ಆರ್ಥಿಕ ದಿಗ್ಬಂಧನಕ್ಕೆ ಕೆಂಡಾಮಂಡಲ: ಅಮೆರಿಕಕ್ಕೆ ಸಾಥ್ ನೀಡುವ ದೇಶಗಳೂ ನಮಗೆ ಶತ್ರುಗಳೇ; ಇರಾನ್ ಕಠಿಣ ಎಚ್ಚರಿಕೆ
ಆರು ತಿಂಗಳ ಸುದೀರ್ಘ ಮಿಲಿಟರಿ ಸಂಘರ್ಷದ ಬೆನ್ನಲ್ಲೇ ಇರಾನ್ ಆರ್ಥಿಕತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಟ್ರಂಪ್ ಅತಿ ದೊಡ್ಡ ಆರ್ಥಿಕ ಕಾರ್ಯಾಚರಣೆಯನ್ನು ಪ್ರಕಟಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಆರ್ಥಿಕ ದಿಗ್ಬಂಧನದ ವಿರುದ್ಧ ಇರಾನ್ ಅತ್ಯಂತ ಕಠಿಣ ನಿಲುವನ್ನು ತಳೆದಿದೆ.
ಅಮೆರಿಕದ ಈ "ಆರ್ಥಿಕ ಯುದ್ಧ"ಕ್ಕೆ ಕೈಜೋಡಿಸುವ ಜಗತ್ತಿನ ಯಾವುದೇ ರಾಷ್ಟ್ರವನ್ನು ಇನ್ಮುಂದೆ ತನ್ನ "ನೇರ ಶತ್ರು" ಎಂದು ಪರಿಗಣಿಸಲಾಗುವುದು ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಮುಖ್ಯಸ್ಥ ಮೊಹ್ಸೆನ್ ರೆಜಾಯಿ ತೀವ್ರ ಎಚ್ಚರಿಕೆ ನೀಡಿದ್ದಾರೆ.
ಆರು ತಿಂಗಳ ಸುದೀರ್ಘ ಮಿಲಿಟರಿ ಸಂಘರ್ಷದ ಬೆನ್ನಲ್ಲೇ ಇರಾನ್ ಆರ್ಥಿಕತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಟ್ರಂಪ್ ಅತಿ ದೊಡ್ಡ ಆರ್ಥಿಕ ಕಾರ್ಯಾಚರಣೆಯನ್ನು ಪ್ರಕಟಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಮುಖ್ಯಸ್ಥ ಮೊಹ್ಸೆನ್ ರೆಜಾಯಿ ಸರ್ಕಾರಿ ದೂರದರ್ಶನದಲ್ಲಿ ಮಾತನಾಡಿ, ಅಮೆರಿಕ ನಡೆಸುತ್ತಿರುವ ಆರ್ಥಿಕ ಸಮರಕ್ಕೆ ಯಾವುದೇ ದೇಶಗಳು ಸೇರಬಾರದು. ನಮ್ಮ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ವಿಧಿಸುವಲ್ಲಿ ಭಾಗಿಯಾಗುವ ಯಾವುದೇ ದೇಶವನ್ನು ನಾವು ಶತ್ರುವೆಂದು ಪರಿಗಣಿಸುತ್ತೇವೆ” ಎಂದು ಹೇಳಿದ್ದಾರೆ.
ಅಮೆರಿಕದಿಂದ ದೂರ ಸರಿಯಲು ನಿರಾಕರಿಸುವ ದೇಶಗಳ ಹಿತಾಸಕ್ತಿಗಳಿಗೆ ಇರಾನ್ ಹಾನಿ ಉಂಟುಮಾಡಲಿದೆ. ಯುದ್ಧದಲ್ಲಿ ಇರಾನ್ ಇನ್ನೂ ಹಲವು ಆಯ್ಕೆಗಳನ್ನು ತನ್ನ ಬಳಿ ಉಳಿಸಿಕೊಂಡಿದೆ. ಇದುವರೆಗೆ ಅಮೆರಿಕದ ಯಾವುದೇ ಆರ್ಥಿಕ ಹಿತಾಸಕ್ತಿಗಳ ಮೇಲೆ ದಾಳಿ ನಡೆಸಿಲ್ಲ.
ಇದುವರೆಗೆ ನಾವು ಅಮೆರಿಕದ ಸೇನಾ ನೆಲೆಗಳನ್ನು ಮಾತ್ರ ಗುರಿಯಾಗಿಸಿದ್ದೇವೆ. ಆದರೆ ನಮ್ಮ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಲು ಮುಂದಾದರೆ, ಇರಾನ್ ಸುತ್ತಮುತ್ತ ಹಾಗೂ ಇತರೆಡೆ ಇರುವ ಅಮೆರಿಕದ ತೈಲ ಮತ್ತು ಆರ್ಥಿಕ ಕಂಪನಿಗಳ ಮೇಲೆ ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಕ್ರಮ ಕೈಗೊಂಡರೆ, “ನಮ್ಮ ನಡುವಿನ ಸಂಘರ್ಷ ಭೂಕಂಪದಂತೆ ಇರುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನ ಆರ್ಥಿಕತೆಯನ್ನು ಪ್ರತ್ಯೇಕಿಸುವ ಅಮೆರಿಕದ ಪ್ರಯತ್ನಕ್ಕೆ ಇತರ ರಾಷ್ಟ್ರಗಳೂ ಕೈಜೋಡಿಸಬೇಕೆಂದು ವಾಷಿಂಗ್ಟನ್ ಒತ್ತಡ ಹೇರುತ್ತಿದೆ. ಇರಾನ್‌ನ ಪ್ರಮುಖ ಕಾರ್ಯತಂತ್ರದ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಚೀನಾ, ಈ ಕ್ರಮವನ್ನು ಟೀಕಿಸಿದ್ದು, ಅಮೆರಿಕದ ನಿರ್ಬಂಧಗಳಿಂದ ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದೆ.
ಇದೇ ವೇಳೆ, ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಟೆಹ್ರಾನ್‌ನೊಂದಿಗೆ ಎಲ್ಲಾ ವ್ಯಾಪಾರ ಮತ್ತು ಹಣಕಾಸು ವಹಿವಾಟುಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿರುವುದಾಗಿ ಮಂಗಳವಾರ ಘೋಷಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




