ಬೆದರಿಕೆಯಡಿ ಮಾತುಕತೆ ಮುಂದುವರೆಸಲು ಸಾಧ್ಯವಿಲ್ಲ: ಟ್ರಂಪ್ ಗಡುವು ತಿರಸ್ಕರಿಸಿದ ಇರಾನ್!
'ಅಮೆರಿಕದ 15 ಅಂಶಗಳ ಬೇಡಿಕೆ ಪ್ರಸ್ತಾವನೆ' ಅತಿಯಾದ ಬೇಡಿಕೆಯಾಗಿದೆ' ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ತನ್ನದೇ ಆದ ಷರತ್ತುಗಳನ್ನು ರೂಪಿಸಿದೆ ಎಂದು ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಹೇಳಿದ್ದಾರೆ.

ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕದ ಉದ್ದೇಶಿತ 15 ಅಂಶಗಳ ಮಾರ್ಗಸೂಚಿಯನ್ನು ಇರಾನ್ ತಿರಸ್ಕರಿಸಿದೆ.
ಅಮೆರಿಕದ 15 ಅಂಶಗಳ ಬೇಡಿಕೆ ಪ್ರಸ್ತಾವನೆ' ಅತಿಯಾದ ಬೇಡಿಕೆಯಾಗಿದೆ' ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ತನ್ನದೇ ಆದ ಷರತ್ತುಗಳನ್ನು ರೂಪಿಸಿದೆ ಎಂದು ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಹೇಳಿದ್ದಾರೆ.
ಬೆದರಿಕೆಯಡಿ ಮಾತುಕತೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ. ಯಾವುದೇ ಮೂಲಸೌಕರ್ಯಗಳ ಮೇಲಿನ ದಾಳಿ ಯುದ್ಧ ಅಪರಾಧಗಳಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
'ಇಸ್ಫಹಾನ್‌ನಲ್ಲಿ ಪೈಲಟ್ ರಕ್ಷಣಾ ಕಾರ್ಯಾಚರಣೆಯು ಇರಾನ್ ನಲ್ಲಿ ಪ್ರಬಲವಾಗಿರುವ ಯುರೇನಿಯಂ ಅನ್ನು ವಶಪಡಿಸಿಕೊಳ್ಳುವ ಗುರಿ ಹೊಂದಿರುವ ಮೋಸದ ಕಾರ್ಯಾಚರಣೆಯಾಗಿರಬಹುದು ವರದಿಯಾಗಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವೆ ತೀವ್ರ ಅಪನಂಬಿಕೆ ಇದೆ. ತಕ್ಷಣದ ಕದನ ವಿರಾಮ ಎದುರಾಳಿ ತಂಡವನ್ನು ಮರುಸಂಘಟಿಸಲು ಮತ್ತು ಮಿಲಿಟರಿ ಕ್ರಮಗಳನ್ನು ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.
ಗಟ್ಟಿ ನಿಲುವಿನ ಹೊರತಾಗಿಯೂ ರಾಜತಾಂತ್ರಿಕ ಮಾತುಕತೆ ನಡೆಯುತ್ತಿದೆ. ಆಯಕಟ್ಟಿನ ಪ್ರಮುಖವಾದ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸುರಕ್ಷಿತ ಮಾರ್ಗವನ್ನು ಖಾತ್ರಿಪಡಿಸಲು ಒಮಾನ್‌ನೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದು ಇರಾನ್ ಹೇಳಿದೆ.
ಪಾಕಿಸ್ತಾನ ಹೊಸದಾದ ಶಾಂತಿ ಮಾತುಕತೆಯನ್ನು ಅಮೆರಿಕ ಮತ್ತು ಇರಾನ್ ನೊಂದಿಗೆ ಹಂಚಿಕೊಂಡಿದೆ ಎಂಬ ಮಾಧ್ಯಮಗಳ ವರದಿ ನಡುವೆ ಇರಾನ್ ಈ ಈ ಹೇಳಿಕೆ ನೀಡಿದೆ. ತಕ್ಷಣದ ಕದನ ವಿರಾಮ ನಂತರ ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಸಮಗ್ರ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಲು ಶಾಂತಿ ಒಪ್ಪಂದ ಮಾತುಕತೆ ನಡೆಯುತ್ತಿವೆ ಎನ್ನಲಾಗುತ್ತಿದ್ದರೂ ಅಮೆರಿಕದ ಷರತ್ತುಗಳಿಗೆ ಒಪ್ಪಲ್ಲ ಎಂದು ಇರಾನ್ ಹೇಳುವುದರೊಂದಿಗೆ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



