ವಿದೇಶ

ನೇಪಾಳ ಪ್ರವಾಹ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೃತ ಮಹಿಳೆಯ ಕೂದಲು ಹಿಡಿದು, ಚಿನ್ನದ ಕಿವಿಯೋಲೆ ಕದ್ದ ಖದೀಮರು! Video

ಪ್ರವಾಹದಲ್ಲಿ ಕೊಚ್ಚಿಹೋದ ಮಹಿಳೆಯ ಶವದಿಂದ ಚಿನ್ನದ ಕಿವಿಯೋಲೆಗಳೆಂದು ಹೇಳಲಾದ ವಸ್ತುಗಳನ್ನು ಇಬ್ಬರು ವ್ಯಕ್ತಿಗಳು ತೆಗೆಯುತ್ತಿರುವ ವಿಡಿಯೋವೊಂದು ವೈರಲ್ ಆದ ನಂತರ ಈ ಬಂಧನ ನಡೆದಿದೆ.

ನೇಪಾಳ ಪ್ರವಾಹ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮೃತ ಮಹಿಳೆಯ ಕೂದಲು ಹಿಡಿದು, ಚಿನ್ನದ ಕಿವಿಯೋಲೆ ಕದ್ದ ಖದೀಮರು! Video
ಬಂಧಿತ ಆರೋಪಿಗಳು
Published On :

ಕಠ್ಮಂಡು: ಚೀನಾ ಮತ್ತು ನೇಪಾಳದ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ನಡೆಯುತ್ತಿರುವ ರಕ್ಷಣಾ ಕಾರ್ಯಗಳ ನಡುವೆಯೇ, ನಾರಾಯಣಿ ನದಿಯಲ್ಲಿ ಕೊಚ್ಚಿಹೋದ ಸಂತ್ರಸ್ತೆಯೊಬ್ಬಳ ಶವದಿಂದ ಚಿನ್ನದ ಕಿವಿಯೋಲೆಗಳನ್ನು ಕದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಪ್ರವಾಹದಲ್ಲಿ ಕೊಚ್ಚಿಹೋದ ಮಹಿಳೆಯ ಶವದಿಂದ ಚಿನ್ನದ ಕಿವಿಯೋಲೆಗಳೆಂದು ಹೇಳಲಾದ ವಸ್ತುಗಳನ್ನು ಇಬ್ಬರು ವ್ಯಕ್ತಿಗಳು ತೆಗೆಯುತ್ತಿರುವ ವಿಡಿಯೋವೊಂದು ವೈರಲ್ ಆದ ನಂತರ ಈ ಬಂಧನ ನಡೆದಿದೆ. ಮೃತ ಮಹಿಳೆಯ ಕಿವಿಯಿಂದ ಕಿವಿಯೋಲೆಗಳನ್ನು ಕದ್ದಿದ್ದಕ್ಕಾಗಿ ಈ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನೇಪಾಳ ಪೊಲೀಸರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ? ಮರದ ಹಲಗೆಗಳು ಮತ್ತು ಮಹಿಳೆಯ ಕೂದಲನ್ನು ಹಿಡಿದು ಆಕೆಯ ಶವವನ್ನು ನೀರಿನಿಂದ ಹೊರಗೆ ಎಳೆಯುವುದು ಹಾಗೂ ನಂತರ ಆಕೆಯ ಎರಡೂ ಕಿವಿಗಳಿಂದ ಕಿವಿಯೋಲೆಗಳನ್ನು ತೆಗೆದು ಪಕ್ಕದಲ್ಲಿ ಇರಿಸುವುದು ಕಂಡುಬಂದಿದೆ. ಈ ವೇಳೆ ಸುತ್ತಲೂ ನಿಂತಿದ್ದ ಹಲವರು ವಿಡಿಯೋ ಮಾಡಿದ್ದಾರೆ. ನಂತರ ಭಾರಿ ಪ್ರವಾಹದಿಂದಾಗಿ ನಾರಾಯಣಿ ನದಿಗೆ ಕೊಚ್ಚಿಹೋದ ಶವವೊಂದಕ್ಕೆ ಸಂಬಂಧಿಸಿದ ಘಟನೆ ಇದಾಗಿದೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಚಿತ್ವಾನ್ ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಆಧರಿಸಿ, ಪೊಲೀಸರು 25 ವರ್ಷದ ಮದನ್ ಗುರುಂಗ್ ಮತ್ತು 38 ವರ್ಷದ ಉಮೇಶ್ ಚೌಧರಿ ಅವರನ್ನು ಬಂಧಿಸಿದ್ದಾರೆ. ಭರತ್‌ಪುರ ಮೆಟ್ರೋಪಾಲಿಟನ್ ಸಿಟಿ-1 ರ ಪೋಖರಾ ಬಸ್ ನಿಲ್ದಾಣದ ಬಳಿ ಈ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ನೇಪಾಳಿ ಮಾಧ್ಯಮ ಪೋರ್ಟಲ್ 'ಖಬರ್‌ಹಬ್' ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇಂತಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರನ್ನು ಗುರಿಯಾಗಿಸಿಕೊಂಡು ನಡೆಸುವ ಲೂಟಿ ಅಥವಾ ಯಾವುದೇ ರೀತಿಯ ಅಮಾನವೀಯ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನೇಪಾಳದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಮಾರಣಾಂತಿಕ ಪ್ರವಾಹ ದುರಂತವೊಂದರ ನಡುವೆಯೇ ಈ ಘಟನೆ ನಡೆದಿದೆ.

ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದ ನಂತರ ನಾಪತ್ತೆಯಾದ 1,400ಕ್ಕೂ ಹೆಚ್ಚು ಜನರಿಗಾಗಿ ರಕ್ಷಣಾ ತಂಡಗಳು ಕೆಸರಿನಲ್ಲಿ ಶೋಧ ನಡೆಸುತ್ತಿವೆ. ಈ ದುರಂತದಲ್ಲಿ ಮೃತರ ಕನಿಷ್ಠ 392 ಕ್ಕೆ ಏರಿದ್ದು, ಅನೇಕ ಹಳ್ಳಿಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.