ವಿದೇಶ

West Asia Conflict: ಹಾರ್ಮುಜ್ ಜಲಸಂಧಿ ಮೂಲಕ ಸುಗಮ ಸಂಚಾರ ಖಚಿತಪಡಿಸಿಕೊಳ್ಳಿ; ಇರಾನ್‌ಗೆ ಚೀನಾ ಸೂಚನೆ!

ಇರಾನ್‌ ಅಣ್ವಸ್ತ್ರ ಶಕ್ತಿಯನ್ನು ಹೊಂದುವುದನ್ನು ನಿಲ್ಲಿಸುವುದರ ಜೊತೆಗೆ, ಜಲಸಂಧಿಯನ್ನು ತೆರೆಯುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಪ್ರಮುಖ ಬೇಡಿಕೆಯಾಗಿದೆ.

West Asia Conflict: ಹಾರ್ಮುಜ್ ಜಲಸಂಧಿ ಮೂಲಕ ಸುಗಮ ಸಂಚಾರ ಖಚಿತಪಡಿಸಿಕೊಳ್ಳಿ; ಇರಾನ್‌ಗೆ ಚೀನಾ ಸೂಚನೆ!
ಹಾರ್ಮುಜ್ ಜಲಸಂಧಿ
Published On :

ಬೀಜಿಂಗ್: ಅಮೆರಿಕದೊಂದಿಗಿನ ಯುದ್ಧದ ಮಧ್ಯೆ ಟೆಹ್ರಾನ್ ನಿರ್ಣಾಯಕ ಜಲಮಾರ್ಗದ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದು, ಹಾರ್ಮುಜ್ ಜಲಸಂಧಿ ಮೂಲಕ ಸ್ವಾತಂತ್ರ್ಯ ಮತ್ತು ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳುವಂತೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇರಾನ್‌ಗೆ ಕೇಳಿಕೊಂಡಿದ್ದಾರೆ.

ಬುಧವಾರ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಛಿ ಅವರೊಂದಿಗೆ ದೂರವಾಣಿ ಕರೆ ಮಾಡಿ, ಹಾರ್ಮುಜ್ ಜಲಸಂಧಿ ಮೂಲಕ ಅಂತರರಾಷ್ಟ್ರೀಯ ನೌಕಾಯಾನದ ಸ್ವಾತಂತ್ರ್ಯ ಮತ್ತು ಸುರಕ್ಷತೆಯ ಖಾತರಿಗಳನ್ನು ವಾಂಗ್ ಕೋರಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಗೆ ಹೊಸ ಶಾಂತಿ ಪ್ರಸ್ತಾಪಗಳ ಕುರಿತು ಚರ್ಚಿಸಲು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನೇತೃತ್ವದ ಪಾಕಿಸ್ತಾನದ ಮಧ್ಯಸ್ಥಿಕೆ ನಿಯೋಗ ಬುಧವಾರ ಟೆಹ್ರಾನ್‌ಗೆ ತಲುಪಿದೆ.

ಅಮೆರಿಕ ಇರಾನ್‌ಗೆ ಸಂಬಂಧಿಸಿದ ಬಂದರುಗಳ ಮೇಲಿನ ದಿಗ್ಬಂಧನವು ಹಡಗುಗಳು ತೈಲ ಮತ್ತು ಅನಿಲವನ್ನು ಸಾಗಿಸುವುದನ್ನು ತಡೆಯುತ್ತಿದೆ. ಇದರಿಂದಾಗಿ ಉಲ್ಬಣಗೊಂಡಿರುವ ಇಂಧನ ಬಿಕ್ಕಟ್ಟಿನ ಬಗ್ಗೆಯೂ ಇರಾನ್‌ನ ಆಪ್ತ ಮಿತ್ರ ಮತ್ತು ಇರಾನ್‌ನ ತೈಲದ ಅತಿದೊಡ್ಡ ಆಮದುದಾರ ಚೀನಾ, ಕಳವಳ ವ್ಯಕ್ತಪಡಿಸಿದೆ.

