ಇಬ್ಬರು ಮಲಯಾಳಿ ಗೆಳತಿಯರ ಹತ್ಯೆ: ಒಬ್ಬರಿಗೆ ಚಾಕುವಿನಿಂದ ಇರಿದು, ಮತ್ತೊಬ್ಬರ ಮೇಲೆ ಕಾರು ಹತ್ತಿಸಿದ್ದ ಭಾರತ ಮೂಲದ ಮಹಿಳೆ ಬಂಧನ!
ಒಬ್ಬರನ್ನು ಚಾಕುವಿನಿಂದ ಇರಿದು ಮತ್ತು ಇನ್ನೊಬ್ಬರ ಮೇಲೆ ಕಾರು ಹರಿಸಿ ಭೀಕರವಾಗಿ ಹತ್ಯೆಗೈದ ಆರೋಪದ ಮೇಲೆ 32 ವರ್ಷದ ಭಾರತೀಯ ಮೂಲದ ಮಹಿಳೆ ಅನಿಲಾ ಬೇಬಿಯನ್ನು ಬಂಧಿಸಲಾಗಿದೆ.

ಹೂಸ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ತನ್ನ ಇಬ್ಬರು ಗೆಳತಿಯರನ್ನು ಕೊಲೆ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಒಬ್ಬರನ್ನು ಚಾಕುವಿನಿಂದ ಇರಿದು ಮತ್ತು ಇನ್ನೊಬ್ಬರ ಮೇಲೆ ಕಾರು ಹರಿಸಿ ಭೀಕರವಾಗಿ ಹತ್ಯೆಗೈದ ಆರೋಪದ ಮೇಲೆ 32 ವರ್ಷದ ಭಾರತೀಯ ಮೂಲದ ಮಹಿಳೆ ಅನಿಲಾ ಬೇಬಿಯನ್ನು ಬಂಧಿಸಲಾಗಿದೆ.
ಪೊಲೀಸ್ ಮತ್ತು ಮಾಧ್ಯಮ ವರದಿಗಳ ಪ್ರಕಾರ, 32 ವರ್ಷದ ಭಾರತೀಯ ಮೂಲದ ಮಹಿಳೆ ಅನಿಲಾ ಬೇಬಿ, ಸುಮಾರು 90 ನಿಮಿಷಗಳ ಅಂತರದಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ತನ್ನ ಸ್ನೇಹಿತೆಯರಾದ 35 ವರ್ಷದ ಆನ್ ಮೇರಿ ಮ್ಯಾಥ್ಯೂ ಮತ್ತು 35 ವರ್ಷದ ಅಂಜನಾ ಹರಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿ ಮತ್ತು ಮೃತಪಟ್ಟ ಇಬ್ಬರೂ ಮಹಿಳೆಯರು ಆಕೆಯ ಸ್ನೇಹಿತೆಯರಾಗಿದ್ದು, ಮೂಲತಃ ಕೇರಳದವರಾಗಿದ್ದಾರೆ.
ಈ ಹತ್ಯೆಗಳು ಆಗಸ್ಟ್ 28 ರಂದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ 'ಸೌತ್ ಬೇ' ಪ್ರದೇಶದಲ್ಲಿರುವ ಸ್ಯಾನ್ ಜೋಸ್ ಮತ್ತು ಮಿಲ್ಪಿತಾಸ್ ಎಂಬ ಎರಡು ನಗರಗಳಲ್ಲಿ ನಡೆದಿವೆ; ಈ ನಗರಗಳು ಪರಸ್ಪರ 20 ಕಿಲೋಮೀಟರ್‌ಗಿಂತ ಕಡಿಮೆ ಅಂತರದಲ್ಲಿವೆ.
ಪ್ರಕರಣ ತನಿಖೆ ನಡೆಸಿದ ಅಧಿಕಾರಿಗಳು ಈ ಎರಡು ಹತ್ಯೆಗಳ ನಡುವೆ ಸಂಬಂಧವಿರುವುದನ್ನು ಪತ್ತೆಹಚ್ಚಿದರು ಮತ್ತು ಬೇಬಿಯನ್ನು ಶಂಕಿತ ಆರೋಪಿ ಎಂದು ಗುರುತಿಸಿದರು ಎಂದು 'ಎಬಿಸಿ7 ನ್ಯೂಸ್' ವರದಿ ಮಾಡಿದೆ.
ಅದೇ ದಿನ ಬೇಬಿಯನ್ನು ವಶಕ್ಕೆ ಪಡೆಯಲಾಯಿತು ಮತ್ತು ಆರಂಭದಲ್ಲಿ ಮಿಲ್ಪಿತಾಸ್‌ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ ಅವರ ಮೇಲೆ ಆರೋಪ ಹೊರಿಸಲಾಯಿತು.
ತ್ರಿಶೂರ್‌ನಲ್ಲಿರುವ ಅಂಜನಾ ಕುಟುಂಬದವರು,ಆಕೆಯ ಸ್ನೇಹಿತೆಯಾದ ಅನಿಲಾ ಎಂಬಾಕೆಯೇ ಅಂಜನಾಳನ್ನು ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಿದ್ದರು. ಅಂಜನಾಳ ಸೋದರಸಂಬಂಧಿ ವಿನೋದ್ ಪ್ರಕಾರ, ಅಂಜನಾ ಮತ್ತು ಅನಿಲಾ ಇಬ್ಬರಿಗೂ ಸ್ನೇಹಿತೆಯಾಗಿದ್ದ ಆನ್ ಮೇರಿ ಅವರ ಹತ್ಯೆಯಲ್ಲೂ ಅನಿಲಾಳ ಕೈವಾಡವಿರಬಹುದು ಎಂದು ಶಂಕಿಸಿದ್ದರು. ಈ ಮೂವರು ಒಂದೇ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



