ಪಾಕ್ಗೆ ತ್ರಿವಳಿ ಆಘಾತ: Indian Army, ಬಲೂಚ್ ಬಳಿಕ ರಣಾಂಗಣಕ್ಕಿಳಿದ Taliban; Pak ಸೇನಾ ವಾಹನ ಉಡೀಸ್, 20 ಸೈನಿಕರು ಸಾವು, Video Viral!
ತೆಹ್ರೀಕ್-ಇ-ತಾಲಿಬಾನ್ (TTP) ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಸೈನಿಕರನ್ನು ಲೇಸರ್ ರೈಫಲ್ಗಳನ್ನು ಬಳಸಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ.

ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ನೀಡುತ್ತಿದೆ. ಭಾರತೀಯ ಸೇನೆ ಮುಂದೆ ನಿಲ್ಲಲು ಸಾಧ್ಯವಾಗದೆ ಪಾಕಿಸ್ತಾನ ಸೇನೆ ಪತರುಗುಟ್ಟಿದೆ. ಇದೇ ಸಮಯದಲ್ಲಿ ಅತ್ತ ಬಲೂಚಿಸ್ತಾನದ ಆರ್ಮಿ ಪಡೆ ಸಹ ಪಾಕಿಸ್ತಾನದ ಸೇನೆ ಮೇಲೆ ಮುಗಿಬಿದ್ದಿದೆ. 12 ಪಾಕಿಸ್ತಾನ ಸೈನಿಕರು ತೆರಳುತ್ತಿದ್ದ ವಾಹನವನ್ನು ಸ್ಫೋಟಿಸಿದ್ದು ಸೈನಿಕರ ದೇಹಗಳು ಚೂರು ಚೂರಾಗಿದ್ದವು. ಈ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ತಾಲಿಬಾನ್ ಸಹ ಪಾಕಿಸ್ತಾನ ಸೇನೆ ಮೇಲೆ ಮುಗಿಬಿದ್ದಿದೆ.
ತೆಹ್ರೀಕ್-ಇ-ತಾಲಿಬಾನ್ (TTP) ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಸೈನಿಕರನ್ನು ಲೇಸರ್ ರೈಫಲ್ಗಳನ್ನು ಬಳಸಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ. ಭಾರತದೊಂದಿಗಿನ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನಕ್ಕೆ ಇದು ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ. ಈ ದಾಳಿಯನ್ನು ತೆಹ್ರೀಕ್-ಇ ತಾಲಿಬಾನ್ ನಡೆಸಿದ್ದು, ದಕ್ಷಿಣ ವಜೀರಿಸ್ತಾನದ ಶಕೈನಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದ ಸೇನಾ ವಾಹನಗಳು ಸಹ ನಾಶವಾಗಿದೆ. ಅಲ್ಲದೆ, ಈ ದಾಳಿಯಲ್ಲಿ, ಟಿಟಿಪಿ ಪಾಕಿಸ್ತಾನಿ ಸೇನೆಯ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಂಡಿದೆ.
ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ್ ಮಧ್ಯೆ ಪಾಕಿಸ್ತಾನ ಸೇನೆಗೆ ಎರಡು ಬಾರಿ ಹೊಡೆತ ಬಿದ್ದಿದ್ದು, ಬಲೂಚಿಸ್ತಾನ್ ಪ್ರಾಂತ್ಯದ ಬೋಲಾನ್ ಮತ್ತು ಕೆಚ್ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಗಳ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಹೊತ್ತುಕೊಂಡಿದೆ. ಈ ದಾಳಿಯಲ್ಲಿ 14 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೊದಲ ದಾಳಿಯಲ್ಲಿ, ಬಿಎಲ್ಎಯ ವಿಶೇಷ ಯುದ್ಧತಂತ್ರದ ಕಾರ್ಯಾಚರಣೆ ದಳವು ಶೋರ್ಕಂಡ್ ಪ್ರದೇಶದಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ರಿಮೋಟ್-ಕಂಟ್ರೋಲ್ಡ್ ಐಇಡಿ ಸ್ಫೋಟಿಸಿತು. ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದಂತೆ ಎಲ್ಲಾ 12 ಸೈನಿಕರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸ್ಫೋಟದಲ್ಲಿ ಸೇನಾ ವಾಹನಗಳು ಸಂಪೂರ್ಣವಾಗಿ ನಾಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



