ಥೈಲ್ಯಾಂಡ್ ರೆಸ್ಟೋರೆಂಟ್ನಲ್ಲಿ ಜನಾಂಗೀಯ ನಿಂದನೆ: ಪೊಲೀಸರಿಗೆ ದೂರು ಕೊಟ್ಟ ಭಾರತೀಯ ಪ್ರವಾಸಿಗ! Video
ಥೈಲ್ಯಾಂಡ್ ನಲ್ಲಿ ಜನಾಂಗೀಯ ನಿಂದನೆ ನೋಡಿದ್ದು ಇದೇ ಮೊದಲು, ಅಧಿಕಾರಿಗಳ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ ರೆಸ್ಟೋರೆಂಟ್ ಮ್ಯಾನೇಜರ್ ಕ್ಷಮೆಯಾಚಿಸಿದ್ದಾರೆ ಎಂದು ಪ್ರಯಾಣಿಕ ಹೇಳಿಕೊಂಡಿದ್ದಾರೆ.

ಬ್ಯಾಂಕಾಕ್: ಥೈಲ್ಯಾಂಡ್ನ ರೆಸ್ಟೋರೆಂಟ್ನಲ್ಲಿ ಜನಾಂಗೀಯ ನಿಂದನೆಗೆ ಸಂಬಂಧಿಸಿದಂತೆ ಭಾರತೀಯ ಪ್ರಜೆಯೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ಉಪಹಾರದ ಬಿಲ್ಗೆ ಸಂಬಂಧಿಸಿದ ಸಣ್ಣದಾಗಿ ಆರಂಭವಾದ ಜಗಳ ತದನಂತರ ತೀವ್ರ ವಾಕ್ ಸಮರ, ಜನಾಂಗೀಯ ನಿಂದನೆಗೆ ಕಾರಣವಾಯಿತು ಎಂದು ಆತ ಹೇಳಿಕೊಂಡಿದ್ದಾನೆ. ಅನುವಾದಕ್ಕೆ ಸಹಾಯ ಮಾಡಲು ರೆಸ್ಟೋರೆಂಟ್ ಮಹಿಳೆಯೊಬ್ಬರನ್ನು ಕರೆದಾಗ, ಆಕೆ ಪ್ರಯಾಣಿಕರು ಯಾವ ದೇಶದವರು ಎಂದು ಕೇಳಿದ್ದಾರೆ. ಬಳಿಕ
ಭಾರತದವರು ಎಂದು ತಿಳಿದ ನಂತರ ಮಹಿಳೆ ಜನಾಂಗೀಯ ನಿಂದನೆ ಮಾಡಲು ಶುರು ಮಾಡಿದ್ದಾರೆ. ಭಾರತೀಯರಿಗೆ ಹಣ ಕೊಡಲು ಬಯಸಲ್ಲ ಎಂದು ಬೈದಿದ್ದಾರೆ. ಹೀಗಾಗಿ ಪ್ರಯಾಣಿಕ ತಾನು ಜಗಳಕ್ಕೆ ನಿಲ್ಲುವ ಬದಲು ಗಲಾಟೆ ಪರಿಹರಿಸಲು ಥೈಲ್ಯಾಂಡ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಥೈಲ್ಯಾಂಡ್ ನಲ್ಲಿ ಜನಾಂಗೀಯ ನಿಂದನೆ ನೋಡಿದ್ದು ಇದೇ ಮೊದಲು, ಅಧಿಕಾರಿಗಳ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಬಳಿಕ ರೆಸ್ಟೋರೆಂಟ್ ಮ್ಯಾನೇಜರ್ ಕ್ಷಮೆಯಾಚಿಸಿದ್ದಾರೆ ಎಂದು ಪ್ರಯಾಣಿಕ ಹೇಳಿಕೊಂಡಿದ್ದಾರೆ.
ಜನಾಂಗೀಯ ನಿಂದನೆ ಸರಿಯಲ್ಲ, ಚರ್ಚೆಯೂ ಸರಿಯಲ್ಲ. ಥೈಲ್ಯಾಂಡ್ನ ಕ್ರಾಬಿಯ ಆವೊ ನಾಂಗ್ನಲ್ಲಿ ಈ ಘಟನೆ ನಡೆದಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರನ್ನು ಕರೆಯಬೇಕಾಯಿತು. ನಿಮ್ಮ ಪೋಷಕರಿಗೆ ಕಲಿಸಿ. ನಿಮ್ಮ ಮಕ್ಕಳಿಗೆ ಕಲಿಸಿ. ನಿಮಗೆ ನೋವು ಸಂಭವಿಸಿದಾಗ ಮಾತ್ರ ನಿಮಗೆ ಅರ್ಥವಾಗುತ್ತದೆ ಎಂದು ಇನ್ಸಾಟಾಗ್ರಾಮ್ ನಲ್ಲಿ ಶೀರ್ಷಿಕೆ ಕೊಡಲಾಗಿದೆ.
ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಅನೇಕ ಮಮಂದಿ ಪ್ರಯಾಣಿಕನಿಗೆ ಬೆಂಬಲ ವ್ಯಕ್ತಪಡಿಸಿದ್ದು, ಜನಾಂಗೀಯ ನಿಂದನೆಯನ್ನು ಖಂಡಿಸಿದ್ದಾರೆ. ಮತ್ತೆ ಕೆಲವರು ವಿಡಿಯೋದಿಂದ ಮಾತ್ರ ಇಡೀ ಘಟನೆ ತಿಳಿಯಲು ಸಾಧ್ಯವಿಲ್ಲ ಎಂದಿದ್ದಾರೆ.

fu**king country: ಕೆನಡಾದಲ್ಲಿ ಜನಾಂಗೀಯ ನಿಂದನೆ; ಭಾರತೀಯ ಕೆಲಸಗಾರ್ತಿಯನ್ನು ಕೆಟ್ಟದಾಗಿ ಬೈದ ಕೆನಡಾ ಪ್ರಜೆ! Video
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


