‘ಇದು ಒಂಟೆ ಕನಸಿನಂತಿದೆ’..: ಟ್ರಂಪ್ ಶಾಂತಿ ಒಪ್ಪಂದ ಹೇಳಿಕೆಗೆ ಇರಾನ್ ವ್ಯಂಗ್ಯ
“ಕ್ಯಾಮೆಲ್ ಡ್ರೀಮ್ಸ್ ಆಫ್ ಕಾಟನ್ಸೀಡ್” (ಒಂಟೆ ಹತ್ತಿಯ ಬೀಜವನ್ನು ಕನಸು ಕಾಣುವುದು) ಎಂಬ ಪರ್ಶಿಯನ್ ನುಡಿಗಟ್ಟನ್ನು ಬಳಸಿ, ಟ್ರಂಪ್ ಹೇಳಿಕೆಯನ್ನು ಇರಾನ್ ವ್ಯಂಗ್ಯವಾಡಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚೆಗೆ ಇರಾನ್ ಜೊತೆ ಶಾಂತಿ ಒಪ್ಪಂದ ಸಾಧ್ಯತೆ ಕುರಿತು ನೀಡಿದ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣ ಹಾಗೂ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದೆ.
“ಕ್ಯಾಮೆಲ್ ಡ್ರೀಮ್ಸ್ ಆಫ್ ಕಾಟನ್ಸೀಡ್” (ಒಂಟೆ ಹತ್ತಿಯ ಬೀಜವನ್ನು ಕನಸು ಕಾಣುವುದು) ಎಂಬ ಪರ್ಶಿಯನ್ ನುಡಿಗಟ್ಟನ್ನು ಬಳಸಿ, ಟ್ರಂಪ್ ಹೇಳಿಕೆಯನ್ನು ಇರಾನ್ ವ್ಯಂಗ್ಯವಾಡಿದೆ.
ಇರಾನ್ ರಾಷ್ಟ್ರ ಪ್ರಸಾರಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್ ಪರ್ಷಿಯನ್ ಗಾದೆಯನ್ನು ಬಳಸಿಕೊಂಡು ಟ್ರಂಪ್ ಅವರನ್ನು ಅಪಹಾಸ್ಯ ಮಾಡಿದೆ.
ಈ ನುಡಿಗಟ್ಟು ಸಾಧ್ಯವಿಲ್ಲದ ಅಥವಾ ವಾಸ್ತವಕ್ಕೆ ದೂರವಾದ ಕನಸುಗಳನ್ನು ಕಾಣುವುದು ಎನ್ನುವ ಅರ್ಥವನ್ನು ಸೂಚಿಸುತ್ತದೆ. ರಾಜಕೀಯವಾಗಿ, ಎದುರಾಳಿ ಹೇಳಿಕೆಗಳನ್ನು ಅತಿರೇಕ ಅಥವಾ ಖಾಲಿ ಮಾತುಗಳೆಂದು ತೋರಿಸಲು ಈ ರೀತಿಯ ವ್ಯಂಗ್ಯಗಳನ್ನು ಬಳಸಲಾಗುತ್ತದೆ.
ಟ್ರಂಪ್ ತಮ್ಮ ಹೇಳಿಕೆಯಲ್ಲಿ ಅಮೆರಿಕಾ–ಇರಾನ್ ಮಾತುಕತೆಗಳು ಉತ್ತಮ ಹಂತದಲ್ಲಿವೆ, ಶೀಘ್ರದಲ್ಲೇ ಶಾಂತಿ ಒಪ್ಪಂದ ಸಾಧ್ಯ ಎಂದು ಹೇಳಿದ್ದಾರೆ. ಆದರೆ ಇರಾನ್ ಅಧಿಕಾರಿಗಳು ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿಜ್ಜು. ಯಾವುದೇ ಮಹತ್ವದ ಪ್ರಗತಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಟ್ರಂಪ್ ಹೇಳಿಕೆಗಳು ವಾಸ್ತವಿಕತೆಯಿಂದ ದೂರವಾಗಿವೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಅಮೆರಿಕಾ ಮತ್ತು ಇರಾನ್ ನಡುವಿನ ಸಂಬಂಧಗಳು ಬಹುಕಾಲದಿಂದ ಉದ್ವಿಗ್ನವಾಗಿವೆ. ಪರಮಾಣು ಶಸ್ತ್ರಾಸ್ತ್ರ, ಆರ್ಥಿಕ ನಿರ್ಬಂಧಗಳು ಮತ್ತು ಪ್ರಾದೇಶಿಕ ಪ್ರಭಾವದ ವಿಚಾರಗಳು ಈ ಸಂಘರ್ಷದ ಪ್ರಮುಖ ಕಾರಣಗಳಾಗಿವೆ.
ಇಂತಹ ಪರಿಸ್ಥಿತಿಯಲ್ಲಿ ಶಾಂತಿ ಒಪ್ಪಂದ ಸಾಧ್ಯತೆ ಬಗ್ಗೆ ಬರುವ ಪ್ರತಿಯೊಂದು ಹೇಳಿಕೆಯೂ ರಾಜಕೀಯ ಉದ್ದೇಶಗಳಿಂದ ಕೂಡಿರಬಹುದು ಎಂಬ ಅನುಮಾನ ಉಭಯ ರಾಷ್ಟ್ರಗಳಲ್ಲೂ ಇದೆ.
ಇರಾನ್ ನೀಡಿದ ಈ ಪ್ರತಿಕ್ರಿಯೆ ಕೇವಲ ವ್ಯಂಗ್ಯವಲ್ಲ, ಅದು ಅಮೆರಿಕಾ ಹೇಳಿಕೆಗಳ ಮೇಲಿನ ನಂಬಿಕೆ ಕೊರತೆಯನ್ನು ತೋರಿಸುತ್ತದೆ. ಮಾತುಗಳಿಗಿಂತ ಕಾರ್ಯ ಮುಖ್ಯ ಎಂಬ ಸಂದೇಶವನ್ನು ನೀಡುವ ಪ್ರಯತ್ನವೂ ಇದರಲ್ಲಿ ಅಡಕವಾಗಿದೆ.
ಇದರ ಜೊತೆಗೆ, ಇಂತಹ ಹೇಳಿಕೆಗಳು ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಒಂದೆಡೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ, ಮತ್ತೊಂದೆಡೆ ಇಂತಹ ವ್ಯಂಗ್ಯಾತ್ಮಕ ಪ್ರತಿಕ್ರಿಯೆಗಳು ನಂಬಿಕೆಯನ್ನು ಇನ್ನಷ್ಟು ಕುಗ್ಗಿಸುತ್ತಿವೆ. ಇದರಿಂದ ಮುಂದಿನ ಮಾತುಕತೆಗಳು ಇನ್ನಷ್ಟು ಸಂಕೀರ್ಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