ಇರಾನ್‌ ಅಣ್ವಸ್ತ್ರ ಶಕ್ತಿಯನ್ನು ಹೊಂದುವುದನ್ನು ನಿಲ್ಲಿಸುವುದರ ಜೊತೆಗೆ, ಜಲಸಂಧಿಯನ್ನು ತೆರೆಯುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಬೇಡಿಕೆಯಾಗಿದೆ.

'ಸದ್ಯದ ಪರಿಸ್ಥಿತಿಯು ಸಂಘರ್ಷ ಮತ್ತು ಶಾಂತಿಯ ನಡುವಿನ ಪರಿವರ್ತನೆಯ ನಿರ್ಣಾಯಕ ಹಂತವನ್ನು ತಲುಪಿದೆ ಮತ್ತು ಶಾಂತಿಗಾಗಿ ಒಂದು ಕಿಟಕಿ ತೆರೆಯುತ್ತಿದೆ. ಹಾರ್ಮುಜ್ ಜಲಸಂಧಿಯ ಕರಾವಳಿ ದೇಶವಾಗಿ ಇರಾನ್ ತನ್ನ ಸಾರ್ವಭೌಮತ್ವ, ಭದ್ರತೆ ಮತ್ತು ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು' ಎಂದು ವಾಂಗ್ ಅರಘ್ಚಿಗೆ ತಿಳಿಸಿದರು ಎಂದು ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

'ಅದೇ ಸಮಯದಲ್ಲಿ, ಜಲಸಂಧಿಯ ಮೂಲಕ ಅಂತರರಾಷ್ಟ್ರೀಯ ಸಂಚಾರದ ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಜಲಸಂಧಿಯ ಮೂಲಕ ಸಾಮಾನ್ಯ ಸಾಗಣೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳು ಅಂತರರಾಷ್ಟ್ರೀಯ ಸಮುದಾಯದ ಕರೆಯಾಗಿದೆ' ಎಂದು ಅವರು ಹೇಳಿದರು.

ಶಾಂತಿಯನ್ನು ಉತ್ತೇಜಿಸುವಲ್ಲಿ ಮತ್ತು ಸಂಘರ್ಷ ಕೊನೆಗೊಳಿಸುವಲ್ಲಿ ಚೀನಾ ಸಕ್ರಿಯ ಪಾತ್ರ ವಹಿಸುತ್ತದೆ ಎಂದು ಟೆಹ್ರಾನ್ ನಿರೀಕ್ಷಿಸುತ್ತದೆ ಮತ್ತು ಇರಾನ್ ಶಾಂತಿಯುತ ಮಾತುಕತೆಗಳ ಮೂಲಕ ತರ್ಕಬದ್ಧ ಮತ್ತು ವಾಸ್ತವಿಕ ಪರಿಹಾರವನ್ನು ಹುಡುಕುವುದನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ಅರಘ್ಚಿ ಹೇಳಿದರು ಎಂದು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಮಂಗಳವಾರ ಚೀನಾದ ವಿದೇಶಾಂಗ ಸಚಿವಾಲಯವು ಅಮೆರಿಕದ ಇರಾನ್ ಬಂದರುಗಳ ಮೇಲಿನ ದಿಗ್ಬಂಧನವನ್ನು 'ಅಪಾಯಕಾರಿ ಮತ್ತು ಬೇಜವಾಬ್ದಾರಿಯುತ'. ಇದು ಉದ್ವಿಗ್ನತೆಯನ್ನು ಹೆಚ್ಚಿಸುವ ಮತ್ತು ಅಸ್ಥಿರವಾದ ಕದನ ವಿರಾಮವನ್ನು ದುರ್ಬಲಗೊಳಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ತೀವ್ರವಾಗಿ ಟೀಕಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.