ಕಿಮ್ ಪಟ್ಟಕ್ಕಾಗಿ ಪುತ್ರಿ, ಸಹೋದರಿ ನಡುವೆ ಜಟಾಪಟಿ: ಉತ್ತರ ಕೊರಿಯಾ ಸರ್ವಾಧಿಕಾರಕ್ಕಾಗಿ ಅತ್ತೆ-ಸೊಸೆ ಫೈಟ್?
ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ತಮ್ಮ ಮಗಳು ಕಿಮ್ ಜು ಆಯೆ ಅವರನ್ನು ಅಧಿಕೃತವಾಗಿ ಉತ್ತರಾಧಿಕಾರಿ ಸ್ಥಾನಕ್ಕೆ ತರುತ್ತಿರುವುದು, ಕಿಮ್ ಅವರ ಪ್ರಭಾವಿ ತಂಗಿ ಕಿಮ್ ಯೋ ಜೊಂಗ್ ಅವರ ಕೆಂಗಣ್ಣಿಗೆ ಗುರಿಯಾಗಿದೆ.

ಪ್ಯೋಂಗ್‌ಯಾಂಗ್: ವಿಶ್ವದ ಅತ್ಯಂತ ನಿಗೂಢ ರಾಷ್ಟ್ರ ಉತ್ತರ ಕೊರಿಯಾದಲ್ಲಿ ಈಗ ಅಧಿಕಾರ ಹಸ್ತಾಂತರದ ಕಿಡಿ ಹೊತ್ತಿಕೊಂಡಿದೆ.
ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ತಮ್ಮ ಮಗಳು ಕಿಮ್ ಜು ಆಯೆ ಅವರನ್ನು ಅಧಿಕೃತವಾಗಿ ಉತ್ತರಾಧಿಕಾರಿ ಸ್ಥಾನಕ್ಕೆ ತರುತ್ತಿರುವುದು, ಕಿಮ್ ಅವರ ಪ್ರಭಾವಿ ತಂಗಿ ಕಿಮ್ ಯೋ ಜೊಂಗ್ ಅವರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಅಂತಾರಾಷ್ಟ್ರೀಯ ಗುಪ್ತಚರ ವರದಿಗಳು ಎಚ್ಚರಿಸಿವೆ.
ಫೆಬ್ರವರಿ 12 ರಂದು ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸಂಸ್ಥೆ ಮಹತ್ವದ ವರದಿಯನ್ನು ಬಿಡುಗಡೆ ಮಾಡಿದೆ. ಸುಮಾರು 13 ವರ್ಷದ ಕಿಮ್ ಜು ಆಯೆ ಈಗ ಕೇವಲ ತರಬೇತಿ ಹಂತದಲ್ಲಿ ಇಲ್ಲ. ಬದಲಿಗೆ ಆಕೆಯನ್ನು ನಿಯೋಜಿತ ಉತ್ತರಾಧಿಕಾರಿ ಹಂತಕ್ಕೆ ಏರಿಸಲಾಗಿದೆ ಎಂದು ವರದಿ ಹೇಳಿದೆ. ಇತ್ತೀಚಿನ ಕ್ಷಿಪಣಿ ಪರೀಕ್ಷೆಗಳು, ಮಿಲಿಟರಿ ಪರೇಡ್‌ಗಳು ಮತ್ತು ಚೀನಾ ಅಧ್ಯಕ್ಷರ ಜೊತೆಗಿನ ಭೇಟಿಯಲ್ಲೂ ಕಿಮ್ ತನ್ನ ಮಗಳನ್ನು ಜೊತೆಗೆ ಇರಿಸಿಕೊಂಡಿರುವುದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಈ ಮೂಲಕ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಹೋದರಿ ಕಿಮ್ ಯೋ-ಜಾಂಗ್‌ಗೆ ನಿರಾಸೆಯಾಗಿದೆ ಎನ್ನಲಾಗಿದೆ. ಕಿಮ್ ಯೋ ಜೊಂಗ್ ಗೆ ಉತ್ತರ ಕೊರಿಯಾದ ಸೇನೆ ಮತ್ತು ಕಮ್ಯುನಿಸ್ಟ್ ಪಕ್ಷದಲ್ಲಿ ದೊಡ್ಡ ಬೆಂಬಲವಿದೆ. ಆಕೆ ಈ ದೇಶದ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.
ಈಗ ಕಿಮ್ ತನ್ನ ಮಗಳನ್ನು ಮುಂದಕ್ಕೆ ತರುತ್ತಿರುವುದು ಕಿಮ್ ಯೋ ಜೊಂಗ್ ಅವರ ರಾಜಕೀಯ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಬಹುದು. ಬ್ರಿಟಿಷ್ ಮಾಧ್ಯಮ ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಕಿಮ್ ಜೊಂಗ್ ಉನ್ ಅವರ ಆರೋಗ್ಯದಲ್ಲಿ ಏರುಪೇರಾದರೆ, ಅಧಿಕಾರಕ್ಕಾಗಿ ಅತ್ತೆ ಮತ್ತು ಸೊಸೆಯ ನಡುವೆ ತೀವ್ರ ಹೋರಾಟ ನಡೆಯುವ ಸಾಧ್ಯತೆಯಿದೆ.
ಈ ತಿಂಗಳ ಅಂತ್ಯದಲ್ಲಿ ಉತ್ತರ ಕೊರಿಯಾದಲ್ಲಿ ಬೃಹತ್ ಪಾರ್ಟಿ ಕಾಂಗ್ರೆಸ್ ಸಮಾವೇಶದಲ್ಲಿ ಕಿಮ್ ಜು ಆಯೆಗೆ ಯಾವುದಾದರೂ ಮಿಲಿಟರಿ ಅಥವಾ ರಾಜಕೀಯ ಪದವಿ ನೀಡಲಾಗುತ್ತದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ. ಒಂದು ವೇಳೆ ಮಗಳಿಗೆ ಹೆಚ್ಚಿನ ಅಧಿಕಾರ ನೀಡಿದರೆ, ಅದು ಕಿಮ್ ಯೋ ಜೊಂಗ್ ಅವರ ಆಕ್ರೋಶಕ್ಕೆ ಕಾರಣವಾಗುವುದು ಖಚಿತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



