Video: ಮೆಕ್ಸಿಕೋ ವೈಮಾನಿಕ ಪ್ರದರ್ಶನದಲ್ಲಿ ದುರಂತ: "Top Gun: Maverick" ಹಾಲಿವುಡ್ ಚಿತ್ರದ Instructor ಸಾವು!
ಕ್ಯಾಲಿಫೋರ್ನಿಯಾದ ಚಾರ್ಲ್ಸ್ ಥಾಮಸ್ "ಚಕ್" ಕೋಲ್ಮನ್ ಈ ದುರಂತದಲ್ಲಿ ಸಾವನ್ನಪ್ಪಿದ್ದು, ಕೋಲ್ಮನ್ ಚಲಿಸುತ್ತಿದ್ದ ವಿಮಾನ ಆಗಸದಲ್ಲಿ ಒಂದೆರಡು ಸಾಹಸ ಪ್ರವೃತ್ತಿಗಳನ್ನು ಪ್ರದರ್ಶಿಸಿತಾದರೂ ಬಳಿಕ ನಿಯತ್ರಣ ತಪ್ಪಿ ನೇರವಾಗಿ ಭೂಮಿ ಅಪ್ಪಳಿಸಿ ಸ್ಫೋಟಗೊಂಡಿತು ಎನ್ನಲಾಗಿದೆ

ಮೆಕ್ಸಿಕೋ: ನ್ಯೂ ಮೆಕ್ಸಿಕೋ ಏರ್ ಶೋನಲ್ಲಿ ದುರಂತ ಸಂಭವಿಸಿದ್ದು, ಹಾಲಿವುಡ್ ಚಿತ್ರ "Top Gun: Maverick" ನ ತರಬೇತುದಾರ ವಿಮಾನ ಪತನವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕ್ಯಾಲಿಫೋರ್ನಿಯಾದ ಚಾರ್ಲ್ಸ್ ಥಾಮಸ್ "ಚಕ್" ಕೋಲ್ಮನ್ ಈ ದುರಂತದಲ್ಲಿ ಸಾವನ್ನಪ್ಪಿದ್ದು, ಕೋಲ್ಮನ್ ಚಲಿಸುತ್ತಿದ್ದ ವಿಮಾನ ಆಗಸದಲ್ಲಿ ಒಂದೆರಡು ಸಾಹಸ ಪ್ರವೃತ್ತಿಗಳನ್ನು ಪ್ರದರ್ಶಿಸಿತಾದರೂ ಬಳಿಕ ನಿಯತ್ರಣ ತಪ್ಪಿ ನೇರವಾಗಿ ಭೂಮಿ ಅಪ್ಪಳಿಸಿ ಸ್ಫೋಟಗೊಂಡಿತು ಎನ್ನಲಾಗಿದೆ.
ಈ ದುರಂತದಲ್ಲಿ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಚಾರ್ಲ್ಸ್ ಥಾಮಸ್ "ಚಕ್" ಕೋಲ್ಮನ್ ಸಾವನ್ನಪ್ಪಿದ್ದಾರೆ.
ಇದೇ ಕೋಲ್ಮನ್ ಈ ಹಿಂದೆ ಹಾಲಿವುಡ್ ಚಿತ್ರ "Top Gun: Maverick" ನ ತರಬೇತುದಾರರಾಗಿ ಕೆಲಸ ಮಾಡಿದ್ದರು. ಅಲ್ಲದೆ ಕೋಲ್ಮನ್, 10,000 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿದ್ದು, ಅದಾಗ್ಯೂ ಕೋಲ್ಮನ್ ವಿಮಾನ ಪತನದ ಕುರಿತು ಅಧಿಕಾರಿಗಳೇ ಆಘಾತ ವ್ಯಕ್ತಪಡಿಸಿದ್ದಾರೆ. ವಿಮಾನ ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಚಾರ್ಲ್ಸ್ ಥಾಮಸ್ "ಚಕ್" ಕೋಲ್ಮನ್ ವಿಮಾನ ಎಂಜಿನಿಯರ್, ಏರೋಬ್ಯಾಟಿಕ್ ಮತ್ತು ಪರೀಕ್ಷಾ ಪೈಲಟ್ ಆಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅವರ ಈ ಅನುಭವಗಳಿಂದಾಗಿಯೇ ಅವರನ್ನು "Top Gun: Maverick" ಸೇರಿದಂತೆ ಹಲವು ಚಿತ್ರಗಳಲ್ಲಿ ತರಬೇತುದಾರನ್ನಾಗಿ ನೇಮಕ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



