ಹಣ ಸಾಗಿಸುತ್ತಿದ್ದ ಕಾರ್ಗೊ ವಿಮಾನ ಪತನ; 15 ಮಂದಿ ಸಾವು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ನೋಟುಗಳು, ಮುಗಿಬಿದ್ದ ಜನರು; Video
ವಿಮಾನವು ಲಾ ಪಾಸ್ಗೆ ಸಮೀಪದಲ್ಲಿರುವ ಎಲ್ ಅಲ್ಟೊ ನಗರದಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಹೊಲವೊಂದರಲ್ಲಿ ಬಿದ್ದಿರುವುದನ್ನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಸೂಚಿಸುತ್ತವೆ.

ಹಣವನ್ನು ಸಾಗಿಸುತ್ತಿದ್ದ ಸರಕು ವಿಮಾನವು ಭಾರತೀಯ ಕಾಲಮಾನ ನಿನ್ನೆ ಶುಕ್ರವಾರ ಸಂಜೆ ಬೊಲಿವಿಯಾದ ರಾಜಧಾನಿ ಸಮೀಪ ಪತನಗೊಂಡು, ಹೆದ್ದಾರಿಯಲ್ಲಿ ಸುಮಾರು ಹನ್ನೆರಡು ವಾಹನಗಳಿಗೆ ಹಾನಿ ಉಂಟುಮಾಡಿತು. ವಿಮಾನದಲ್ಲಿದ್ದ ನೋಟುಗಳಲ್ಲಾ ನೆಲದ ಮೇಲೆ ಚದುರಿ ಬಿದ್ದಿದ್ದು, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
ವಿಮಾನ ಬಿದ್ದ ರಭಸಕ್ಕೆ ಅದರಲ್ಲಿದ್ದ ಕಂತೆ ಕಂತೆ ನೋಟುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದನ್ನು ಕಂಡ ಜನ ಹಣವನ್ನು ಬಾಚಿಕೊಳ್ಳಲು ಮುಗಿಬಿದ್ದ ಪ್ರಸಂಗವೂ ನಡೆದಿದೆ.
ಘಟನೆಯ ವಿವರ
ಬೊಲಿವಿಯಾದ ರಾಜಧಾನಿ ಲಾ ಪಾಜ್ ಪಕ್ಕದಲ್ಲಿರುವ ಎಲ್ ಆಲ್ಟೊ (El Alto) ವಿಮಾನ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದೆ. ಬೊಲಿವಿಯಾ ವಾಯುಪಡೆಗೆ ಸೇರಿದ ಹರ್ಕ್ಯುಲಸ್ ಸಿ-130 (Hercules C-130) ವಿಮಾನವು ಹೊಸದಾಗಿ ಮುದ್ರಿಸಲಾದ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿತ್ತು.
ವಿಮಾನವು ಲ್ಯಾಂಡಿಂಗ್ ಆಗುವಾಗ ನಿಯಂತ್ರಣ ತಪ್ಪಿ ರನ್ವೇಯಿಂದ ಜಾರಿ, ಪಕ್ಕದ ರಸ್ತೆಗೆ ನುಗ್ಗಿದೆ. ಅಲ್ಲಿ ಸಂಚರಿಸುತ್ತಿದ್ದ ಸುಮಾರು 15ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲೇ ಭೀಕರ ವಾತಾವರಣ ನಿರ್ಮಾಣವಾಗಿತ್ತು.
ವಿಮಾನವು ಲಾ ಪಾಸ್ಗೆ ಸಮೀಪದಲ್ಲಿರುವ ಎಲ್ ಅಲ್ಟೊ ನಗರದಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಹೊಲವೊಂದರಲ್ಲಿ ಬಿದ್ದಿರುವುದನ್ನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಸೂಚಿಸುತ್ತವೆ. ವಿಮಾನ ಪತನಗೊಳ್ಳುವ ಸಂದರ್ಭದಲ್ಲಿ ಅದು ಹಾರಾಟ ಆರಂಭಿಸುತ್ತಿತ್ತೋ ಅಥವಾ ಇಳಿಯುತ್ತಿದ್ದಿತ್ತೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ವಿಮಾನದ ಅವಶೇಷಗಳು, ಧ್ವಂಸಗೊಂಡ ಕಾರುಗಳು ಹಾಗೂ ಮೃತದೇಹಗಳು ರಸ್ತೆಯಲ್ಲೇ ಬಿದ್ದಿವೆ. ಟೋವಾರ್ ಅವರ ಪ್ರಕಾರ ಕನಿಷ್ಠ 15 ವಾಹನಗಳು ಹಾನಿಗೀಡಾಗಿವೆ. ಅಗ್ನಿಶಾಮಕ ಸಿಬ್ಬಂದಿ ವಿಮಾನವನ್ನು ಆವರಿಸಿದ್ದ ಬೆಂಕಿಯನ್ನು ನಂದಿಸಲು ಯಶಸ್ವಿಯಾದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಚಿತ್ರಗಳಲ್ಲಿ ಜನರು ಚದುರಿದ ನೋಟುಗಳನ್ನು ಸಂಗ್ರಹಿಸಲು ಧಾವಿಸುತ್ತಿರುವುದು ಹಾಗೂ ಗಲಭೆ ನಿಯಂತ್ರಣ ಸಜ್ಜಿನಲ್ಲಿ ಇದ್ದ ಪೊಲೀಸರು ಅವರನ್ನು ಚದುರಿಸಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


