ವಿದೇಶ

'ಅವರು Mojtaba Khamenei ಹೌದೋ, ಅಲ್ಲವೋ ಗೊತ್ತಾಗುತ್ತಿಲ್ಲ': ಇರಾನ್ ಅಧ್ಯಕ್ಷ ಶಾಕಿಂಗ್ ಹೇಳಿಕೆ; ಸುಪ್ರೀಂ ಲೀಡರ್ ಜೀವಂತವಾಗಿರುವ ಬಗ್ಗೆ ಅನುಮಾನ ಮತ್ತಷ್ಟು ಗಾಢ!

ನಾನು ಕೇಳಿದ ಧ್ವನಿ ನಿಜವಾಗಿಯೂ ಸರ್ವೋಚ್ಚ ನಾಯಕನದ್ದೋ ಅಥವಾ ಅಲ್ಲವೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಪೆಜೆಶ್ಕಿಯಾನ್‌ ಹೇಳಿರುವುದಾಗಿ ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.

'ಅವರು Mojtaba Khamenei ಹೌದೋ, ಅಲ್ಲವೋ ಗೊತ್ತಾಗುತ್ತಿಲ್ಲ': ಇರಾನ್ ಅಧ್ಯಕ್ಷ ಶಾಕಿಂಗ್ ಹೇಳಿಕೆ; ಸುಪ್ರೀಂ ಲೀಡರ್ ಜೀವಂತವಾಗಿರುವ ಬಗ್ಗೆ ಅನುಮಾನ ಮತ್ತಷ್ಟು ಗಾಢ!
ಮೊಜ್ತಬಾ ಖಮೇನಿ
Published On :

ಟೆಹ್ರಾನ್‌: ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ದೇಶದ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರನ್ನು ಕತ್ತಲೆಯಲ್ಲಿ, ಕಪ್ಪು ಬಣ್ಣದ ಕಿಟಕಿಯ ಕಾರಿನಲ್ಲಿ ಟೆಹ್ರಾನ್‌ನ ರಹಸ್ಯ ಸ್ಥಳದಲ್ಲಿ ಭೇಟಿಯಾಗಿದ್ದು, ಅವರನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ನಾನು ಕೇಳಿದ ಧ್ವನಿ ನಿಜವಾಗಿಯೂ ಸರ್ವೋಚ್ಚ ನಾಯಕನದ್ದೋ ಅಥವಾ ಅಲ್ಲವೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಪೆಜೆಶ್ಕಿಯಾನ್‌ ಹೇಳಿರುವುದಾಗಿ ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದ್ದು, ಇದೀಗ ಜಾಗತಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರೊಂದಿಗೆ ಕೆಲವೇ ನಿಮಿಷಗಳ ಕಾಲ ನಡೆದ ಸಂವಾದದ ನಂತರ ಅಧ್ಯಕ್ಷರಿಗೆ ಹೊರಹೋಗುವಂತೆ ಸೂಚಿಸಲಾಯಿತು ಎಂದು ವರದಿ ಹೇಳಿದೆ. ಖಮೇನಿಯ ಕಾವಲುಗಾರರು, ಪೆಜೆಶ್ಕಿಯಾನ್‌ಗೆ ಕೈಕುಲುಕಲು ಸಹ ಅನುಮತಿ ನೀಡಿಲ್ಲ.

ರಹಸ್ಯ ಸ್ಥಳವೊಂದರಲ್ಲಿ, ಗಾಢ ಬಣ್ಣದ ಕಿಟಕಿಗಳಿರುವ ಕಾರಿನೊಳಗೆ ದೇಶದ ಸರ್ವೋಚ್ಚ ನಾಯಕ ಮೊಜ್ತಾಬಾ ಅಲಿ ಖಮೇನಿ ಅವರನ್ನು ಭೇಟಿಯಾಗಿದ್ದೇನೆ. ಆದರೆ "ಮೊಜ್ತಬಾ ಅವರನ್ನು ನೇರವಾಗಿ ನೋಡಲು ಸಾಧ್ಯವಾಗದ ಕಾರಣ, ನಾನು ಭೇಟಿಯಾದ ವ್ಯಕ್ತಿ ಮೊಜ್ತಬಾ ಖಮೇನಿ ಹೌದೋ ಅಲ್ಲವೋ ಎಂಬುದು ಕಡೆಗೂ ಗೊತ್ತಾಗಲೇ ಇಲ್ಲ" ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ.

"ರಹಸ್ಯ ಕಾರಿನಲ್ಲಿ ತಮಗೆ ಕೇಳಿಸಿದ ಧ್ವನಿ ನಿಜವಾಗಿಯೂ ಮೊಜ್ತಬಾ ಅಲಿ ಖಮೇನಿ ಅವರದ್ದೇ ಎಂಬುದನ್ನು ನಾನು ದೃಢವಾಗಿ ಹೇಳಲು ಸಾಧ್ಯವಿಲ್ಲ. ಇಡೀ ಕಾರು ಗಾಢ ಕಪ್ಪು ಬಣ್ಣದ ಕಿಟಿಕಿಗಳನ್ನು ಹೊಂದಿದ್ದರಿಂದ, ನನಗೆ ಅದರೊಳಗೆ ಕುಳಿತ ವ್ಯಕ್ತಿ ಯಾರೆಂಬುದು ತಿಳಿಯಲೇ ಇಲ್ಲ" ಎಂದು ಇರಾನ್‌ ಅಧ್ಯಕ್ಷರು ಹೇಳಿದ್ದಾಗಿ 'ಇರಾನ್ ಇಂಟರ್‌ನ್ಯಾಶನಲ್' ವರದಿ ಮಾಡಿದೆ.

ಇರಾನ್‌ ಅಧ್ಯಕ್ಷರ ಹೇಳಿಕೆ, ಸರ್ವೋಚ್ಚ ನಾಯಕ ಖಮೇನಿ ಜೀವಂತವಾಗಿರುವ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ.

ಕಳೆದ ಮೇ ತಿಂಗಳಲ್ಲಿ ವ್ಯಾಪಾರ ಸಂಘಗಳ ಪ್ರತಿನಿಧಿಗಳ ಸಭೆಯೊಂದರಲ್ಲಿ ಮಾತನಾಡಿದ್ದ ಮಸೂದ್‌ ಪೆಜೆಶ್ಕಿಯನ್, ತಾವು ಮೊಜ್ತಾಬಾ ಖಮೇನಿ ಅವರೊಂದಿಗೆ ಸೌಹಾರ್ದಯುತ ವಾತಾವರಣದಲ್ಲಿ ಎರಡೂವರೆ ಗಂಟೆಗಳ ಕಾಲ ಕಳೆದಿದ್ದಾಗಿ ಹೇಳುವ ಮೂಲಕ, ಈ ಭೇಟಿಯ ಬಗ್ಗೆ ಭಿನ್ನವಾದ ವಿವರಣೆಯನ್ನು ನೀಡಿದ್ದರು. ಆದರೀಗ ತಾವು ಭೇಟಿ ಮಾಡಿದ ವ್ಯಕ್ತಿ ಇರಾನ್‌ ಸರ್ವೋಚ್ಚ ನಾಯಕ ಹೌದೋ ಅಲ್ಲವೋ ಎಂಬುದೇ ಗೊತ್ತಿಲ್ಲ ಎಂದು ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.