ವಿದೇಶ

'ನೀವು ಮರೆಯಲಾಗದ ಹೊಡೆತ ತಿನ್ನುತ್ತೀರಿ; ಈ ಬಾರಿ ಭಯಾನಕ ಕ್ಷೀಪಣಿ ಬಳಸುತ್ತೇವೆ': ಟ್ರಂಪ್‌ ಸರ್ವನಾಶ ಹೇಳಿಕೆಗೆ ಇರಾನ್ ತಿರುಗೇಟು

ಇದಕ್ಕೆ ಪ್ರತಿಯಾಗಿ, ಇರಾನ್ ಸಹ ಟ್ರಂಪ್ ವಿರುದ್ಧ ಗುಡುಗಿದ್ದು, "ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್‌ನ ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತವನ್ನು ಅನುಭವಿಸುತ್ತೀರಿ" ಎಂದು ತಿರುಗೇಟು ನೀಡಿದೆ.

'ನೀವು ಮರೆಯಲಾಗದ ಹೊಡೆತ ತಿನ್ನುತ್ತೀರಿ; ಈ ಬಾರಿ ಭಯಾನಕ ಕ್ಷೀಪಣಿ ಬಳಸುತ್ತೇವೆ': ಟ್ರಂಪ್‌ ಸರ್ವನಾಶ ಹೇಳಿಕೆಗೆ ಇರಾನ್ ತಿರುಗೇಟು
ಡೊನಾಲ್ಡ್ ಟ್ರಂಪ್- ಇರಾನ್ ದಾಳಿ ನಡೆಸಿದ ಪ್ರದೇಶ — online desk
Published On :

ಟೆಹ್ರಾನ್: ಇಂದು ರಾತ್ರಿಯೇ ಒಂದು ಇಡೀ ನಾಗರಿಕತೆಯೇ ನಾಶವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್ ಗೆ ಎಚ್ಚರಿಕೆ ನೀಡಿದ್ದು, ಜಾಗತಿಕ ಸಂಚಲನಕ್ಕೆ ಕಾರಣವಾಗಿದೆ.

ಇದಕ್ಕೆ ಪ್ರತಿಯಾಗಿ, ಇರಾನ್ ಸಹ ಟ್ರಂಪ್ ವಿರುದ್ಧ ಗುಡುಗಿದ್ದು, "ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್‌ನ ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತವನ್ನು ಅನುಭವಿಸುತ್ತೀರಿ" ಎಂದು ತಿರುಗೇಟು ನೀಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಗೆ ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾದಲ್ಲಿರುವ ಇರಾನಿನ ರಾಯಭಾರ ಕಚೇರಿಯು, "ಟ್ರಂಪ್ ಹೇಳಿದ್ದಾರೆ, 'ಇಡೀ ನಾಗರಿಕತೆಯು ಇಂದು ರಾತ್ರಿಯೇ ಸಾಯುತ್ತದೆ' ಎಂದು. ಆದರೆ "ನೀವು ಮತ್ತು ನಿಮ್ಮ ಮಿತ್ರರಾಷ್ಟ್ರಗಳು ಇರಾನ್‌ನ ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತ ತಿನ್ನುತ್ತೀರಿ. ಈ ಬಾರಿ ನಾವು ಅತ್ಯಂತ ಪ್ರಭಾವಶಾಲಿ ಕ್ಷೀಪಣಿಯಾದ ಖೈಬರ್ ಕ್ಷೀಪಣಿ ಬಳಸುತ್ತೇವೆ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

"ಇಡೀ ನಾಗರಿಕತೆಯು ಇಂದು ರಾತ್ರಿಯೇ ಸಾಯುತ್ತದೆ. ಮತ್ತೆಂದೂ ಈ ನಾಗರಿಕತೆ ಮರಳುವುದಿಲ್ಲ. ಈ ಘಟನೆ ಸಂಭವಿಸಬೇಕೆಂದು ನಾನು ಬಯಸುವುದಿಲ್ಲ, ಆದರೆ ಅದು ಬಹುಶಃ ಸಂಭವಿಸುವ ಸಾಧ್ಯತೆಯಿದೆ. ಈ ಮೂಲಕ 47 ವರ್ಷಗಳ ಸುಲಿಗೆ, ಭ್ರಷ್ಟಾಚಾರ ಮತ್ತು ಸಾವು ಅಂತಿಮವಾಗಿ ಕೊನೆಗೊಳ್ಳುತ್ತದೆ. ಇರಾನ್‌ನ ಮಹಾನ್ ಜನರನ್ನು ದೇವರು ಆಶೀರ್ವದಿಸಲಿ!" ಎಂದು ಟ್ರಂಪ್ ಇದಕ್ಕು ಮುನ್ನ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.