ಪತ್ರಕರ್ತೆ ಜೊತೆ ಸೌದಿ ಅರೇಬಿಯಾದ ರೋಬೋ ಅನುಚಿತ ವರ್ತನೆ! ವೀಡಿಯೋ ವೈರಲ್!
ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ಜೊತೆ ಅನುಚಿತ ವರ್ತನೆ ತೋರಿದ ಆರೋಪ ಸೌದಿ ಅರೇಬಿಯಾದ ಮೊದಲ ರೋಬೋ ವಿರುದ್ಧ ಕೇಳಿಬಂದಿದೆ.

ಸೌದಿ ಅರೇಬಿಯಾ: ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ಜೊತೆ ಅನುಚಿತ ವರ್ತನೆ ತೋರಿದ ಆರೋಪ ಸೌದಿ ಅರೇಬಿಯಾದ ಮೊದಲ ರೋಬೋ ವಿರುದ್ಧ ಕೇಳಿಬಂದಿದೆ. ಪತ್ರಕರ್ತೆಗೆ ಆಂಡ್ರಾಯ್ಡ್ ರೋಬೋ ಮುಹಮ್ಮದ್ ಕಿರುಕುಳ ನೀಡಿದೆ ಎನ್ನಲಾದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ರೋಬೋವನ್ನು ಪರಿಚಯಿಸಿದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಈ ಘಟನೆ ವರದಿಯಾಗಿದೆ. 8 ಸೆಕೆಂಡ್ ಗಳ ಅವಧಿಯ ಈ ವೀಡಿಯೋದಲ್ಲಿ ಪತ್ರಕರ್ತೆ ರವಿಯಾ ಅಲ್ ಕಾಸಿಮಿ ಹಿಂದೆ ನಿಲ್ಲಿಸಲಾಗಿದ್ದ ರೋಬೋ ಕೈಗಳು ಆಕೆಯನ್ನು ಮುಟ್ಟಲು ಯತ್ನಿಸುತ್ತಿರುವುದು ಸೆರೆಯಾಗಿದೆ.
ರೋಬೋ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್-ಖಾಸಿಮಿ ಕ್ಷಣಕಾಲ ತನ್ನ ಕೈಯನ್ನು ಎತ್ತಬೇಕಾಯಿತು. ಈ ಘಟನೆಯು ಆಕಸ್ಮಿಕ ಸ್ಪರ್ಶಕ್ಕೆ ಕಾರಣವಾಗುವ ಪ್ರೋಗ್ರಾಮ್ ಮಾಡಿದ ಕೈ ಚಲನೆಯ ಪರಿಣಾಮವಾಗಿದೆ ಎಂದು ಕೆಲವರು ವಾದಿಸಿದರೆ, ಇತರರು ರೋಬೋಟ್‌ನ ಕ್ರಮಗಳು ಕಿರುಕುಳವನ್ನು ತೋರುತ್ತದೆ ಎಂದು ವಾದಿಸಿದ್ದಾರೆ. ಈ ಘಟನೆ ನಡೆದಾಗ ಪತ್ರಕರ್ತೆ ಮುಖದಲ್ಲಿ ವ್ಯಕ್ತವಾದ ಅಹಿತಕರ ಭಾವನೆ ರೋಬೋ ಕಿರುಕುಳ ನೀಡಲು ಯತ್ನಿಸಿತ್ತು ಎಂಬುದಕ್ಕೆ ಸಾಕ್ಷಿ ಎಂದು ಅನೇಕರು ಹೇಳಿದ್ದಾರೆ.
ಇಂತಹ ರೋಬೋವನ್ನು ಯಾರು ಪ್ರೋಗ್ರಾಮ್ ಮಾಡಿದ್ದು ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಕ್ಯೂಎಸ್ಎಸ್ ಸಿಸ್ಟಮ್ಸ್ ಸೌದಿ ಅರೇಬಿಯಾದಲ್ಲಿ ಮುಹಮ್ಮದ್ ಎಂಬ ಮೊದಲ ಪುರುಷ ರೋಬೋಟ್ ನ್ನು ತಯಾರಿಸಿದ್ದು ಇದನ್ನು ಸಾರಾಗೆ ಪ್ರತಿರೂಪವಾಗಿ ವಿನ್ಯಾಸಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



