ಲಂಡನ್‌ನ ಐಷಾರಾಮಿ ಅಪಾರ್ಟ್ಮೆಂಟ್ನಿಂದ ಬಿದ್ದು ಭಾರತೀಯ ದಂಪತಿ, ಅವರ ಪುತ್ರ ಸಾವು!
ಮೃತ ದಂಪತಿಯನ್ನು 47 ವರ್ಷದ ರಾಕೇಶ್ ಪೈ, ಅವರ ಪತ್ನಿ ಅದಿತಿ ಪರಲ್ಕರ್(46) ಮತ್ತು ಅವರ ಮಗ ಸಿದ್ ಎಂದು ಗುರುತಿಸಲಾಗಿದೆ.

ಲಂಡನ್: ಲಂಡನ್‌ನ ಐಷಾರಾಮಿ ಅಪಾರ್ಟ್‌ಮೆಂಟ್ ಬ್ಲಾಕ್‌ನಿಂದ ಬಿದ್ದು ಭಾರತೀಯ ಮೂಲದ ದಂಪತಿ ಮತ್ತು ಅವರ 9 ವರ್ಷದ ಅಸ್ವಸ್ಥ ಮಗ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ವರದಿ ಮಾಡಿವೆ.
ಮೃತ ದಂಪತಿಯನ್ನು 47 ವರ್ಷದ ರಾಕೇಶ್ ಪೈ, ಅವರ ಪತ್ನಿ ಅದಿತಿ ಪರಲ್ಕರ್(46) ಮತ್ತು ಅವರ ಮಗ ಸಿದ್ ಎಂದು ಗುರುತಿಸಲಾಗಿದೆ.
ಮೇ 27 ರಂದು ದಕ್ಷಿಣ ಲಂಡನ್‌ನ ಎಲಿಫೆಂಟ್ ಮತ್ತು ಕ್ಯಾಸಲ್‌ನಲ್ಲಿರುವ ಹೈಪಾಯಿಂಟ್ ಟವರ್ ಬ್ಲಾಕ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನ 36ನೇ ಮಹಡಿಯಲ್ಲಿರುವ ಬಾಲ್ಕನಿಯಿಂದ ಬಿದ್ದು ಈ ಮೂವರು ಮೃತಪಟ್ಟಿದ್ದಾರೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಸಂಡೇ ಗಾರ್ಡಿಯನ್ ಪ್ರಕಾರ, ಈ ಕುಟುಂಬವು 45 ಅಂತಸ್ತಿನ ಕಟ್ಟಡದ 36ನೇ ಮಹಡಿಯಲ್ಲಿ ವಾಸಿಸುತ್ತಿತ್ತು.
ಸಿದ್ "ಗಂಭೀರ ಕಾಯಿಲೆಗಳಿಂದ" ಬಳಲುತ್ತಿದ್ದರು ಮತ್ತು ಅವರ "ಈ ಕಠಿಣ ನಿರ್ಧಾರಕ್ಕೆ" ಮಗನ ಸ್ಥಿತಿಯೇ ಕಾರಣ ಎಂದು ಪೊಲೀಸರು ನಂಬಿರುವುದಾಗಿ ಬರ್ಮೊಂಡ್ಸೆ ಮತ್ತು ಓಲ್ಡ್ ಸೌತ್‌ವಾರ್ಕ್‌ನ ಲೇಬರ್ ಸಂಸದ ನೀಲ್ ಕೊಯ್ಲ್ ಅವರು ಹೇಳಿದ್ದಾರೆ.
ಭಾರತದಲ್ಲಿ ಜನಿಸಿದ ಪೈ ಮತ್ತು ಪರಲ್ಕರ್ ಕ್ರಮವಾಗಿ ಹಣಕಾಸು ಮತ್ತು ನಿರ್ಮಾಣ ವ್ಯವಹಾರದಲ್ಲಿ ತೊಡಗಿದ್ದರು.
ಈ ದಂಪತಿ 2020 ರಲ್ಲಿ ಭಾರತದಲ್ಲಿ ತಮ್ಮ ಮಗನಿಗೆ ಚಿಕಿತ್ಸೆ ಪಡೆಯಲು ಪ್ರಯತ್ನಿಸಿದ್ದರು ಎಂದು ವರದಿಯಾಗಿದೆ. ಆದರೆ ಮಗನ ಆರೋಗ್ಯ ಸುಧಾರಿಸದ ಹಿನ್ನಲೆಯಲ್ಲಿ ಕಳೆದ ವರ್ಷ ಬ್ರಿಟನ್‌ಗೆ ಮರಳಿದ್ದರು.
ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ತನಿಖೆಯ ನಂತರವೇ ನಿಖರವಾಗಿ ಏನಾಯಿತು ಎಂಬುದು ತಿಳಿಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



