‘ಟ್ರಂಪ್ ಕೊಲ್ಲುತ್ತೇವೆ’: ಶವಪೆಟ್ಟಿಗೆಯಲ್ಲಿ ಅಮೆರಿಕ ಅಧ್ಯಕ್ಷರು ಮಲಗಿದ ಪೋಸ್ಟರ್ ಹಾಕಿ ಇರಾನ್ ರಣಕೇಕೆ!
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯ ಮೊದಲ ದಿನವೇ ಮೃತಪಟ್ಟ ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿದೆ.

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಇರಾನ್ ಸಂಚು ರೂಪಿಸಿದೆ ಎಂಬ ವರದಿಗಳ ನಡುವೆ, ಸೆಂಟ್ರಲ್ ಟೆಹ್ರಾನ್‌ನ ಎಂಘೆಲಾಬ್ ಸ್ಕ್ವೇರ್‌ನಲ್ಲಿ ದೈತ್ಯಾಕಾರದ ಕಾರ್ನರ್ ಜಾಹೀರಾತು ಫಲಕವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಟೆಹ್ರಾನ್‌ನ ಎಂಘೆಲಾಬ್ ಚೌಕದಲ್ಲಿ ಶವಪೆಟ್ಟಿಗೆಯಲ್ಲಿ ಅಮೆರಿಕ ಅಧ್ಯಕ್ಷರು ಮಲಗಿದ ದೈತ್ಯಾಕಾರದ ಪೋಸ್ಟರ್ ಅನ್ನು ಹಾಕಲಾಗಿದ್ದು, ಅದರ ಮೇಲೆ ‘ನಾವು ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುತ್ತೇವೆ’ ಎಂದು ಬರೆಯಲಾಗಿದ್ದು, ಈ ಪೋಸ್ಟರ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯ ಮೊದಲ ದಿನವೇ ಮೃತಪಟ್ಟ ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಹೇಳಿದ್ದು, ಯುದ್ಧ ಪ್ರಾರಂಭವಾದಾಗಿನಿಂದ ಟ್ರಂಪ್ ಅವರನ್ನೇ ಟಾರ್ಗೆಟ್ ಮಾಡಲಾಗಿದೆ.
ಇರಾನ್ ದೀರ್ಘಕಾಲದಿಂದ ಸಾರ್ವಜನಿಕ ಸ್ಥಳಗಳನ್ನು ರಾಜಕೀಯ ಸಂವಹನದ ಸಾಧನವಾಗಿ ಬಳಸಿಕೊಂಡು ಬಂದಿದೆ. ಆದರೆ ಫೆಬ್ರವರಿ ಅಂತ್ಯದಲ್ಲಿ ಅಮೆರಿಕ-ಇಸ್ರೇಲಿ ಪಡೆಗಳ ವಿರುದ್ಧ ಯುದ್ಧ ಪ್ರಾರಂಭವಾದಾಗಿನಿಂದ, ಕ್ರಾಂತಿಕಾರಿ ಚಿತ್ರಣ, ಯುದ್ಧ ಸ್ಮಾರಕಗಳು ಮತ್ತು ಸೈದ್ಧಾಂತಿಕ ಸಂದೇಶಗಳನ್ನು ಪ್ರತಿಬಿಂಬಿಸುವ ದೈತ್ಯ ಜಾಹೀರಾತು ಫಲಕಗಳನ್ನು ಇಸ್ಲಾಮಿಕ್ ಗಣರಾಜ್ಯದ ಹಲವು ಭಾಗಗಳಲ್ಲಿ ಅಳವಡಿಸಲಾಗಿದೆ.
ಇದೀಗ ಅಮೆರಿಕ ಅಧ್ಯಕ್ಷರು ಮಲಗಿದ ಶವಪೆಟ್ಟಿಗೆಯ ಹೊಸ ಹೋರ್ಡಿಂಗ್ ಹಾಕಲಾಗಿದೆ. ಚಿತ್ರದಲ್ಲಿ, ಟ್ರಂಪ್ ಅವರ ಕೂದಲು ಅಸ್ತವ್ಯಸ್ತವಾಗಿದ್ದು, ಅವರ ಕಣ್ಣುಗಳು ಮತ್ತು ಬಾಯಿ ಮುಚ್ಚಲಾಗಿದೆ. ಅವರ ಎರಡೂ ಕೈಗಳು ಹೊಟ್ಟೆಯ ಮೇಲಿದ್ದು, ಕೆಂಪು ಟೈ ಮೇಲೆ ವಿಶ್ರಾಂತಿ ಪಡೆಯುತ್ತಿವೆ.
ಶವಪೆಟ್ಟಿಗೆಯ ಮೇಲೆ ಪರ್ಷಿಯನ್ ಮತ್ತು ಇಂಗ್ಲಿಷ್ ಎರಡರಲ್ಲೂ "ವಿ ವಿಲ್ ಕಿಲ್ ಟ್ರಂಪ್" ಎಂದು ಬರೆಯುವ ಮೂಲಕ ಎಚ್ಚರಿಕೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



