ಶಾಂತಿ ಮಾತುಕತೆ ಮಧ್ಯಸ್ಥಿಕೆ ವಹಿಸಿ, ವಿನಾಶ ಬಯಸಿದರೆ ಒಪ್ಪಲಾಗದು: ಪಾಕ್ ವಿರುದ್ಧ ಗುಡುಗಿದ ಇಸ್ರೇಲ್..!
ಯಾವುದೇ ದೇಶ ಅಥವಾ ಸರ್ಕಾರದಿಂದ ಇಂತಹ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ವಿಶೇಷವಾಗಿ ಶಾಂತಿ ಮಧ್ಯಸ್ಥಿಕೆಯ ಪಾತ್ರ ವಹಿಸುವ ದೇಶದಿಂದ ಇಂತಹ ಕಠಿಣ ಪದ ಬಳಕೆ ಮಾಡುವುದು ಸರಿಯಲ್ಲ.

ಟೆಲ್ ಅವಿವ್: ಶಾಂತಿ ಮಾತುಕತೆ ಮಧ್ಯಸ್ಥಿಕೆ ವಹಿಸಿ, ಇದೀಗ ವಿನಾಶವಾಗಲಿ ಎಂದು ಶಪಿಸುತ್ತಿರುವ ಪಾಕಿಸ್ತಾನದ ವಿರುದ್ಧ ಇಸ್ರೇಲ್ ಗುಡುಗಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಅವರು ಇಸ್ರೇಲ್ ವಿರುದ್ಧ ಬಳಸಿರುವ ಕಠಿಣ ಪದಗಳ ವಿರುದ್ಧ ಇಸ್ರೇಲ್ ತೀವ್ರವಾಗಿ ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ‘ಇಸ್ರೇಲ್ ವಿನಾಶಕ್ಕೆ ಪಾಕ್ ರಕ್ಷಣಾ ಸಚಿವರು ಕರೆ ನೀಡಿರುವುದು “ಅಸ್ವೀಕಾರಾರ್ಹ” ಎಂದು ಖಂಡಿಸಿದ್ದಾರೆ.
ಯಾವುದೇ ದೇಶ ಅಥವಾ ಸರ್ಕಾರದಿಂದ ಇಂತಹ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ವಿಶೇಷವಾಗಿ ಶಾಂತಿ ಮಧ್ಯಸ್ಥಿಕೆಯ ಪಾತ್ರ ವಹಿಸುವ ದೇಶದಿಂದ ಇಂತಹ ಕಠಿಣ ಪದ ಬಳಕೆ ಮಾಡುವುದು ಸರಿಯಲ್ಲ. ಇಸ್ರೇಲ್ ತನ್ನ ಭದ್ರತೆ ಮತ್ತು ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು ಯಾವ ಕ್ರಮಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಗುಡುಗಿದ್ದಾರೆ.
ಇದಲ್ಲದೆ, ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಕೂಡ ಪಾಕಿಸ್ತಾನದ ಹೇಳಿಕೆಗಳನ್ನು ತೀವ್ರವಾಗಿ ವಿರೋಧಿಸಿ, ಇಂತಹ ಭಾಷೆ ದ್ವೇಷವನ್ನು ಉತ್ತೇಜಿಸುವಂತಾಗಿದೆ ಎಂದು ಹೇಳಿದ್ದಾರೆ. “ಕ್ಯಾನ್ಸರ್ ರಾಜ್ಯ” ಎಂಬ ಪದ ಬಳಕೆ ಇಸ್ರೇಲ್‌ನ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ. ಶಾಂತಿ ಮಾತುಕತೆ ನಡೆಸುವ ದೇಶದ ಜವಾಬ್ದಾರಿಯುತ ಸಚಿವರು ಇಂತಹ ಭಾಷೆ ಬಳಸುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಖವಾಜಾ ಆಸಿಫ್ ಇಸ್ರೇಲ್ ವಿರುದ್ಧ ಸಿಟ್ಟು ಹೊರಹಾಕುವುದು ಇದೇ ಮೊದಲೆನಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಮಾನವಕುಲದ ಅತ್ಯಂತ ದೊಡ್ಡ ಅಪರಾಧಿ. ಅಮೆರಿಕ ವೆನೆಜುವೆಲಾದ ಅಧ್ಯಕ್ಷರನ್ನು ಸೆರೆಹಿಡಿದಂತೆಯೇ ನೆತನ್ಯಾಹು ಅವರನ್ನು ಅಪಹರಿಸಿ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಅವರು ಈ ಹಿಂದೆ ಆಗ್ರಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



