'ನನಗೆ ಯುವ, ಸುಂದರ ಪುರುಷರು ಇಷ್ಟವಿಲ್ಲ, ಮಹಿಳೆಯರು ಇಷ್ಟ': ಶಾಂತಿ ಮಂಡಳಿ ಸಭೆಯಲ್ಲಿ Donald Trump
ವಾಷಿಂಗ್ಟನ್‌ನಲ್ಲಿ ನಡೆದ ಸಭೆಯಲ್ಲಿ ಸ್ಯಾಂಟಿಯಾಗೊ ಪೇನಾ ಅವರನ್ನು ಸ್ವಾಗತಿಸುವಾಗ ಟ್ರಂಪ್ ತಮ್ಮ ಭಾಷಣದ ನಿಗದಿತ ಮಾತುಗಳಿಂದ ಹೊರಬಂದು ಸಾದಾಸೀದವಾಗಿ ಮಾತನಾಡಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಹೊಸ Board of Peace ನ್ನು ಉದ್ಘಾಟಿಸುವ ವೇಳೆ, ಗಾಜಾ ಪುನರ್‌ನಿರ್ಮಾಣಕ್ಕೆ ಬಿಲಿಯನ್‌ಗಳಷ್ಟು ನೆರವು ಘೋಷಿಸುವ ಜೊತೆಗೆ, ಪ್ಯಾರಾಗ್ವೆ ಅಧ್ಯಕ್ಷ ಸ್ಯಾಂಟಿಯಾಗೊ ಪೇನಾ ಅವರನ್ನು ಉದ್ದೇಶಿಸಿ ಮಾಡಿದ ಅನೌಪಚಾರಿಕ ಹಾಸ್ಯ ಮಾತುಗಳು ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದ್ದು ವಿಡಿಯೊ ವೈರಲ್ ಆಗಿದೆ.
ವಾಷಿಂಗ್ಟನ್‌ನಲ್ಲಿ ನಡೆದ ಸಭೆಯಲ್ಲಿ ಸ್ಯಾಂಟಿಯಾಗೊ ಪೇನಾ ಅವರನ್ನು ಸ್ವಾಗತಿಸುವಾಗ ಟ್ರಂಪ್ ತಮ್ಮ ಭಾಷಣದ ನಿಗದಿತ ಮಾತುಗಳಿಂದ ಹೊರಬಂದು ಸಾದಾಸೀದವಾಗಿ ಮಾತನಾಡಿದರು. ಯುವಕರಂತೆ ಸುಂದರವಾಗಿರುವುದು ಯಾವಾಗಲೂ ಚೆನ್ನಾಗಿದೆ. ಆದರೆ ಅದರಿಂದ ನಾವು ನಿಮಗೆ ಇಷ್ಟಪಡಲೇಬೇಕು ಎಂದಲ್ಲ. ನನಗೆ ಯುವ, ಸುಂದರ ಪುರುಷರು ಇಷ್ಟವಿಲ್ಲ. ಮಹಿಳೆಯರು — ನನಗೆ ಇಷ್ಟ. ಪುರುಷರಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಟ್ರಂಪ್ ಹೇಳಿದಾಗ ಸಭೆಯಲ್ಲಿ ನಗೆಯ ಬುಗ್ಗೆ ಹರಿಯಿತು.
47 ವರ್ಷದ ಪೇನಾ, ಪ್ಯಾರಾಗ್ವೆಯ ಪ್ರಜಾಸತ್ತಾತ್ಮಕ ಯುಗದ ಅತಿ ಕಿರಿಯ ಅಧ್ಯಕ್ಷರಾಗಿದ್ದಾರೆ. ಅವರು ಆರ್ಥಿಕ ತಜ್ಞರಾಗಿದ್ದು, ಮಾಜಿ ಹಣಕಾಸು ಸಚಿವರೂ ಆಗಿದ್ದಾರೆ. 2023ರ ಆಗಸ್ಟ್‌ನಲ್ಲಿ ಕೊಲೊರಾಡೊ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ಅಧಿಕಾರ ವಹಿಸಿಕೊಂಡರು.
ಗಾಜಾ ನೆರವು ಮತ್ತು ದೊಡ್ಡ ಭರವಸೆಗಳು
ಈ ಹಾಸ್ಯದ ಕ್ಷಣದ ಹೊರತಾಗಿ, ಟ್ರಂಪ್ ಕಾರ್ಯಕ್ರಮದಲ್ಲಿ ಬೋರ್ಡ್ ಆಫ್ ಪೀಸ್‌ನ ತಕ್ಷಣದ ಗಮನ ಗಾಜಾ ಮೇಲೆಯೇ ಇರುತ್ತದೆ ಎಂದು ತಿಳಿಸಿದರು.
