'ಕಡೇ ಪಕ್ಷ ಆಕೆ ಸತ್ತಿದ್ದಾಳೆ ಎಂದಾದರೂ ಘೋಷಿಸಿ': ಡೊಮಿನಿಕಾ ಸರ್ಕಾರಕ್ಕೆ Sudiksha Konanki ಪೋಷಕರ ಅಳಲು!
ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಭಾರತ ಮೂಲದ ಸುದಿಕ್ಷಾ ಕೊನಂಕಿ ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್ 6ರಂದು ರಜೆ ನಿಮಿತ್ತ ಐವರು ಗೆಳೆಯರ ಜೊತೆ ಕಡಲ ತೀರದ ಡೊಮಿನಿಕನ್ ರಿಪಬ್ಲಿಕ್ಗೆ ಆಗಮಿಸಿದ್ದರು.

ನ್ಯೂಯಾರ್ಕ್: ಭಾರತ ಮೂಲದ ವಿದ್ಯಾರ್ಥಿನಿ ಸುದೀಕ್ಷಾ ಕೊನಂಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರ ಆಕ್ರಂದನ ಮುಂದುವರೆದಿದ್ದು, ಕನಿಷ್ಟ ಪಕ್ಷ ತಮ್ಮ ಮಗಳು ಸತ್ತಿದ್ದಾಳೆ ಎಂದಾದರೂ ಘೋಷಣೆ ಮಾಡಿ ಎಂದು ಡೊಮಿನಿಕಾ ಸರ್ಕಾರಕ್ಕೆ ಕೇಳಿದ್ದಾರೆ.
ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಭಾರತ ಮೂಲದ ಸುದಿಕ್ಷಾ ಕೊನಂಕಿ ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್ 6ರಂದು ರಜೆ ನಿಮಿತ್ತ ಐವರು ಗೆಳೆಯರ ಜೊತೆ ಕಡಲ ತೀರದ ಡೊಮಿನಿಕನ್ ರಿಪಬ್ಲಿಕ್ಗೆ ಆಗಮಿಸಿದ್ದರು.
ಅಂದು ರಾತ್ರಿ ಅವರು ನಾಪತ್ತೆಯಾಗಿದ್ದರು. ಸುದಿಕ್ಷಾ ನಾಪತ್ತೆಯಾಗಿ 11 ದಿನಗಳು ಕಳೆದಿದ್ದು ಆಕೆಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಸುದಿಕ್ಷಾ ಜೊತೆ ಹೋಗಿದ್ದ ನಾಲ್ವರು ಗೆಳೆಯರ ಪೈಕಿ ಜೋಷುವಾ ರೀಬೆ ಎಂಬ ವ್ಯಕ್ತಿಯನ್ನು ಬಂಧಿಸಿದ್ದು ಆತನ ವಿಚಾರಣೆ ನಡೆಸುತ್ತಿದ್ದಾರೆ.
ಮಗಳ ಹತ್ಯೆ ಕುರಿತು ಪೋಷಕರ ಶಂಕೆ
ಇನ್ನು ಸುದಿಕ್ಷಾಳನ್ನು ಹತ್ಯೆ ಮಾಡಿರಬಹುದು ಎಂದು ಆಕೆಯ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಡೊಮೆನಿಕಾದ ಸ್ಥಳೀಯ ಪೊಲೀಸರು ಸುದಿಕ್ಷಾ ಸಮುದ್ರದಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಆದರೆ ಸತತ ಶೋಧ ಕಾರ್ಯಾಚರಣೆ ಹೊರತಾಗಿಯೂ ಆಕೆಯ ದೇಹ ಪತ್ತೆಯಾಗಿಲ್ಲ.
