ಮೊಜ್ತಬಾ ಖಮೇನಿ

ಕೋಮಾ ಸ್ಥಿತಿಯಲ್ಲಿ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?
ಇರಾನ್‌ನ ಸರ್ಕಾರದ ಬೆಂಬಲ ಹೊಂದಿರುವ ಮೆಹರ್ ನ್ಯೂಸ್ ಈ ದೃಶ್ಯಾವಳಿಯನ್ನು ಮೊದಲ ಬಾರಿಗೆ ಪ್ರಸಾರ ಮಾಡಿದೆ. ಇರಾನ್ ಸರ್ಕಾರದ ಇಸ್ಲಾಮಿಕ್ ಡೆವಲಪ್‌ಮೆಂಟ್ ಆರ್ಗನೈಸೇಶನ್‌ನೊಂದಿಗೆ ಈ ಸುದ್ದಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

'ಅವರು Mojtaba Khamenei ಹೌದೋ, ಅಲ್ಲವೋ ಗೊತ್ತಾಗುತ್ತಿಲ್ಲ': ಇರಾನ್ ಅಧ್ಯಕ್ಷ ಶಾಕಿಂಗ್ ಹೇಳಿಕೆ; ಸುಪ್ರೀಂ ಲೀಡರ್ ಜೀವಂತವಾಗಿರುವ ಬಗ್ಗೆ ಅನುಮಾನ ಮತ್ತಷ್ಟು ಗಾಢ!
ನಾನು ಕೇಳಿದ ಧ್ವನಿ ನಿಜವಾಗಿಯೂ ಸರ್ವೋಚ್ಚ ನಾಯಕನದ್ದೋ ಅಥವಾ ಅಲ್ಲವೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಪೆಜೆಶ್ಕಿಯಾನ್ ಹೇಳಿರುವುದಾಗಿ ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಮೂವರು ಪುತ್ರರು ಭಾಗಿ: ಆದರೆ ಸರ್ವೋಚ್ಛ ನಾಯಕ ಮೊಜ್ತಾಬಾ ಗೈರು, ಹಲವು ಅನುಮಾನ!
2026ರ ಜುಲೈ 5ರ ಭಾನುವಾರದಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ವಿದಾಯ ಹೇಳಲು ಲಕ್ಷಾಂತರ ಜನರು ಟೆಹ್ರಾನ್‌ನ ಬೀದಿಗಳಲ್ಲಿ ನೆರೆದಿದ್ದರು. ಇಡೀ ರಾಷ್ಟ್ರ ಶೋಕ ಸಾಗರದಲ್ಲಿ ಮುಳುಗಿದೆ.

ಜುಲೈ 4ರಿಂದ ಅಲಿ ಖಮೇನಿ ಅಂತಿಮ ವಿಧಿವಿಧಾನ: ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ, ಭದ್ರತಾ ಕಾರಣಕ್ಕೆ ಪುತ್ರ ಮೊಜ್ತಬಾ ಗೈರು..!
36 ವರ್ಷಗಳ ಕಾಲ ಇರಾನ್‌ನ ಸರ್ವೋಚ್ಚ ನಾಯಕರಾಗಿ ಸೇವೆ ಸಲ್ಲಿಸಿದ್ದ ಅಲಿ ಖಮೇನಿ ಅವರು ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ದಿನವೇ ಮೃತಪಟ್ಟಿದ್ದರು. ಬಳಿಕ ಯುದ್ಧ ಪರಿಸ್ಥಿತಿ ಉಂಟಾದ ಕಾರಣ ಅಂತ್ಯಕ್ರಿಯೆಯನ್ನು ತಕ್ಷಣ ನಡೆಸದೆ ಮುಂದೂಡಲಾಗಿತ್ತು.

ರಹಸ್ಯ 'ಮಾನವ ಸರಪಳಿ' ಮೂಲಕ ಇರಾನ್ ಆಡಳಿತ ನಡೆಸುತ್ತಿದ್ದಾರೆ ಮೊಜ್ತಬಾ ಖಮೇನಿ!
ಮೊಜ್ತಬಾ ಖಮೇನಿ "ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ ದುರ್ಬಲರಾಗಿ ಕಾಣಿಸಿಕೊಳ್ಳಲು ಬಯಸದ ಕಾರಣ ಅತ್ಯಂತ ಪ್ರಜ್ಞಾಪೂರ್ವಕವಾಗಿ" ನಡೆದುಕೊಳ್ಳುತ್ತಿದ್ದಾರೆ ಎಂದು ವರದಿ ಸೂಚಿಸಿದೆ.

ಖಮೇನಿ ಕೈ-ಕಾಲು, ಮುಖಕ್ಕೆ ತೀವ್ರ ಗಾಯ; ಗಂಭೀರ ಸ್ಥಿತಿಯಲ್ಲಿ ಪರಮೋಚ್ಛ ನಾಯಕ: ಇರಾನ್ ಆಡಳಿತ ಸೇನೆ ಹಿಡಿತಕ್ಕೆ?
ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೂ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಧ್ವನಿಯೂ ಜನರಿಗೆ ಕೇಳಿಸಿಲ್ಲ. ಹೀಗಾಗಿ ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಾಗುತ್ತಿತ್ತು.

ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ
56 ವರ್ಷದ ಅವರು ತಮ್ಮ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮಾನಸಿಕವಾಗಿ ಚುರುಕಾಗಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದವರು ತಿಳಿಸಿದ್ದಾರೆ.

Iran ಸರ್ವಾಧಿಕಾರಿ ಈಗ 'ಜೀವಂತ ಶವ', 'ಪ್ರಜ್ಞಾಹೀನ'; ಯುದ್ಧವೂ ಗೊತ್ತಿಲ್ಲ.. ಕದನ ವಿರಾಮದ ಅರಿವೂ ಇಲ್ಲ: ವರದಿ
ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಆರೋಗ್ಯದ ಮಾಹಿತಿ ಲಭ್ಯವಾಗಿದ್ದು, ಬ್ರಿಟಿಷ್ ಪತ್ರಿಕೆ ದಿ ಟೈಮ್ಸ್‌ನ ವರದಿಯ ಪ್ರಕಾರ, ಮೊಜ್ತಬಾ ಖಮೇನಿ ಬದುಕುಳಿದಿದ್ದಾರೆ.

ನಮ್ಮ ನಾಯಕರನ್ನು ಹುಡುಕಿ ಹುಡುಕಿ ಕೊಂದಾಕ್ಷಣ ಇರಾನ್ ಶಕ್ತಿ ನಾಶವಾದಂತಲ್ಲ: ಅಮೆರಿಕಕ್ಕೆ ಮೊಜ್ತಬಾ ಖಮೇನಿ ಎಚ್ಚರಿಕೆ
ಅಮೆರಿಕದ ಕದನ ವಿರಾಮ ಪ್ರಸ್ತಾವನೆಯನ್ನು ಟೆಹ್ರಾನ್ ತಿರಸ್ಕರಿಸಿದ ಕೆಲವು ಗಂಟೆಗಳ ಬೆನ್ನಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ವಾಷಿಂಗ್ಟನ್ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ವಾಗ್ದಾಳಿ ನಡೆಸಿದರು.

