ವಿದೇಶ

ಸರ್ವಾಧಿಕಾರಿ ಖಮೇನಿ ವಿರುದ್ಧ ಮತ್ತೆ ಭುಗಿಲೆದ್ದ ಪ್ರತಿಭಟನೆ: ಇರಾನ್ ಬೀದಿಗಿಳಿದ ವಿದ್ಯಾರ್ಥಿಗಳು; ಟ್ರಂಪ್ ದಾಳಿಗೆ ಮುಹೂರ್ತ ಫಿಕ್ಸ್?

ಇರಾನ್‌ನಲ್ಲಿ ಪರಿಸ್ಥಿತಿ ಮತ್ತೊಮ್ಮೆ ಹದಗೆಡುತ್ತಿರುವಂತೆ ಕಾಣುತ್ತಿದೆ. ಕಳೆದ ತಿಂಗಳ ಮಾರಕ ಹಿಂಸಾಚಾರ ಮತ್ತು ಸಾವುಗಳ ನಂತರ ಇದೀಗ ಹಲವಾರು ಪ್ರಮುಖ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಸರ್ವಾಧಿಕಾರಿ ಖಮೇನಿ ವಿರುದ್ಧ ಮತ್ತೆ ಭುಗಿಲೆದ್ದ ಪ್ರತಿಭಟನೆ: ಇರಾನ್ ಬೀದಿಗಿಳಿದ ವಿದ್ಯಾರ್ಥಿಗಳು; ಟ್ರಂಪ್ ದಾಳಿಗೆ ಮುಹೂರ್ತ ಫಿಕ್ಸ್?
ಸಂಗ್ರಹ ಚಿತ್ರ
Published On :

ಇರಾನ್‌ನಲ್ಲಿ ಪರಿಸ್ಥಿತಿ ಮತ್ತೊಮ್ಮೆ ಹದಗೆಡುತ್ತಿರುವಂತೆ ಕಾಣುತ್ತಿದೆ. ಕಳೆದ ತಿಂಗಳ ಮಾರಕ ಹಿಂಸಾಚಾರ ಮತ್ತು ಸಾವುಗಳ ನಂತರ ಇದೀಗ ಹಲವಾರು ಪ್ರಮುಖ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ಸೆಮಿಸ್ಟರ್ ಪ್ರಾರಂಭವಾಗುತ್ತಿದ್ದಂತೆ ಟೆಹ್ರಾನ್‌ನ ಷರೀಫ್ ತಂತ್ರಜ್ಞಾನ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಕ್ಯಾಂಪಸ್‌ಗಳಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ.

ಶರೀಫ್ ವಿಶ್ವವಿದ್ಯಾಲಯದಲ್ಲಿ ನೂರಾರು ವಿದ್ಯಾರ್ಥಿಗಳು ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದರು. ಆದರೆ ಶೀಘ್ರದಲ್ಲೇ ಉದ್ವಿಗ್ನತೆ ಹೆಚ್ಚಾಯಿತು. ಪ್ರತಿಭಟನಾಕಾರ ವಿದ್ಯಾರ್ಥಿಗಳು 'ಸರ್ವಾಧಿಕಾರಿಗೆ ಕಿಕ್ ಔಟ್' ಎಂದು ಘೋಷಣೆ ಕೂಗುತ್ತಿದ್ದಾರೆ. ಇದು ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ನೇರವಾಗಿ ಉಲ್ಲೇಖಿಸುತ್ತದೆ. ವೀಡಿಯೊ ದೃಶ್ಯಗಳಲ್ಲಿ ಸರ್ಕಾರಿ ಪರ ಗುಂಪು ಸಹ ಪ್ರತಿಭಟನೆ ನಡೆಸಿದ್ದು ಇದು ಎರಡೂ ಕಡೆಯ ನಡುವೆ ಹಿಂಸಾತ್ಮಕ ಘರ್ಷಣೆಗಳು ಮತ್ತು ಹಿಂಸಾಚಾರಕ್ಕೆ ಕಾರಣವಾಯಿತು. ಟೆಹ್ರಾನ್‌ನಲ್ಲಿ ಮಾತ್ರವಲ್ಲದೆ ಇರಾನ್‌ನ ಎರಡನೇ ಅತಿದೊಡ್ಡ ನಗರವಾದ ಮಶ್ಹಾದ್‌ನಲ್ಲಿಯೂ ವಿದ್ಯಾರ್ಥಿಗಳು ಬೀದಿಗಿಳಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು 'ಸ್ವಾತಂತ್ರ್ಯ, ಸ್ವಾತಂತ್ರ್ಯ' ಎಂದು ಘೋಷಣೆ ಕೂಗುತ್ತಿದ್ದಾರೆ.

