ತನ್ನನ್ನೇ ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡ ಟ್ರಂಪ್: ಜೀಸಸ್ ರೂಪದಲ್ಲಿ ಫೋಟೋ ಪೋಸ್ಟ್; ಭಾರೀ ಟೀಕೆ
ಚಿತ್ರದಲ್ಲಿ ಟ್ರಂಪ್ ಬಿಳಿ ನಿಲುವಂಗಿಯನ್ನು ಧರಿಸಿ, ಅನಾರೋಗ್ಯದಿಂದ ಮಲಗಿರುವ ವ್ಯಕ್ತಿಯ ಮೇಲೆ ಕೈ ಇಟ್ಟು ಪವಾಡ ಸದೃಶವಾಗಿ 'ಗುಣಪಡಿಸುತ್ತಿರುವಂತೆ' (healing) ತೋರಿಸಲಾಗಿದೆ. ಇದು ಬೈಬಲ್ನಲ್ಲಿ ಯೇಸು ಕ್ರಿಸ್ತ ಲಾಜರಸ್ರನ್ನು ಜೀವಂತಗೊಳಿಸಿದ ಘಟನೆಯನ್ನು ಹೋಲುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ತಾವು ಯೇಸು ಕ್ರಿಸ್ತನಂತೆ ಬಿಂಬಿಸುವ ಎಐ-ಸೃಷ್ಟಿತ (AI-generated) ಚಿತ್ರವೊಂದನ್ನು ಹಂಚಿಕೊಂಡಿದ್ದು, ಈ ಚಿತ್ರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಈ ಚಿತ್ರದಲ್ಲಿ ಟ್ರಂಪ್ ಬಿಳಿ ನಿಲುವಂಗಿಯನ್ನು ಧರಿಸಿ, ಅನಾರೋಗ್ಯದಿಂದ ಮಲಗಿರುವ ವ್ಯಕ್ತಿಯ ಮೇಲೆ ಕೈ ಇಟ್ಟು ಪವಾಡ ಸದೃಶವಾಗಿ 'ಗುಣಪಡಿಸುತ್ತಿರುವಂತೆ' (healing) ತೋರಿಸಲಾಗಿದೆ. ಇದು ಬೈಬಲ್ನಲ್ಲಿ ಯೇಸು ಕ್ರಿಸ್ತ ಲಾಜರಸ್ರನ್ನು ಜೀವಂತಗೊಳಿಸಿದ ಘಟನೆಯನ್ನು ಹೋಲುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಚಿತ್ರದ ಹಿನ್ನೆಲೆಯಲ್ಲಿ ಅಮೆರಿಕದ ಧ್ವಜ, ಯುದ್ಧ ವಿಮಾನಗಳು ಮತ್ತು ದೇವದೂತರ ಆಕೃತಿಗಳಿರುವುದು ಕಂಡು ಬಂದಿದೆ.
ಪೋಪ್ ಲಿಯೋ XIV (Pope Leo XIV) ಅವರು ಇರಾನ್ ಯುದ್ಧದ ವಿಷಯದಲ್ಲಿ ಅಮೆರಿಕದ ಕ್ರಮಗಳನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್ ಅವರು ಪೋಪ್ ಅವರನ್ನು "ದುರ್ಬಲ" ಎಂದು ಕರೆದಿದ್ದರು.
“ಪೋಪ್ ಅವರನ್ನು ದುರ್ಬಲ ಎಂದು ಟೀಕಿಸಿದ್ದ ಅವರು, ವಿದೇಶಾಂಗ ನೀತಿಯ ಕುರಿತು ಏನೂ ಗೊತ್ತಿಲ್ಲ. ನಾನು ಅವರ ಅಭಿಯಾನಿಯಲ್ಲ, ಅವರು ಪೋಪ್ ಆಗಿ ತಮ್ಮ ಕಾರ್ಯವನ್ನು ಮಾಡಿದರೆ ಸಾಕು ಎಂದು ಹೇಳಿದ್ದರು. ಅಲ್ಲದೆ, “ನಾನು ಅಧ್ಯಕ್ಷನಾಗಿರದಿದ್ದರೆ ಲಿಯೋ ಪೋಪ್ ಆಗಿರಲಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ವಿವಾದಾತ್ಮಕ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅನೇಕ ಕ್ರಿಶ್ಚಿಯನ್ ಗುಂಪುಗಳು ಮತ್ತು ಟೀಕಾಕಾರರು ಇದು ಧರ್ಮಕ್ಕೆ ಮಾಡಿದ ಅಪಮಾನ ಎಂದು ಹೇಳುತ್ತಿದ್ದರೆ, ಅವರ ಬೆಂಬಲಿಗರು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



