ವಿದೇಶ

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಚೀನಾದ ಹಸ್ತಕ್ಷೇಪ: ಪನಾಮ ಧ್ವಜದ ಹಡಗುಗಳಿಗೆ ತಡೆ, ಸಿಡಿದೆದ್ದ ಅಮೆರಿಕ!

ಚೀನಾದ ಹಸ್ತಕ್ಷೇಪ ಇದಕ್ಕೆ ಕಾರಣವಾಗಿದ್ದು, ಅಮೆರಿಕ ಸಿಡಿದೆದ್ದಿದೆ. ಪನಾಮ-ಧ್ವಜದ ಹಡಗುಗಳ ವಿಚಾರದಲ್ಲಿ ಚೀನಾ ಮಧ್ಯ ಪ್ರವೇಶಿಸುತ್ತಿದೆ ಎಂಬುದು ಅಮೆರಿಕ ಆರೋಪಿಸಿದೆ.

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಚೀನಾದ ಹಸ್ತಕ್ಷೇಪ: ಪನಾಮ ಧ್ವಜದ ಹಡಗುಗಳಿಗೆ ತಡೆ, ಸಿಡಿದೆದ್ದ ಅಮೆರಿಕ!
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ
Published On :

ವಾಷಿಂಗ್ಟನ್: ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ಯುದ್ಧ 34ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಮತ್ತೊಂದು ಆಯಾಮ ಪಡೆದುಕೊಂಡಿದೆ.

ಚೀನಾದ ಹಸ್ತಕ್ಷೇಪ ಇದಕ್ಕೆ ಕಾರಣವಾಗಿದ್ದು, ಅಮೆರಿಕ ಸಿಡಿದೆದ್ದಿದೆ. ಪನಾಮ-ಧ್ವಜದ ಹಡಗುಗಳ ವಿಚಾರದಲ್ಲಿ ಚೀನಾ ಮಧ್ಯ ಪ್ರವೇಶಿಸುತ್ತಿದೆ ಎಂಬುದು ಅಮೆರಿಕ ಆರೋಪಿಸಿದೆ.

ಹೌದು. ಕಾನೂನುಬದ್ಧ ವ್ಯಾಪಾರದಲ್ಲಿ ತೊಡಗಿರುವ ಪನಾಮ-ಧ್ವಜದ ಹಡಗುಗಳನ್ನು ಬಂಧಿಸಲು ಅಥವಾ ತಡೆಯಲು ಚೀನಾ ಪ್ರಯತ್ನಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕಿಡಿಕಾರಿದ್ದಾರೆ.

ಇದು ಇಂಧನ ಪೂರೈಕೆಯನ್ನು ಜಾಲವನ್ನು ಅಸ್ಥಿರಗೊಳಿಸುತ್ತದೆ. ವೆಚ್ಚವನ್ನು ಹೆಚ್ಚಿಸುತ್ತದೆ.ಅಲ್ಲದೇ ಜಾಗತಿಕ ವ್ಯಾಪಾರ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಪನಾಮಕ್ಕೆ ವಾಷಿಂಗ್ಟನ್‌ನ ಸಂಪೂರ್ಣ ಬೆಂಬಲವನ್ನು ದೃಢಪಡಿಸಿದ್ದಾರೆ. ಅದರ ಸಾರ್ವಭೌಮತ್ವವನ್ನು ಬೆಂಬಲಿಸಲು ಮತ್ತು ಯಾವುದೇ ಪ್ರತೀಕಾರದ ಅಥವಾ ಬಲವಂತದ ಕ್ರಮಗಳನ್ನು ವಿರೋಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.