ವಿದೇಶ

ಒಂದು ನಿಮಿಷದಲ್ಲಿ 1 ಕೆಜಿಗಿಂತ ಹೆಚ್ಚು ಜೇನುತುಪ್ಪ ತಿಂದು, ವಿಶ್ವ ದಾಖಲೆ ನಿರ್ಮಿಸಿದ ಜರ್ಮನ್ ವ್ಯಕ್ತಿ!

ಆಂಡ್ರೆ ಓರ್ಟೋಲ್ಫ್ ವೇಗವಾಗಿ ತಿನ್ನುವುದಕ್ಕೆ ಮತ್ತು ಕುಡಿಯುವುದಕ್ಕೆ ಹೆಸರುವಾಸಿಯಾಗಿದ್ದಾರೆ.

ಒಂದು ನಿಮಿಷದಲ್ಲಿ 1 ಕೆಜಿಗಿಂತ ಹೆಚ್ಚು ಜೇನುತುಪ್ಪ ತಿಂದು, ವಿಶ್ವ ದಾಖಲೆ ನಿರ್ಮಿಸಿದ ಜರ್ಮನ್ ವ್ಯಕ್ತಿ!
ಜೇನುತುಪ್ಪತಿಂದು ವಿಶ್ವ ದಾಖಲೆ ನಿರ್ಮಿಸಿದ ಜರ್ಮನಿಯ ಆಂಡ್ರೆ
Published On :

ಆಗ್ಸ್‌ಬರ್ಗ್‌: ಹೆಚ್ಚಾಗಿ ತಿನ್ನುವ, ಕುಡಿಯುವ ವ್ಯಕ್ತಿಯೊಬ್ಬರು ತಮ್ಮ ದೀರ್ಘ ದಾಖಲೆಗಳ ಪಟ್ಟಿಗೆ ಮತ್ತೊಂದು ಸಾಧನೆಯನ್ನು ಸೇರಿಸಿದ್ದಾರೆ.

ಬವೇರಿಯಾದ ಆಗ್ಸ್‌ಬರ್ಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜರ್ಮನಿಯ ಆಂಡ್ರೆ ಓರ್ಟೋಲ್ಫ್ ಒಂದು ನಿಮಿಷದಲ್ಲಿ ಒಂದು ಕೆಜಿಗೂ ಅಧಿಕ ಜೇನುತುಪ್ಪ ತಿಂದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆ ವರದಿ ಮಾಡಿದೆ.

ಕೇವಲ 60 ಸೆಕೆಂಡುಗಳಲ್ಲಿ ಆಂಡ್ರೆ 1,273 ಗ್ರಾಂ ಅಥವಾ 44.91 ಔನ್ಸ್ ಜೇನುತುಪ್ಪವನ್ನು ಸೇವಿಸಿದ್ದಾರೆ. ಇದು ಅವರಿಗೆ ಒಂದು ನಿಮಿಷದಲ್ಲಿ ಹೆಚ್ಚು ಜೇನುತುಪ್ಪ ತಿಂದ ಬಿರುದನ್ನು ತಂದುಕೊಟ್ಟಿತು.

ಒಂದು ನಿಮಿಷದಲ್ಲಿ ಒಂದು ಕೆಜಿಗಿಂತ ಹೆಚ್ಚು ಜೇನುತುಪ್ಪವನ್ನು ಯಶಸ್ವಿಯಾಗಿ ತಿನ್ನುವ ಮೂಲಕ, ಆಂಡ್ರೆ ದಾಖಲೆ ಪುಸ್ತಕಗಳಲ್ಲಿ ಮತ್ತೊಂದು ಸ್ಥಾನವನ್ನು ಪಡೆದರು.

ಆಂಡ್ರೆ ಓರ್ಟೋಲ್ಫ್ ವೇಗವಾಗಿ ತಿನ್ನುವುದಕ್ಕೆ ಮತ್ತು ಕುಡಿಯುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚಿ ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಮೃದ್ಧ ದಾಖಲೆ ಮುರಿಯುವವರಾಗಿ ಖ್ಯಾತಿಯನ್ನು ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.