ಇಮ್ರಾನ್ ಖಾನ್ ಪರ ಅಭ್ಯರ್ಥಿಗೆ ಹಿನ್ನಡೆ: 2ನೇ ಬಾರಿಗೆ ಪಾಕಿಸ್ತಾನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ
ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಹಿರಿಯ ನಾಯಕ ಶೆಹಬಾಜ್ ಷರೀಫ್ ಮತ್ತೊಮ್ಮೆ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಮತದಾನದ ನಂತರ ಪ್ರಧಾನಿಯಾಗಿ ಆಯ್ಕೆಯಾದರು.

ಇಸ್ಲಾಮಾಬಾದ್: ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಹಿರಿಯ ನಾಯಕ ಶೆಹಬಾಜ್ ಷರೀಫ್ ಮತ್ತೊಮ್ಮೆ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಮತದಾನದ ನಂತರ ಪ್ರಧಾನಿಯಾಗಿ ಆಯ್ಕೆಯಾದರು.
ಶಹಬಾಜ್ ಷರೀಫ್ ಅವರು ನಿನ್ನೆ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಮತದಾನಕ್ಕೆ ಮುಂಚೆಯೇ, ಅಂಕಿಅಂಶಗಳು ಪಿಎಂಎಲ್-ಎನ್ ಪರವಾಗಿದ್ದು ದೇಶದ ಆಜ್ಞೆಯು ಮತ್ತೊಮ್ಮೆ ಶೆಹಬಾಜ್ ಷರೀಫ್ ಅವರ ಪರವಾಗಿ ಬರುತ್ತದೆ ಎಂದು ನಂಬಲಾಗಿತ್ತು. ಈಗ ಅದೇ ರೀತಿ ಆಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ನಾಯಕ ಒಮರ್ ಅಯೂಬ್ ಖಾನ್ ಸಹ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದು ಅವರಿಗೆ ಸೋಲಾಗಿದೆ.
ಯಾರಿಗೆ ಎಷ್ಟು ಮತಗಳು?
ಪಾಕಿಸ್ತಾನ ಸಂಸತ್ತಿನಲ್ಲಿ ಇಂದು ಪ್ರಧಾನಿ ಆಯ್ಕೆಗೆ ಮತದಾನ ನಡೆಯಿತು. ಮತದಾನದ ವೇಳೆ ಶಹಬಾಜ್ ಅವರು ತಮ್ಮ ಪ್ರತಿಸ್ಪರ್ಧಿಗಿಂತ 100ಕ್ಕೂ ಹೆಚ್ಚು ಮತಗಳ ಮುನ್ನಡೆ ಗಳಿಸಿದರು. ಶೆಹಬಾಜ್ ಷರೀಫ್ ಒಟ್ಟು 201 ಮತಗಳನ್ನು ಪಡೆದರೆ, ಪಿಟಿಐನ ಒಮರ್ ಅಯೂಬ್ ಖಾನ್ 92 ಮತಗಳನ್ನು ಪಡೆದರು. ಇದಾದ ಬಳಿಕ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಹಬಾಜ್ ಷರೀಫ್ ಹೆಸರನ್ನು ಘೋಷಿಸಲಾಯಿತು. ನಾಳೆ ಶಹಬಾಜ್ ಷರೀಫ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
PPP ಮತ್ತು MQM ಜೊತೆ ಮೈತ್ರಿ
ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ. ಇದರ ನಂತರ, ನವಾಜ್ ಷರೀಫ್ ಅವರ ಪಕ್ಷವಾದ ಪಿಎಂಎಲ್-ಎನ್ ಪಿಪಿಪಿ ಮತ್ತು ಎಂಕ್ಯೂಎಂ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ನಿರ್ಧರಿಸಿತ್ತು. ಶೆಹಬಾಜ್ ಷರೀಫ್ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ. ಪಕ್ಷದ ಪರವಾಗಿ ಪ್ರಧಾನಿ ಅಭ್ಯರ್ಥಿಗೆ ನಾಮಪತ್ರ ಸಲ್ಲಿಸಿದ್ದರು. ಶಹಬಾಜ್ ಷರೀಫ್ ಈ ಹಿಂದೆ ಏಪ್ರಿಲ್ 2022 ರಿಂದ ಆಗಸ್ಟ್ 2023 ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಆ ಸಮಯದಲ್ಲಿ ಅವರು ಪಿಪಿಪಿಯೊಂದಿಗೆ ಸರ್ಕಾರ ರಚಿಸಿದ್ದರು.
ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಸಿಕ್ಕಿವೆ?
ಫೆಬ್ರವರಿ 8ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಇದರಲ್ಲಿ ಪಿಎಂಎಲ್-ಎನ್ 75 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಪಕ್ಷವು ಬೆಂಬಲಿಸಿದ ಸ್ವತಂತ್ರ ಅಭ್ಯರ್ಥಿಗಳು 90ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದರು. ಪಿಪಿಪಿ 54 ಸ್ಥಾನಗಳನ್ನು ಗೆದ್ದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



