ಏಪ್ರಿಲ್ 8 ರೊಳಗೆ ಪ್ರತೀಕಾರದ ಯೋಜನೆ ಕೈಬಿಡದಿದ್ದರೆ ಚೀನಾದ ಮೇಲೆ ಶೇ. 50 ರಷ್ಟು ಸುಂಕ: ಟ್ರಂಪ್ ಬೆದರಿಕೆ
ಕಳೆದ ವಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳವನ್ನು ಘೋಷಿಸಿದ ನಂತರ ಚೀನಾ ಪ್ರತೀಕಾರದ ಕ್ರಮ ತೆಗೆದುಕೊಂಡಿತ್ತು.

ವಾಷಿಂಗ್ಟನ್: ಚೀನಾ ಪ್ರತೀಕಾರದ ತೆರಿಗೆ ಹಿಂಪಡೆಯದಿದ್ದರೆ ಆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬೆದರಿಕೆ ಹಾಕಿದ್ದಾರೆ. ನಮಗೆ ಬೇಕಾದ ಇತರ ರಾಷ್ಟ್ರಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸುವುದಾಗಿ ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಟ್ರಂಪ್, ನಾಳೆ ಅಂದರೆ ಏಪ್ರಿಲ್ 8, 2025 ರೊಳಗೆ ಚೀನಾವು ಶೇ. 34 ರಷ್ಟು ಪ್ರತೀಕಾರದ ತೆರಿಗೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಅಮೆರಿಕ ಚೀನಾದ ಮೇಲೆ ಶೇ. 50 ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸುತ್ತದೆ. ಇದು ಏಪ್ರಿಲ್ 9 ರಿಂದ ಜಾರಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಕಳೆದ ವಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳವನ್ನು ಘೋಷಿಸಿದ ನಂತರ ಚೀನಾ ಪ್ರತೀಕಾರದ ಕ್ರಮ ತೆಗೆದುಕೊಂಡಿತ್ತು.
ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ನಂತರ ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಶೇ. 20 ರಷ್ಟು ಸುಂಕ ಘೋಷಿಸಿದ್ದ ಟ್ರಂಪ್, ಬುಧವಾರದಿಂದ ಶೇ. 34 ರಷ್ಟು ತೆರಿಗೆ ವಿಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಕೂಡಾ ಅಮೆರಿಕ ಸರಕುಗಳ ಮೇಲೆ ತೆರಿಗೆ ವಿಧಿಸಿದ್ದು, ಏಪ್ರಿಲ್ 10 ರಂದು ಜಾರಿಗೆ ತರಲು ನಿರ್ಧರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಚೀನಾದ ತೆರಿಗೆ ನೀತಿಯನ್ನು ಟೀಕಿಸಿರುವ ಟ್ರಂಪ್, ಚೀನಾದೊಂದಿಗಿನ ಎಲ್ಲಾ ಮಾತುಕತೆಗಳನ್ನು ಕೊನೆಗೊಳಿಸಲಾಗುವುದು. ಆದರೆ "ಬೇರೆ ದೇಶಗಳೊಂದಿಗೆ ಮಾತುಕತೆ, ಸಭೆಯನ್ನು ತಕ್ಷಣವೇ ಪ್ರಾರಂಭಿಸುತ್ತವೆ ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