ಕಳೆದ ವರ್ಷ ಡಿಸೆಂಬರ್ ಮತ್ತು ಈ ವರ್ಷದ ಜನವರಿಯಲ್ಲಿ ನಡೆದ ಪ್ರತಿಭಟನೆಗಳು ಇತ್ತೀಚಿನ ಪ್ರತಿಭಟನೆಗೆ ಬುನಾದಿಯಾಗಿದೆ. ಆರಂಭದಲ್ಲಿ, ಕಳಪೆ ಆರ್ಥಿಕತೆ ಮತ್ತು ಹಣದುಬ್ಬರವನ್ನು ಪ್ರತಿಭಟಿಸಲು ಜನರು ಬೀದಿಗಿಳಿದಿದ್ದರು. ಆದರೆ ಕ್ರಮೇಣ ಈ ಚಳುವಳಿಯು ಇಡೀ ಸರ್ಕಾರದ ಬದಲಾವಣೆಯ ಬೇಡಿಕೆಯಾಗಿ ವಿಕಸನಗೊಂಡಿತು. 1979ರ ಕ್ರಾಂತಿಯ ನಂತರದ ಅತಿದೊಡ್ಡ ಚಳುವಳಿ ಇದಾಗಿದೆ.

ಕಳೆದ ಭಾರೀ ನಡೆದಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಸರ್ಕಾರ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ 92 ಮಕ್ಕಳು ಸೇರಿದಂತೆ ಇಲ್ಲಿಯವರೆಗೆ 6,159 ಸಾವುಗಳು ದೃಢಪಟ್ಟಿವೆ. ಸುಮಾರು 17,000 ಇತರ ಸಾವುಗಳ ವರದಿಗಳನ್ನು ಸಹ ಸಂಸ್ಥೆ ತನಿಖೆ ಮಾಡುತ್ತಿದೆ. ಆದರೆ ಇರಾನ್ ಸರ್ಕಾರ ಮಾತ್ರ 3,100 ಜನರು ಮಾತರ್ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಅವರಲ್ಲಿ ಹೆಚ್ಚಿನವರು ಭದ್ರತಾ ಸಿಬ್ಬಂದಿ ಅಥವಾ ಗಲಭೆಕೋರರಿಂದ ಗುರಿಯಾದ ನಾಗರಿಕರು ಎಂದು ಹೇಳುತ್ತಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಪರಮಾಣು ಕಾರ್ಯಕ್ರಮದ ಕುರಿತು ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಈ ಪ್ರತಿಭಟನೆಗಳು ನಡೆಯುತ್ತಿವೆ. ಮುಂದಿನ 10-15 ದಿನಗಳಲ್ಲಿ ಒಪ್ಪಂದಕ್ಕೆ ಬರದಿದ್ದರೆ ಅಮೆರಿಕ ಮಿಲಿಟರಿ ಕಾರ್ಯಾಚರಣೆಗೆ ಇಳಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದರು. ಅಮೆರಿಕ ತನ್ನ ವಿಮಾನವಾಹಕ ನೌಕೆಗಳಾದ ಯುಎಸ್ಎಸ್ ಅಬ್ರಹಾಂ ಲಿಂಕನ್ ಮತ್ತು ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ಅನ್ನು ಮಧ್ಯಪ್ರಾಚ್ಯದಲ್ಲಿ ತಂದು ನಿಲ್ಲಿಸಿದೆ. ಈ ಮಧ್ಯೆ ಒಮಾನ್ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯುತ್ತಿವೆ. ಆದರೆ ಯುರೇನಿಯಂ ಪುಷ್ಟೀಕರಣದ ವಿಷಯವು ಬಗೆಹರಿಯದೆ ಉಳಿದಿದೆ. ಈ ಬಾರಿ ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ನಲ್ಲಿ ರೇಜಿಮ್ ಬದಲಾಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.