ಐರ್ಲೆಂಡ್ನಲ್ಲಿ ಭಾರತೀಯರ ಮೇಲಿನ ಹಲ್ಲೆ ಹೆಚ್ಚಳ: 20 ವರ್ಷಗಳಿಂದ ವಾಸಿಸುತ್ತಿದ್ದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ಕಳೆದ ವಾರವಷ್ಟೆ 6 ವರ್ಷದ ಬಾಲಕಿ ಮೇಲೆ ಹಲ್ಲೆ ಮಾಡಲಾಗಿದ್ದು ಇದೀಗ ಕೆಲಸಕ್ಕೆ ಹೋಗುತ್ತಿದ್ದ 51 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.

ಐರ್ಲೆಂಡ್ನಲ್ಲಿ ಭಾರತೀಯರ ಮೇಲೆ ಹಿಂಸಾತ್ಮಕ ದಾಳಿಗಳು ಮುಂದುವರೆಯುತ್ತಿದೆ. ಕಳೆದ ವಾರವಷ್ಟೆ 6 ವರ್ಷದ ಬಾಲಕಿ ಮೇಲೆ ಹಲ್ಲೆ ಮಾಡಲಾಗಿದ್ದು ಇದೀಗ ಕೆಲಸಕ್ಕೆ ಹೋಗುತ್ತಿದ್ದ 51 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ. ಸಂತ್ರಸ್ತ ಲಕ್ಷ್ಮಣ್ ದಾಸ್ 22 ವರ್ಷಗಳಿಂದ ಐರ್ಲೆಂಡ್ನಲ್ಲಿ ವಾಸಿಸುತ್ತಿದ್ದು ಐರಿಶ್ ಪ್ರಜೆಯಾಗಿದ್ದಾರೆ. ಎರಡು ಮಕ್ಕಳ ತಂದೆಯಾದ ದಾಸ್, ಡಬ್ಲಿನ್ನ ಅನಂತರಾ ದಿ ಮಾರ್ಕರ್ ಹೋಟೆಲ್ನಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆಗಸ್ಟ್ 6ರ ಬೆಳಿಗ್ಗೆ ಅವರು ತಮ್ಮ ಇ-ಬೈಕ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಮೂವರ ತಂಡ ಅವರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದೆ. ದಾಸ್ ಅವರನ್ನು ಅಡ್ಡಗಟ್ಟಿದ ಗುಂಪು ಹೊಡೆಯಲು ಪ್ರಾರಂಭಿಸಿದೆ. ಇದರಿಂದಾಗಿ ಅವರ ಹೆಲ್ಮೆಟ್ ಮುರಿಯಿತು. ಘಟನೆಯ ಸಮಯದಲ್ಲಿ ಅವರ ಫೋನ್, ಕ್ರೆಡಿಟ್ ಕಾರ್ಡ್, ನಗದು ಮತ್ತು ಎಲೆಕ್ಟ್ರಿಕ್ ಬೈಕ್ ಅನ್ನು ಸಹ ಕದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಹಲ್ಲೆಯ ನಂತರ ಲಕ್ಷ್ಮಣ್ ದಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಕಾಲುಗಳು, ಕಣ್ಣು, ಭುಜ ಮತ್ತು ತೋಳಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾರೆ. ದಾಳಿಯಿಂದ ಚೇತರಿಸಿಕೊಳ್ಳಲು ಅವರು ಪ್ರಸ್ತುತ ರಜೆ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಆಗ್ನೇಯ ಐರ್ಲೆಂಡ್ನ ವಾಟರ್ಫೋರ್ಡ್ ನಗರದಲ್ಲಿ ವಾಸವಾಗಿರುವ ಕೇರಳ ಮೂಲದ ಸದ್ಯ ಐರಿಶ್ ಪ್ರಜೆಯಾಗಿರುವ ಅನುಪ ಅಚ್ಯುತನ್ ಅವರ ಆರು ವರ್ಷದ ಮಗಳು ನಿಯಾ ನವೀನ್ ಮೇಲೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ವೇಳೆ ಭಾರತಕ್ಕೆ ಹೋಗಿ ಎಂದು ಘೋಷಣೆಗಳನ್ನು ಕೂಗಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