ನಾವು ಗಾಜಾಗೆ ಸಹಾಯ ಮಾಡುತ್ತೇವೆ. ಅಲ್ಲಿನ ಪರಿಸ್ಥಿತಿ ಸರಿಪಡಿಸುತ್ತೇವೆ. ಅದನ್ನು ಯಶಸ್ವಿಗೊಳಿಸುತ್ತೇವೆ ಎಂದು ಟ್ರಂಪ್ ಹೇಳಿದರು. ಈ ವೇಳೆ “YMCA” ಹಾಡಿನ ಹಿನ್ನೆಲೆ ಸಂಗೀತ ಕೇಳಿಬರುತ್ತಿತ್ತು.
ಅಮೆರಿಕವು ಈ ಯೋಜನೆಗೆ 10 ಬಿಲಿಯನ್ ಡಾಲರ್ ನೀಡುವುದಾಗಿ ಟ್ರಂಪ್ ಘೋಷಿಸಿದರು. ವೈಟ್ ಹೌಸ್ ಪ್ರಕಾರ, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರತ್ಯೇಕವಾಗಿ ಕನಿಷ್ಠ 1 ಬಿಲಿಯನ್ ಡಾಲರ್ ನೀಡಲು ಒಪ್ಪಿಕೊಂಡಿವೆ. ಪ್ರೆಸ್ ಕಾರ್ಯದರ್ಶಿ ಕರೋಲೈನ್ ಲೆವಿಟ್ ಪ್ರಕಾರ, ಒಟ್ಟು 6.5 ಬಿಲಿಯನ್ ಡಾಲರ್‌ಗಿಂತ ಹೆಚ್ಚು ನೆರವು ಈಗಾಗಲೇ ಘೋಷಿಸಲಾಗಿದೆ (ಇದರಲ್ಲಿ ಟ್ರಂಪ್ ಘೋಷಿಸಿದ 10 ಬಿಲಿಯನ್ ಸೇರಿರದಿರಬಹುದು).
ಶತಮಾನಗಳ ಯುದ್ಧ ಮತ್ತು ದುಃಖದಿಂದ ಬಳಲುತ್ತಿರುವ ಪ್ರದೇಶಕ್ಕೆ ಶಾಶ್ವತ ಶಾಂತಿಯನ್ನು ತರುವ ಕನಸನ್ನು ನಾವು ಒಟ್ಟಾಗಿ ಸಾಧಿಸಬಹುದು ಎಂದು ಟ್ರಂಪ್ ಹೇಳಿದರು.
ಹೊಸ ಜಾಗತಿಕ ಸಂಸ್ಥೆ
ಬೋರ್ಡ್ ಆಫ್ ಪೀಸ್ ನ್ನು ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್‌ನ ಹಳೆಯ ಮುಖ್ಯ ಕಚೇರಿಯಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಯಿತು. ಈ ಸಂಸ್ಥೆಯನ್ನು ಪುನರ್‌ರಚಿಸಿ ಹೊಸ ಹೆಸರಿನಲ್ಲಿ ಆರಂಭಿಸಲಾಗಿದೆ.
ಈ ಮಂಡಳಿಯ ಮೇಲೆ ಅಧ್ಯಕ್ಷರಿಗೆ ವೀಟೋ ಅಧಿಕಾರ ಇರುತ್ತದೆ. ಅವರು ಅಧಿಕಾರದಿಂದ ಹೊರಬಂದ ನಂತರವೂ ಇದರ ಮುಖ್ಯಸ್ಥರಾಗಿರಬಹುದು. ಎರಡು ವರ್ಷದ ಅವಧಿಗೆ ಮೀರಿದ ಶಾಶ್ವತ ಸದಸ್ಯತ್ವ ಪಡೆಯಲು ಬಯಸುವ ದೇಶಗಳು 1 ಬಿಲಿಯನ್ ಡಾಲರ್ ಕೊಡುಗೆ ನೀಡಬೇಕಾಗುತ್ತದೆ.
ಈ ಮಂಡಳಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಎರಡು ವರ್ಷಗಳ ಯುದ್ಧದ ನಂತರ, ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಗಾಜಾ ಯುದ್ಧ ವಿರಾಮ ಒಪ್ಪಂದದಿಂದ ಹುಟ್ಟಿಕೊಂಡಿದೆ. ಯೋಜನೆಯ ಎರಡನೇ ಹಂತದಲ್ಲಿ ಹಮಾಸ್ ನ್ನು ನಿರಾಯುಧಗೊಳಿಸುವುದನ್ನೂ ಒಳಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



