ಬೌದ್ಧ ಹಬ್ಬದ ವೇಳೆ ತನ್ನದೇ ಜನರ ಮೇಲೆ ಮಯನ್ಮಾರ್ ಸೇನೆ ದಾಳಿ: ಬಾಂಬ್ ಸ್ಫೋಟಿಸಿ ಮಕ್ಕಳು ಸೇರಿ 40 ಜನರ ಹತ್ಯೆ!
ಮಯನ್ಮಾರ್ ನಲ್ಲಿ ರಾಷ್ಟ್ರೀಯ ರಜಾದಿನವಾದ ಮತ್ತು ಬೌದ್ಧಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಥಾಡಿಂಗ್ಯುಟ್ ಹಬ್ಬವನ್ನು ಆಚರಿಸಲು ಸುಮಾರು 100 ಜನರು ಸೇರಿದ್ದಾಗ ಸೇನೆ ಈ ದುಷ್ಕೃತ್ಯ ಎಸಗಿದೆ.

ಮಯನ್ಮಾರ್ ನ ಚಾಂಗ್ ಯು ಟೌನ್‌ಶಿಪ್‌ನಿಂದ ಭಯಾನಕ ಘಟನೆ ನಡೆದಿದೆ. ಬೌದ್ಧ ಹಬ್ಬದ ಸಂದರ್ಭದಲ್ಲಿ ಮೋಟಾರ್ ಚಾಲಿತ ಪ್ಯಾರಾಗ್ಲೈಡರ್ ಜನಸಮೂಹದ ಮೇಲೆ ಮಯನ್ಮಾರ್ ಸೇನೆ ಎರಡು ಬಾಂಬ್‌ಗಳನ್ನು ಎಸೆದು ಮಕ್ಕಳು ಸೇರಿದಂತೆ 40 ಮಂದಿಯನ್ನು ಹತ್ಯೆ ಮಾಡಿದ್ದು 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಯನ್ಮಾರ್ ನಲ್ಲಿ ರಾಷ್ಟ್ರೀಯ ರಜಾದಿನವಾದ ಮತ್ತು ಬೌದ್ಧಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಥಾಡಿಂಗ್ಯುಟ್ ಹಬ್ಬವನ್ನು ಆಚರಿಸಲು ಸುಮಾರು 100 ಜನರು ಸೇರಿದ್ದಾಗ ಸೇನೆ ಈ ದುಷ್ಕೃತ್ಯ ಎಸಗಿದೆ. ಪ್ಯಾರಾಗ್ಲೈಡರ್ ಜನಸಮೂಹದ ಮೇಲೆ ಎರಡು ಬಾಂಬ್‌ಗಳನ್ನು ಎಸೆದಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೇನೆಯ ನೀತಿಗಳ ವಿರುದ್ಧ ಪ್ರತಿಭಟನೆಯಾಗಿ ಉತ್ಸವದ ಸಮಯದಲ್ಲಿ ಮೌನ ಬೆಳಕಿನ ಪ್ರದರ್ಶನವನ್ನು ಸಹ ನಡೆಸಲಾಯಿತು. 2021ರಲ್ಲಿ ಮಿಲಿಟರಿ ದಂಗೆಯ ನಂತರ ಮಯನ್ಮಾರ್ ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ವಿಶ್ವಸಂಸ್ಥೆ ಅಂದಾಜಿನ ಪ್ರಕಾರ, ಈ ಅಂತರ್ಯುದ್ಧದಲ್ಲಿ 5,000ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ.
ಥಾಡಿಂಗ್ಯುಟ್ ಉತ್ಸವದ ಮೇಲೆ ದಾಳಿ
ಥಾಡಿಂಗ್ಯುಟ್ ಉತ್ಸವದ ಮೇಲೆ ಸಂಭಾವ್ಯ ವಾಯುದಾಳಿಯ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಅಧಿಕಾರಿಯೊಬ್ಬರು ಬಿಬಿಸಿಗೆ ತಿಳಿಸಿದರು. ಅವರ ತಂಡವು ಪ್ರತಿಭಟನೆಯನ್ನು ಹತ್ತಿಕ್ಕಲು ಸ್ಥಳಕ್ಕೆ ಧಾವಿಸಲು ಪ್ರಯತ್ನಿಸಿತು. ಆದರೆ ಪ್ಯಾರಾಮೋಟಾರ್‌ಗಳು ಅವರಿಗಿಂತ ಮೊದಲೇ ಬಂದರು. ಪ್ಯಾರಾಗ್ಲೈಡರ್ ಬಂದು ಕೇವಲ ಏಳು ನಿಮಿಷಗಳಲ್ಲಿ ಎರಡು ಬಾಂಬ್‌ಗಳನ್ನು ಬೀಳಿಸಿದರು. ಮೊದಲ ಬಾಂಬ್ ಬಿದ್ದಾಗ ಹಲವು ಸಾವನ್ನಪ್ಪಿದ್ದು ನಾನು ಗಾಯಗೊಂಡೆ ಎಂದು ಅಧಿಕಾರಿ ಹೇಳಿದರು. ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಈ ಘಟನೆಯನ್ನು ಖಂಡಿಸಿದ್ದು, ಸಮುದಾಯಗಳ ಮೇಲೆ ದಾಳಿ ಮಾಡಲು ಸೇನೆ ಪ್ಯಾರಾಗ್ಲೈಡರ್‌ಗಳನ್ನು ಬಳಸುವುದು ಆತಂಕಕಾರಿ ಪ್ರವೃತ್ತಿಯಾಗಿದೆ ಎಂದು ಹೇಳಿದೆ. ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಕೊರತೆಯಿಂದಾಗಿ ಮಿಲಿಟರಿಯು ಪ್ಯಾರಾಮೋಟಾರ್‌ಗಳನ್ನು ಹೆಚ್ಚಾಗಿ ಬಳಸುತ್ತಿದೆ.

ಪಾಕಿಸ್ತಾನದಲ್ಲಿ ರಕ್ತದೋಕುಳಿ: ಎನ್ಕೌಂಟರ್ ವೇಳೆ Pak ಲೆಫ್ಟಿನೆಂಟ್ ಕರ್ನಲ್, ಮೇಜರ್ ಸೇರಿದಂತೆ 11 ಸೈನಿಕರ ಹತ್ಯೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


