲಿರೆಜಾ ಅರಾಫಿ ಅವರನ್ನು ಇರಾನ್ ನ ಮಧ್ಯಂತರ ಸರ್ವೋಚ್ಚ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್ ಹೊಸೇನ್ ಮೊಹ್ಸೆನಿ ಎಜೆಯ್ ಅವರಿಗೆ ಸರಿಸಮನಾದ ಹುದ್ದೆಯನ್ನು ಅರಾಫಿಗೂ ನೀಡಲಾಗಿದೆ. ಅಲಿರೇಜಾ ಅರಾಫಿ (67) ಇರಾನ್‌ನ ಧಾರ್ಮಿಕ ಮತ್ತು ರಾಜಕೀಯ ವಲಯದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ.

1959ರಲ್ಲಿ ಯಜ್ಡ್ ಪ್ರಾಂತ್ಯದಲ್ಲಿ ಜನಿಸಿದ ಇವರು, ಖಮೇನಿ ಅವರ ಅತ್ಯಂತ ವಿಶ್ವಾಸಾರ್ಹ ಆಪ್ತರಲ್ಲಿ ಒಬ್ಬರು. ಇವರು ಇರಾನ್ ಇರಾನ್‌ನಾದ್ಯಂತ ಇರುವ ಎಲ್ಲಾ ಇಸ್ಲಾಮಿಕ್ ಮದರಸಾಗಳ ಮುಖ್ಯಸ್ಥರಾಗಿದ್ದಾರೆ.

ಇದು ಇರಾನ್‌ನ ಧಾರ್ಮಿಕ ವಲಯದಲ್ಲಿ ಇವರಿಗಿರುವ ಅಗಾಧ ಶಕ್ತಿಯನ್ನು ತೋರಿಸುತ್ತದೆ.ಈ ಹಿಂದೆ ಇವರು 'ಅಲ್-ಮುಸ್ತಫಾ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ'ದ ಅಧ್ಯಕ್ಷರಾಗಿದ್ದರು.ಈ ಸಂಸ್ಥೆಯು ವಿಶ್ವದಾದ್ಯಂತ ಶಿಯಾ ಧರ್ಮ ಪ್ರಚಾರಕರನ್ನು ತಯಾರು ಮಾಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.