ವಿದೇಶ

Iran-Israel war: ಅಮೆರಿಕಾ ಕ್ರಮ ದಿಟ್ಟ ಹೆಜ್ಜೆ ಎಂದ ನೆತನ್ಯಾಹು; ಡೊನಾಲ್ಡ್ ಟ್ರಂಪ್ ಕೊಂಡಾಡಿದ ಇಸ್ರೇಲ್ ಪ್ರಧಾನಿ

ಶಕ್ತಿಯ ಮೂಲಕವು ಶಾಂತಿ ಸ್ಥಾಪಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮೊದಲು ಶಕ್ತಿ ಪ್ರದರ್ಶನವಾದರೆ ನಂತರ ಶಾಂತಿ ನೆಲೆಸುತ್ತದೆ.

Iran-Israel war: ಅಮೆರಿಕಾ ಕ್ರಮ ದಿಟ್ಟ ಹೆಜ್ಜೆ ಎಂದ ನೆತನ್ಯಾಹು; ಡೊನಾಲ್ಡ್ ಟ್ರಂಪ್ ಕೊಂಡಾಡಿದ ಇಸ್ರೇಲ್ ಪ್ರಧಾನಿ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Published On :

ಟೆಲ್ ಅವೀವ್: ಅಣುಸ್ಥಾವರಗಳ ಮೇಲೆ ಏರ್‌ ಸ್ಟ್ರೈಕ್‌ ಮಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಕೊಂಡಾಡಿದ್ದು, ಇದೊಂದು ದಿಟ್ಟ ಹೆಜ್ಜೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೊ ಪೋಸ್ಟ್‌ ಮಾಡಿರುವ ಅವರು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಂಡಾಡಿದ್ದಾರೆ.

ಇದು ಅತ್ಯಂತ ಯಶಸ್ವಿ ದಾಳಿಯಾಗಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಶಕ್ತಿಯ ಮೂಲಕವು ಶಾಂತಿ ಸ್ಥಾಪಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮೊದಲು ಶಕ್ತಿ ಪ್ರದರ್ಶನವಾದರೆ ನಂತರ ಶಾಂತಿ ನೆಲೆಸುತ್ತದೆ. ಅಮೆರಿಕ ನಿಜವಾಗಿಯೂ ವಿಶಿಷ್ಟವಾಗಿದೆ. ಭೂಮಿಯ ಮೇಲಿನ ಯಾವುದೇ ದೇಶ ಮಾಡಲು ಸಾಧ್ಯವಾಗದ ಕೆಲಸವನ್ನು ಅದು ಮಾಡಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.