ಈ ಕುರಿತು ಮಾತನಾಡಿರುವ ಡೊಮಿನಿಕನ್ ರಿಪಬ್ಲಿಕ್ ರಾಷ್ಟ್ರೀಯ ಪೊಲೀಸ್ ವಕ್ತಾರ ಡಿಯಾಗೋ ಪೆಸ್ಕ್ವೇರಾ, ಸುದಿಕ್ಷಾ ಕೊನಂಕಿ ಅವರ ಕುಟುಂಬವು ಆಕೆ ಸತ್ತಿದ್ದಾಳೆ ಎಂದು ಘೋಷಿಸುವಂತೆ ಮನವಿ ಪತ್ರ ನೀಡಿದೆ. ಆದರೆ ಈ ಮನವಿಗೆ ಸರ್ಕಾರ ಇನ್ನೂ ಉತ್ತರ ನೀಡಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಡೊಮಿನಿಕನ್ ರಿಪಬ್ಲಿಕ್ನ ಅಧಿಕಾರಿಗಳು ಸುದಿಕ್ಷಾರ ಸ್ನೇಹಿತ ರೈಬೆ ಪಾಸ್ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಪ್ರಕರಣದಲ್ಲಿ ರೈಬೆ ಅವರನ್ನು ಶಂಕಿತ ಎಂದು ಪರಿಗಣಿಸಲಾಗಿಲ್ಲ. ಅವರ ಮೇಲೆ ಯಾವುದೇ ತಪ್ಪು ಆರೋಪ ಹೊರಿಸಲಾಗಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ನಾಪತ್ತೆಯಾದ ಭಾರತೀಯ ಮೂಲ ವಿದ್ಯಾರ್ಥಿನಿ ಕೊನೆ ಬಾರಿಗೆ ಬೀಚ್ ನಲ್ಲಿ ಅಪರಿಚಿತ ವ್ಯಕ್ತಿ ಜೊತೆ ಸಿಕ್ಕಿದ್ದಳು!
ಗೆಳೆಯರ ಜತೆ ಇರುವ ವಿಡಿಯೊ ಲಭ್ಯ
ಇನ್ನು ಸುದಿಕ್ಷಾ ಕೊನಂಕಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಸ್ನೇಹಿತರ ಜೊತೆ ಇರುವ ವಿಡಿಯೊ ಲಭ್ಯವಾಗಿದೆ. ಡೊಮಿನಿಕನ್ ರಿಪಬ್ಲಿಕ್ ಕಡಲ ತೀರದಲ್ಲಿರುವ ಕ್ಲಬ್ನಲ್ಲಿ ಸುದಿಕ್ಷಾ ಕೊನಂಕಿ ಗೆಳೆಯರ ಜೊತೆ ಇರುವ ವಿಡಿಯೊ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದಿಕ್ಷಾ ತನ್ನ ಗೆಳೆಯರ ಜೊತೆ ಪಾರ್ಟಿ ಮಾಡುತ್ತಿರುವುದು, ಕ್ಲಬ್ ಆವರಣದಲ್ಲಿ ತಿರುಗಾಡುವ ದೃಶ್ಯಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.
ಸಮುದ್ರದಲ್ಲಿ ಮುಳುಗಿ ಸುದಿಕ್ಷಾ ಸಾವು?
ಇನ್ನು ಬಂಧಿತ ರೈಬೆ ತನಿಖಾಧಿಕಾರಿಗಳ ಬಳಿ ಹೇಳಿಕೊಂಡಿರುವಂತೆ ಸುದಿಕ್ಷಾ ಸಮುದ್ರದಲ್ಲಿ ಈಜಲಾಗದೇ ಮುಳುಗಿದ್ದಾಳೆ ಎಂದು ಹೇಳಿದ್ದಾರೆ. ತನಿಖಾಧಿಕಾರಿಗಳ ಜೊತೆ ನಾಲ್ಕನೇ ವಿಚಾರಣೆ ವೇಳೆ ರೈಬೆ, ಸುದಿಕ್ಷಾ ಬೀಚ್ ನಲ್ಲಿ ಅಲೆಗಳ ನಡುವೆ ಈಜಲಾಗದೇ ಆಯಾಸಗೊಂಡಿದ್ದಳು ಎಂದು ಆಕೆಯ ಕೊನೆಯ ಕ್ಷಣಗಳನ್ನು ವಿವರಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



