ಅಮೆರಿಕಾ-ಇರಾನ್ ನಡುವೆ 45 ದಿನಗಳ ಕದನ ವಿರಾಮಕ್ಕೆ ಯತ್ನ: ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್..?
ಈ ಪ್ರಸ್ತಾವವು ಮೊದಲ ಹಂತದಲ್ಲಿ 45 ದಿನಗಳ ಕಾಲ ಎರಡೂ ರಾಷ್ಟ್ರಗಳು ದಾಳಿಗಳನ್ನು ನಿಲ್ಲಿಸುವುದು, ನಂತರ ಆ ಅವಧಿಯಲ್ಲಿ ಶಾಶ್ವತ ಪರಿಹಾರಕ್ಕಾಗಿ ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದೆ.

ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಸಂಘರ್ಷದ ನಡುವೆ ಅಮೆರಿಕಾ ಮತ್ತು ಇರಾನ್ ದೇಶಗಳು 45 ದಿನಗಳ ಕದನ ವಿರಾಮಕ್ಕೆ ಸಂಬಂಧಿಸಿದ ಮಹತ್ವದ ಮಾತುಕತೆಹನ್ನು ನಡೆಸುತ್ತಿವೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ಪ್ರಸ್ತಾಪವು ಪ್ರಸ್ತುತ ಯುದ್ಧ ಪರಿಸ್ಥಿತಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ದೀರ್ಘಕಾಲೀನ ಶಾಂತಿ ಒಪ್ಪಂದದ ದಿಕ್ಕಿನಲ್ಲಿ ಮಾತುಕತೆ ನಡೆಸಲು ಅವಕಾಶ ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
ಮೊದಲ ಹಂತದಲ್ಲಿ 45 ದಿನಗಳ ಕಾಲ ಎರಡೂ ರಾಷ್ಟ್ರಗಳು ದಾಳಿಗಳನ್ನು ನಿಲ್ಲಿಸುವುದು, ನಂತರ ಆ ಅವಧಿಯಲ್ಲಿ ಶಾಶ್ವತ ಪರಿಹಾರಕ್ಕಾಗಿ ರಾಜತಾಂತ್ರಿಕ ಮಾತುಕತೆಗಳನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಈ ಮಾತುಕತೆಗಳು ನೇರವಾಗಿ ನಡೆಯದೇ, ಕೆಲವು ಮಧ್ಯವರ್ತಿಗಳ ಮೂಲಕ ಸಾಗುತ್ತಿವೆ. ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಸೇರಿದಂತೆ ಹಲವು ದೇಶಗಳು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎನ್ನಲಾಗಿದೆ. ಆದರೆ ಈ ಕುರಿತು ಅಮೆರಿಕಾ ಸರ್ಕಾರ ಅಥವಾ ವೈಟ್‌ಹೌಸ್‌ನಿಂದ ಅಧಿಕೃತ ದೃಢೀಕರಣ ಇನ್ನೂ ಹೊರಬಂದಿಲ್ಲ.
ಇದರ ಮಧ್ಯೆ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ತಾರಕ್ಕೇರಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಸೈನಿಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಗಲ್ಫ್ ಪ್ರದೇಶದ ಭದ್ರತೆಗೂ ಗಂಭೀರ ಸವಾಲು ಎದುರಾಗಿದೆ.
ಹಾರ್ಮುಜ್ ಜಲಸಂಧಿ ಭದ್ರತೆ, ತೈಲ ಸರಬರಾಜು ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರುತ್ತಿದೆ. ತೈಲ ಬೆಲೆಗಳು ಹೆಚ್ಚಳ ಕಂಡು ಜಾಗತಿಕ ಆರ್ಥಿಕತೆಯ ಮೇಲೂ ಒತ್ತಡ ಹೆಚ್ಚಿಸಿದೆ.
ಇದಕ್ಕೂ ಮೊದಲು ಕೆಲವು ತಾತ್ಕಾಲಿಕ ಯುದ್ಧ ವಿರಾಮ ಪ್ರಸ್ತಾಪಗಳು ವಿಫಲವಾಗಿದ್ದ ಹಿನ್ನೆಲೆಯಲ್ಲಿ, ಈ 45 ದಿನಗಳ ಯೋಜನೆಯನ್ನು ಕೊನೆಯ ಅವಕಾಶವೆಂದು ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಎರಡೂ ರಾಷ್ಟ್ರಗಳ ನಡುವಿನ ನಂಬಿಕೆ ಕೊರತೆ ಮತ್ತು ರಾಜಕೀಯ ಅಂತರಗಳ ಕಾರಣದಿಂದ ಈ ಪ್ರಸ್ತಾಪ ಯಶಸ್ವಿಯಾಗುವ ಸಾಧ್ಯತೆ ಬಗ್ಗೆ ಅನುಮಾನಗಳೂ ವ್ಯಕ್ತವಾಗುತ್ತಿವೆ.
ಒಟ್ಟಿನಲ್ಲಿ, ಈ 45 ದಿನಗಳ ಕದನ ವಿರಾಮ ಯೋಜನೆ ಜಾರಿಯಾದರೆ, ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಪರಿಸ್ಥಿತಿಗೆ ತಾತ್ಕಾಲಿಕ ನಿರಾಳತೆ ಸಿಗಬಹುದು. ಆದರೆ, ಶಾಶ್ವತ ಶಾಂತಿ ಸಾಧಿಸಲು ಮುಂದಿನ ಮಾತುಕತೆಗಳು ಹೇಗೆ ಸಾಗುತ್ತವೆ ಎಂಬುದೇ ನಿರ್ಣಾಯಕವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




