ಅಮೆರಿಕದ ವೈಟ್ ಹೌಸ್ ನಲ್ಲಿ ಮೊಳಗಿದ 'ಸಾರೆ ಜಹಾನ್ ಸೇ ಅಚ್ಚಾ'!
ಶ್ವೇತಭವನದ ಮೆರೈನ್ ಬ್ಯಾಂಡ್ ಸೋಮವಾರ ಭಾರತದ ದೇಶಭಕ್ತಿಗೀತೆ ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿತು.

ವಾಷಿಂಗ್ಟನ್: ಅಮೆರಿಕದ ವೈಟ್ ಹೌಸ್ ನಲ್ಲಿ ಆಯೋಜಿಸಲಾಗಿದ್ದ ಏಷಿಯನ್ ಅಮೆರಿಕನ್, ಸ್ಥಳೀಯ ಹವಾಯಿಯನ್ ಮತ್ತು ಪೆಸಿಫಿಕ್ ಐಲ್ಯಾಂಡರ್ ಪಾರಂಪರ್ಯ ಮಾಸಾಚರಣೆ ಕಾರ್ಯಕ್ರಮದಲ್ಲಿ ಶ್ವೇತಭವನದ ಮೆರೈನ್ ಬ್ಯಾಂಡ್ ಸೋಮವಾರ ಭಾರತದ ದೇಶಭಕ್ತಿಗೀತೆ ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿತು. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರೀಸ್ ಅವರು ಭಾಗವಹಿಸಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮೊಹಮ್ಮದ್ ಇಕ್ಬಾಲ್ ಅವರು ಬರೆದ ದೇಶಭಕ್ತಿ ಗೀತೆಯನ್ನು, ವಾರ್ಷಿಕ ಕಾರ್ಯಕ್ರಮಕ್ಕೆ ಅಧ್ಯಕ್ಷರಿಂದ ಆಹ್ವಾನಿಸಲ್ಪಟ್ಟ ಭಾರತೀಯ ಅಮೆರಿಕನ್ನರ ಕೋರಿಕೆಯ ಮೇರೆಗೆ ವೈಟ್ ಹೌಸ್ ಮೆರೈನ್ ಬ್ಯಾಂಡ್ ಎರಡು ಬಾರಿ ನುಡಿಸಿತು.
"ಇದು ರೋಸ್ ಗಾರ್ಡನ್ನಲ್ಲಿ ವೈಟ್ ಹೌಸ್ನ AANHPI ಹೆರಿಟೇಜ್ ಮಾಸಾಚರಣೆಯ ಅದ್ಭುತ ಆಚರಣೆಯಾಗಿದೆ. ಅತ್ಯುತ್ತಮ ಭಾಗವೆಂದರೆ, ನಾನು ಶ್ವೇತಭವನಕ್ಕೆ ಕಾಲಿಡುತ್ತಿದ್ದಂತೆ, 'ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ' ನುಡಿಸುತ್ತಾ ಸಂಗೀತಗಾರರು ನನ್ನನ್ನು ಸ್ವಾಗತಿಸಿದರು. ಇಡೀ ಪ್ರಪಂಚಕ್ಕಿಂತ ಉತ್ತಮವಾದುದು ನಮ್ಮ ಹಿಂದೂಸ್ತಾನ್" ಎಂದು ಭಾರತೀಯ ಅಮೆರಿಕನ್ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಇದು ಎರಡನೇ ಬಾರಿ ಶ್ವೇತಭವನದಲ್ಲಿ ಜನಪ್ರಿಯ ಭಾರತೀಯ ದೇಶಭಕ್ತಿ ಗೀತೆಯನ್ನು ನುಡಿಸಲಾಗಿದೆ. ಕಳೆದ ವರ್ಷ ಜೂನ್ 23 ರಂದು ಪ್ರಧಾನಿ ನರೇಂದ್ರ ಮೋದಿಯವರ ಐತಿಹಾಸಿಕ ಅಮೆರಿಕ ಭೇಟಿಯ ಸಮಯದಲ್ಲಿ ಈ ದೇಶಭಕ್ತಿಗೀತೆಯನ್ನು ಹಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



