ಹಾರ್ಮುಜ್ ಜಲಸಂಧಿಯಲ್ಲಿ ಭಯಾನಕ ದಾಳಿ: ಭಾರತಕ್ಕೆ ಬರುತ್ತಿದ್ದ ಹಡಗನ್ನು ವಶಕ್ಕೆ ಪಡೆದ ಇರಾನ್ ನೌಕಪಡೆ! Video ನೋಡಿ...
ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬರುತ್ತಿದ್ದ ಎಪಾಮಿನೊಂಡಾಸ್ ಮತ್ತು ಎಂಎಸ್‌ಸಿ ಫ್ರಾನ್ಸೆಸ್ಕಾ ಎಂಬ ಹಡಗುಗಳನ್ನು ಇರಾನ್ ನೌಕಪಡೆ ಸಿಬ್ಬಂದಿ ತಡೆದು ವಶಕ್ಕೆ ಪಡೆದಿರುವ ವಿಡಿಯೋಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಬಿಡುಗಡೆ ಮಾಡಿದೆ.

ಟೆಹರಾನ್: ಭಾರತಕ್ಕೆ ಬರುತ್ತಿದ್ದ ಹಡಗು ಸೇರಿದಂತೆ ಎರಡು ಹಡಗುಗಳ ಮೇಲೆ ಇರಾನ್ ನೌಕಪಡೆ ಸಮುದ್ರದಲ್ಲೇ ಮಿಂಚಿನ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ.
ಹೌದು. ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬರುತ್ತಿದ್ದ ಎಪಾಮಿನೊಂಡಾಸ್ ಮತ್ತು ಎಂಎಸ್‌ಸಿ ಫ್ರಾನ್ಸೆಸ್ಕಾ (Epaminondas-) MSC Francesca ಎಂಬ ಹಡಗುಗಳನ್ನು ಇರಾನ್ ನೌಕಪಡೆ ಸಿಬ್ಬಂದಿ ತಡೆದು ವಶಕ್ಕೆ ಪಡೆದಿರುವ ವಿಡಿಯೋಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಬಿಡುಗಡೆ ಮಾಡಿದೆ.
ಇರಾನ್ ಧ್ವಜ ಹೊಂದಿರುವ ಸ್ಪೀಡ್ ಬೋಟ್ ಗಳು ಭಾರತೀಯ ಹಡಗುಗಳನ್ನು ಸಮುದ್ರದಲ್ಲೇ ತಡೆಗಟ್ಟಿದ್ದಾರೆ. ಬಳಿಕ ಮುಖಕ್ಕೆ ಮಾಸ್ಕ್ ಧರಿಸಿದ ಸೈನಿಕರು ಬೆನ್ನಿಗೆ ಬಂದೂಕು ಕಟ್ಟಿಕೊಂಡು ಹಡಗಿನ ಒಳಗಡೆ ಹತ್ತುವುದು ವಿಡಿಯೋದಲ್ಲಿದೆ.
ಇರಾನ್ ಸೈನಿಕರ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ನಂತರ ಭಾರತದ ಎಪಾಮಿನೊಂಡಾಸ್ (Epaminondas) ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ನೂರ್ ನ್ಯೂಸ್ ವರದಿ ಮಾಡಿದೆ.
ಯುಫೋರಿಯಾ ಎಂಬ ಎರಡನೇ ಹಡಗಿನ ಮೇಲೆ ಗುಂಡುಹಾರಿಸಿದ ನಂತರ ಅದು ನಿಂತಿದೆ. ಮೂರನೇ ಹಡಗು MSC ಫ್ರಾನ್ಸೆಸ್ಕಾ ಮೇಲೂ ದಾಳಿ ನಡೆದಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾ ಪಡೆ ಇಂದು ಬೆಳಿಗ್ಗೆ ಹಾರ್ಮುಜ್ ಜಲಸಂಧಿಯಲ್ಲಿ ನಿಯಮ ಉಲ್ಲಂಘಿಸಿದ ಎರಡು ಹಡಗುಗಳನ್ನು ಪತ್ತೆಹಚ್ಚಿ, ನಿಲ್ಲಿಸಿತು.
MSC ಫ್ರಾನ್ಸೆಸ್ಕಾ "ಜಿಯೋನಿಸ್ಟ್ ಆಡಳಿತ"ಕ್ಕೆ ಸೇರಿದ್ದು, ಎಪಾಮಿನೊಂಡಾಸ್ ಕಡಲ ಭದ್ರತೆಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಗಾರ್ಡ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಇಸ್ಲಾಮಿಕ್ ಗಣರಾಜ್ಯ ವಿಧಿಸಿರುವ ನಿಯಮ ಉಲ್ಲಂಘಿಸುವ ಮತ್ತು ಜಲಮಾರ್ಗದಲ್ಲಿ ಸುರಕ್ಷಿತ ಮಾರ್ಗಕ್ಕೆ ವಿರುದ್ಧವಾದ ಚಟುವಟಿಕೆಗಳ ವಿರುದ್ಧ ಗಾರ್ಡ್ ಎಚ್ಚರಿಕೆ ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ಕದನ ವಿರಾಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಈ ಘರ್ಷಣೆ ನಡೆದಿದೆ.

ಅಮೆರಿಕ ದಿಗ್ಬಂಧನ ಧಿಕ್ಕರಿಸಿ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಸಂಗ್ರಹ; ಟ್ರಂಪ್'ಗೆ ಟೆಹ್ರಾನ್ ಡಿಚ್ಚಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


