ಬೆಂಗಳೂರಿನ IISc ಸೇರಿ ದೇಶದ ಹಲವೆಡೆ ಉಗ್ರರ ದಾಳಿ ಹಿಂದಿನ ರೂವಾರಿಗೆ ಗುಂಡೇಟು; ಸ್ಥಿತಿ ಗಂಭೀರ!
ಲಾಹೋರ್ ನ ನ್ಯೂಸ್ ಚಾನೆಲ್ ಚಾನೆಲ್ ವೊಂದರ ಹೊರಗೆ ಅಪರಿಚಿತರು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಮೂಲಗಳು ತಿಳಿಸಿವೆ.

ಇಸ್ಲಾಮಬಾದ್ : 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ( IISc) ಸೇರಿದಂತೆ ದೇಶದ ಹಲವೆಡೆ ಭಯೋತ್ಪಾದಕ ದಾಳಿ ಹಿಂದಿನ ರೂವಾರಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ.
ಪಾಕ್ ಮೂಲಕ ಲಷ್ಕರ್ -ಇ- ತೋಯ್ಬಾ (LET)ಸಂಘಟನೆಯ ಸಹ ಸಂಸ್ಥಾಪಕ ಅಮೀರ್ ಹಮ್ಜಾನ ಮೇಲೆ ಲಾಹೋರ್ ನಲ್ಲಿ ಅಪರಿಚಿತ ಬಂದೂಕುದಾರಿ ಗುಂಡಿನ ದಾಳಿ ನಡೆಸಿದ್ದಾನೆ. ಸದ್ಯ ಆತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಲಾಹೋರ್ ನ ನ್ಯೂಸ್ ಚಾನೆಲ್ ಚಾನೆಲ್ ವೊಂದರ ಹೊರಗೆ ಅಪರಿಚಿತರು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಮೂಲಗಳು ತಿಳಿಸಿವೆ. ಒಂದು ವರ್ಷದಲ್ಲಿ ಎರಡನೇ ಬಾರಿಗೆ ಹಮ್ಜಾ ಮೇಲೆ ದಾಳಿ ನಡೆದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಲಾಹೋರ್‌ನಲ್ಲಿರುವ ಆತನ ನಿವಾಸದ ಹೊರಗೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು.
ತದನಂತರ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಪಾಕ್ ಅಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ, ಆದರೂ ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮೀರ್ ಹಮ್ಜಾ ಯಾರು?
ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾದಲ್ಲಿ ಮೇ 10, 1959 ರಂದು ಜನಿಸಿದ ಹಮ್ಜ, ಅಫ್ಘಾನ್ ಜಿಹಾದ್‌ನ ಅನುಭವಿ. ಈತ 1985 ಮತ್ತು 1986 ರ ನಡುವೆ ಭಯೋತ್ಪಾದಕ ಹಫೀಜ್ ಸಯೀದ್ ಜೊತೆಗೆ ಉಗ್ರ ಸಂಘಟನೆ ಎಲ್‌ಇಟಿ ಸ್ಥಾಪಿಸಿದ.
ಬೆಂಗಳೂರು IISC ಮೇಲೆ ದಾಳಿ
ಕಾಶ್ಮೀರದ ಹೊರಗೆ 2005 ರ ಪ್ರಮುಖ ಎಲ್‌ಇಟಿ ದಾಳಿಗಳಲ್ಲಿ ಒಂದಾದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೇಲೆ ನಡೆದ ಭಯೋತ್ಪಾದಕ ದಾಳಿಯ ಸಂಚಿನ ರೂವಾರಿ ಎನ್ನಲಾಗಿದೆ.
ಸಯೀದ್ ನಂತರ ಎರಡನೇ ಪ್ರಮುಖ ಎಲ್‌ಇಟಿ ನಾಯಕ ಎಂದು ಪರಿಗಣಿಸಲ್ಪಟ್ಟ ಹಮ್ಜಾ, ಉಗ್ರ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾನೆ. ಅದರ ಪ್ರಚಾರ ವಿಭಾಗ ಮತ್ತು ಸಂಪರ್ಕ ಅಭಿಯಾನಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಯುನೈಟೆಡ್ ಸ್ಟೇಟ್ಸ್ ಖಜಾನೆ ಇಲಾಖೆಯು ಆತನನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ.
66 ವರ್ಷದ ಹಮ್ಜಾ, ಎಲ್‌ಇಟಿ ಸಿದ್ಧಾಂತವಾದಿಯಾದರೂ ಅತ್ಯುತ್ತಮ ಭಾಷಣಕಾರ ಹಾಗೂ ಬರಹಗಾರನಾಗಿಯೂ ಹೆಸರುವಾಸಿಯಾಗಿದ್ದಾನೆ. ಎಲ್‌ಇಟಿಯ ಪ್ರಚಾರ ಸಾಮಗ್ರಿಗಳ ಪ್ರಸಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



