Bangladesh: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಬಾಂಗ್ಲಾದೇಶ ನ್ಯಾಯಾಲಯ
77 ವರ್ಷದ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಢಾಕಾ: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಕ್ರಾಂತಿಯಿಂದ ಅಧಿಕಾರದಿಂದ ಕೆಳಗಿಳಿದ ನಂತರ ಆಗಸ್ಟ್‌ನಲ್ಲಿ ಭಾರತಕ್ಕೆ ಪಲಾಯನವಾಗಿದ್ದ ದೇಶಭ್ರಷ್ಟ ಮಾಜಿ ನಾಯಕಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ನ್ಯಾಯಾಲವೊಂದು ಗುರುವಾರ ಬಂಧನ ವಾರಂಟ್‌ಗೆ ಆದೇಶಿಸಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಂಧಿಸಿ ನವೆಂಬರ್ 18 ರಂದು ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಬಾಂಗ್ಲಾದೇಶದ ಅಂತಾರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಾಜುಲ್ ಇಸ್ಲಾಂ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ತನ್ನ ರಾಜಕೀಯ ವಿರೋಧಿಗಳ ಸಾಮೂಹಿಕ ಬಂಧನ, ಕಾನೂನುಬಾಹಿರ ಹತ್ಯೆ ಸೇರಿದಂತೆ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯೊಂದಿಗೆ ಹಸೀನಾ ಅವರ 15 ವರ್ಷಗಳ ಆಳ್ವಿಕೆ ಅಂತ್ಯಗೊಂಡಿತ್ತು. 77 ವರ್ಷದ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ನವದೆಹಲಿಯ ಮಿಲಿಟರಿ ವಾಯು ಸೇನೆಯಲ್ಲಿ ಕೊನೆಯ ಬಾರಿಗೆ ಅವರು ಕಾಣಿಸಿಕೊಂಡಿದ್ದರು. ಅವರು ಭಾರತದಲ್ಲಿರುವುದು ಬಾಂಗ್ಲಾದೇಶವನ್ನು ಕೆರಳಿಸಿದೆ.
ಬಾಂಗ್ಲಾದೇಶ ಆಕೆಯ ರಾಜತಾಂತ್ರಿಕ ಪಾಸ್‌ಪೋರ್ಟ್ ಹಿಂತೆಗೆದುಕೊಂಡಿದೆ ಮತ್ತು ಉಭಯ ದೇಶಗಳು ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಮಾಡಿಕೊಂಡಿದ್ದು, ಅದು ಆಕೆ ಕ್ರಿಮಿನಲ್ ವಿಚಾರಣೆಯನ್ನು ಎದುರಿಸಲು ಮರಳಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಒಪ್ಪಂದದಲ್ಲಿನ ಒಂದು ಷರತ್ತು ಅಪರಾಧವು ರಾಜಕೀಯ ಸ್ವರೂಪದಲ್ಲಿದ್ದರೆ ಹಸ್ತಾಂತರವನ್ನು ನಿರಾಕರಿಸಬಹುದು ಎಂದು ಹೇಳುತ್ತದೆ.
1971ರಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪಾಕಿಸ್ತಾನದ ಆದ ದೌರ್ಜನ್ಯವನ್ನು ತನಿಖೆ ಮಾಡಲು ವಿವಾದಾತ್ಮಕ ICT ಅನ್ನು ಹಸೀನಾ ಸರ್ಕಾರ ರಚಿಸಿತ್ತು. ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಗುಂಪುಗಳು ಅದರ ಕಾರ್ಯವಿಧಾನದ ನ್ಯೂನತೆಗಳನ್ನು ಟೀಕಿಸಿದವು ಮತ್ತು ರಾಜಕೀಯ ವಿರೋಧಿಗಳ ನಿರ್ಮೂಲನೆಗೆ ಹಸೀನಾಗೆ ಇದು ಒಂದು ಸಾಧನವಾಗಿ ಕಂಡುಬಂದಿತ್ತು. ಪ್ರತಿಭಟನಾಕಾರರ ಸಾಮೂಹಿಕ ಹತ್ಯೆಗೆ ಹಸೀನಾ ಯೋಜಿಸಿದ್ದರು ಎಂದು ಆರೋಪಿಸಿರುವ ಹಲವಾರು ಪ್ರಕರಣಗಳ ಕುರಿತು ನ್ಯಾಯಾಲಯ ತನಿಖೆ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



