ಅಮೆರಿಕದಲ್ಲಿ ಏನಾಗ್ತಿದೆ? Open AI CTO ಆಯ್ತು, ಇದೀಗ Apple CEO ರಾಜೀನಾಮೆ!
ವಲಸಿಗರ ವಿರುದ್ಧದ ಬಿಗಿಯಾದ ನೀತಿ, ಕಠಿಣ ಆಡಳಿತ ನಿಯಮ, ಇರಾನ್ ವಿರುದ್ಧ ಯುದ್ಧ ಸೇರಿದಂತೆ ಮತ್ತಿತರ ಕಾರಣಗಳಿಂದ ಅಸಮಾಧಾನದ ಹೊಗೆಯಾಡುತ್ತಿರುವಂತೆಯೇ ದೈತ್ಯ ತಂತ್ರಜ್ಞಾನ ಕಂಪನಿಗಳ ಆಯಾಕಟ್ಟಿನ ಪ್ರಮುಖ ಹುದ್ದೆಯಲ್ಲಿದ್ದವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ.

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಒಂದಲ್ಲಾ ಒಂದು ರೀತಿಯ ಅವಾಂತರಗಳು ನಡೆಯುತ್ತಿವೆ.
ವಲಸಿಗರ ವಿರುದ್ಧದ ಬಿಗಿಯಾದ ನೀತಿ, ಕಠಿಣ ಆಡಳಿತ ನಿಯಮ, ಇರಾನ್ ವಿರುದ್ಧ ಯುದ್ಧ ಸೇರಿದಂತೆ ಮತ್ತಿತರ ಕಾರಣಗಳಿಂದ ಅಸಮಾಧಾನದ ಹೊಗೆಯಾಡುತ್ತಿರುವಂತೆಯೇ ದೈತ್ಯ ತಂತ್ರಜ್ಞಾನ ಕಂಪನಿಗಳ ಆಯಾಕಟ್ಟಿನ ಪ್ರಮುಖ ಹುದ್ದೆಯಲ್ಲಿದ್ದವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ.
ಸೋಮವಾರವಷ್ಟೇ OpenAI CTO ಹುದ್ದೆಗೆ ಭಾರತೀಯ ಮೂಲದ ಶ್ರೀನಿವಾಸ್ ನಾರಾಯಣನ್ ದಿಢೀರ್ ರಾಜೀನಾಮೆ ಘೋಷಿಸಿದ್ದರು. ಇದೀಗ ಪ್ರತಿಷ್ಟಿತ Apple Inc ನಲ್ಲಿ ಕಳೆದ 15 ವರ್ಷಗಳಿಂದ ಸಿಇಒ ಆಗಿದ್ದ ಟಿಮ್ ಕುಕ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಸೆಪ್ಟೆಂಬರ್ 1 ರಿಂದ ಜಾನ್ ಟೆರ್ನಸ್ ಹೊಸ ಸಿಇಒ ಆಗಲಿದ್ದಾರೆ ಎಂದು ಕಂಪನಿ ತಿಳಿಸಿದೆ.
ದೀರ್ಘ-ಯೋಜಿತ ನಾಯಕತ್ವ ಬದಲಾವಣೆ ಭಾಗವಾಗಿ ಆಪಲ್‌ನ ನಿರ್ದೇಶಕರ ಮಂಡಳಿಯು ಈ ನಿರ್ಧಾರವನ್ನು ಅನುಮೋದಿಸಿದೆ. ಬೇಸಿಗೆ ಮುಗಿಯುವವರೆಗೂ ಟಿಮ್ ಕುಕ್ ಸಿಇಒ ಆಗಿ ಮುಂದುವರಿಯುತ್ತಾರೆ. ಸುಗಮ ಅಧಿಕಾರ ಹಸ್ತಾಂತರಕ್ಕಾಗಿ ಟೆರ್ನಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ ಎಂದು ಕಂಪನಿ ತಿಳಿಸಿದೆ.
ಪ್ರಸ್ತುತ ಹಾರ್ಡ್‌ವೇರ್ ಎಂಜಿನಿಯರಿಂಗ್‌ನ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಟೆರ್ನಸ್ ಆಪಲ್‌ನ ಪ್ರಮುಖ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಈಗ ಕಂಪನಿ ಮುನ್ನಡೆಸುವ ಜವಾಬ್ದಾರಿ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಟಿಮ್ ಕುಕ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಪ್ರಪಂಚದಾದ್ಯಂತ ನೀತಿ ನಿರೂಪಕರೊಂದಿಗೆ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಕಂಪನಿಗೆ ಪತ್ರ ಬರೆದಿರುವ ಕುಕ್, ಕಳೆದ 15 ವರ್ಷಗಳಿಂದ ನಾನು ಪ್ರತಿದಿನ ಬೆಳಿಗ್ಗೆ ಅದೇ ರೀತಿ ಕೆಲಸ ಶುರು ಮಾಡುತ್ತಿದೆ. ನಾನು ನನ್ನ ಇಮೇಲ್ ಅನ್ನು ತೆರೆಯುತ್ತೇನೆ ಮತ್ತು ಪ್ರಪಂಚದಾದ್ಯಂತದ ಆಪಲ್ ಬಳಕೆದಾರರಿಂದ ಹಿಂದಿನ ದಿನ ಸ್ವೀಕರಿಸಿದ ಟಿಪ್ಪಣಿ ಓದುತ್ತೇನೆ. ಇಂದು ಆಪಲ್‌ನಲ್ಲಿ ನನ್ನ ಪ್ರಯಾಣದ ಮುಂದಿನ ಹಂತವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಘೋಷಿಸಿದ್ದೇವೆ. ಮುಂಬರುವ ತಿಂಗಳುಗಳಲ್ಲಿ ಹೊಸದಾದ ಹೊಣೆ ವಹಿಸಿಕೊಳ್ಳಲಿದ್ದೇನೆ. ಸೆಪ್ಟೆಂಬರ್‌ನಲ್ಲಿ ಸಿಇಒ ಕೆಲಸವನ್ನು ಬಿಟ್ಟು ಆಪಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷನಾಗುತ್ತೇನೆ ಎಂದು ತಿಳಿಸಿದ್ದಾರೆ.
1998 ರಲ್ಲಿ ಆಪಲ್‌ಗೆ ಸೇರಿದ ಟಿಮ್ ಕುಕ್ 2011 ರಲ್ಲಿ ಸಿಇಒ ಆಗಿದ್ದರು. ಆಪಲ್ ವಾಚ್, ಏರ್‌ಪಾಡ್‌ಗಳು ಮತ್ತು ಆಪಲ್ ವಿಷನ್ ಪ್ರೊ ನಂತಹ ಹಲವಾರು ಹೊಸ ಉತ್ಪನ್ನಗಳ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



