ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ
ಈ ಪೋಟೋವನ್ನು 2006 ರಲ್ಲಿ ಸೇಂಟ್ ಥಾಮಸ್‌ನ ರಿಟ್ಜ್-ಕಾರ್ಲ್‌ಟನ್ ಹೋಟೆಲ್‌ನಲ್ಲಿ ನಡೆದ ವಿಜ್ಞಾನ ವಿಚಾರ ಸಂಕಿರಣದಲ್ಲಿ ತೆಗೆದದ್ದು ಎನ್ನಲಾಗಿದೆ. ಅಲ್ಲಿ ಹಾಕಿಂಗ್ ಅವರು ಕ್ವಾಂಟಮ್ ವಿಶ್ವವಿಜ್ಞಾನದ ಕುರಿತು ಭಾಷಣ ಮಾಡಿದ್ದರು.

ವಾಷಿಂಗ್ಟನ್: ಜೆಫ್ರಿ ಎಪ್ಸ್ಟೀನ್ ಫೈಲ್‌ಗಳ ಫೋಟೋಗಳಲ್ಲಿ ದಿವಂಗತ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅವರ ಎರಡೂ ಬದಿಗಳಲ್ಲಿ ಬಿಕಿನಿ ಧರಿಸಿದ ಇಬ್ಬರು ಮಹಿಳೆಯರು ಕಾಣಿಸಿಕೊಂಡಿದ್ದಾರೆ.
ಕೈಯಲ್ಲಿ ಕಾಕ್‌ಟೇಲ್ ಹಿಡಿದುಕೊಂಡು ಸನ್ ಲೌಂಜರ್ ಮೇಲೆ ಒರಗಿಕೊಂಡಿರುವ ಬ್ರಿಟಿಷ್ ಸೈದ್ಧಾಂತಿಕ ಭೌತಶಾಸ್ತ್ರಜ್ಞರನ್ನು ಅವರ ದೀರ್ಘಕಾಲೀನ ಆರೈಕೆದಾರರಾಗಿದ್ದ ಮಹಿಳೆಯರಲ್ಲಿ ಒಬ್ಬರು ಕೆಳಗೆ ಬೀಳದಂತೆ ನೋಡಿಕೊಳ್ಳುತ್ತಿರುವುದು ಕಂಡುಬಂದಿದೆ. ಅವರಿಗೆ ಎಲ್ಲಾ ವೇಳೆಯಲ್ಲೂ ವೈದ್ಯಕೀಯ ಬೆಂಬಲದ ಅಗತ್ಯವಿತ್ತು ಎಂದು ಸುದ್ದಿಸಂಸ್ಥೆ 'ದಿ ಇಂಡಿಪೆಂಡೆಂಟ್' ವರದಿ ಮಾಡಿದೆ.
ಈ ಪೋಟೋವನ್ನು 2006 ರಲ್ಲಿ ಸೇಂಟ್ ಥಾಮಸ್‌ನ ರಿಟ್ಜ್-ಕಾರ್ಲ್‌ಟನ್ ಹೋಟೆಲ್‌ನಲ್ಲಿ ನಡೆದ ವಿಜ್ಞಾನ ವಿಚಾರ ಸಂಕಿರಣದಲ್ಲಿ ತೆಗೆದದ್ದು ಎನ್ನಲಾಗಿದೆ. ಅಲ್ಲಿ ಹಾಕಿಂಗ್ ಅವರು ಕ್ವಾಂಟಮ್ ವಿಶ್ವವಿಜ್ಞಾನದ ಕುರಿತು ಭಾಷಣ ಮಾಡಿದ್ದರು.
ಈವೆಂಟ್‌ಗಾಗಿ ಸೇಂಟ್ ಥಾಮಸ್ ಮತ್ತು ಎಪ್ಸ್ಟೀನ್‌ನ 75 ಎಕರೆ ಖಾಸಗಿ ದ್ವೀಪವಾದ ಲಿಟಲ್ ಸೇಂಟ್ ಜೇಮ್ಸ್‌ಗೆ ಭೇಟಿ ನೀಡಿದ 21 ವಿಜ್ಞಾನಿಗಳಲ್ಲಿ ಸ್ಟೀಫನ್ ಹಾಕಿಂಗ್ ಒಬ್ಬರಾಗಿದ್ದಾರೆ.
ಈ ಫೋಟೋ ಬಿಡುಗಡೆ ಬೆನ್ನಲ್ಲೇ ಅವರ ಕುಟುಂಬದವರು ಪ್ರತಿಕ್ರಿಯಿಸಿದ್ದು, ಈ ಇಬ್ಬರು ಮಹಿಳೆಯರು ದಿವಂಗತ ವಿಜ್ಞಾನಿಯ ದೀರ್ಘಾವಧಿಯ ಆರೈಕೆದಾರರು" ಎಂದು ಹೇಳಿದ್ದಾರೆ. ಅವರ ಕಡೆಯಿಂದ ಯಾವುದೇ ರೀತಿಯ ಅನುಚಿತ ವರ್ತನೆಯಾಗಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.
US ನ್ಯಾಯಾಂಗ ಇಲಾಖೆಯ ಎಪ್ಸ್ಟೀನ್ ಕಡತಗಳ ಸಂಗ್ರಹದಲ್ಲಿ ಹಾಕಿಂಗ್ 250 ಬಾರಿ ಉಲ್ಲೇಖಿಸಲ್ಪಟ್ಟಿದ್ದಾರೆ. ದಿನಾಂಕವಿಲ್ಲದ ಫೋಟೋದಲ್ಲಿ ಇಬ್ಬರು ಅಪರಿಚಿತ ಮಹಿಳೆಯರ ನಡುವೆ ಗಾಜನ್ನು ಹಿಡಿದಿಟ್ಟುಕೊಂಡು ನಗುತ್ತಿರುವುದನ್ನು ಕಾಣಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



