ವಿದೇಶ

ಭಾರತ ವಿರೋಧಿಗೆ ಗುಂಡೇಟು: ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ಮಾಜಿ ಬ್ರಿಗೇಡಿಯರ್ ಅಮೀರ್ ಹಮ್ಜಾ ಹತ್ಯೆ!

ಘಟನೆಯ ವೇಳೆ ಬ್ರಿಗೇಡಿಯರ್ ಹಮ್ಜಾ ಅವರು ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುತ್ತಿದ್ದರು. ದಾಳಿಕೋರರು ಹಮ್ಜಾ ಕಾರನ್ನು ನಿಲ್ಲಿಸಲು ಅಥವಾ ದರೋಡೆ ಮಾಡಲು ಪ್ರಯತ್ನಿಸದೆ ಅವರ ಮೇಲೆ ಗುಂಡು ಹಾರಿಸಿದ್ದಾರೆ.

ಭಾರತ ವಿರೋಧಿಗೆ ಗುಂಡೇಟು: ಅಪರಿಚಿತ ಬಂದೂಕುಧಾರಿಗಳಿಂದ ಪಾಕ್ ಮಾಜಿ ಬ್ರಿಗೇಡಿಯರ್ ಅಮೀರ್ ಹಮ್ಜಾ ಹತ್ಯೆ!
ಅಮೀರ್ ಹಮ್ಜಾ
Published On :

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝೀಲಂ ಪ್ರದೇಶದ ಲೀಲಾ ಇಂಟರ್‌ಚೇಂಜ್‌ನಲ್ಲಿ ಉದ್ದೇಶಿತ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ನಿವೃತ್ತ ಬ್ರಿಗೇಡಿಯರ್ ಅಮೀರ್ ಹಮ್ಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ವರದಿಗಳ ಪ್ರಕಾರ ಅಪರಿಚಿತ ಬಂದೂಕುಧಾರಿಗಳು ಈ ದಾಳಿ ನಡೆಸಿದ್ದಾರೆ. ಘಟನೆಯ ವೇಳೆ ಬ್ರಿಗೇಡಿಯರ್ ಹಮ್ಜಾ ಅವರು ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುತ್ತಿದ್ದರು. ದಾಳಿಕೋರರು ಹಮ್ಜಾ ಕಾರನ್ನು ನಿಲ್ಲಿಸಲು ಅಥವಾ ದರೋಡೆ ಮಾಡಲು ಪ್ರಯತ್ನಿಸದೆ ಅವರ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಕೋರರ ಏಕೈಕ ಉದ್ದೇಶ ಹಮ್ಜಾನನ್ನು ಕೊಲ್ಲುವುದೇ ಆಗಿತ್ತು ಎಂದು ಸೂಚಿಸುತ್ತದೆ. ಇದು ಉದ್ದೇಶಿತ ಹತ್ಯೆ ಎಂದು ಅಧಿಕಾರಿಗಳು ನಂಬಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಆದರೆ, ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಸೆಕ್ಷನ್‌ಗಳಿಲ್ಲ. ದಾಳಿಕೋರರ ಗುರುತು ಅಥವಾ ಉದ್ದೇಶದ ಬಗ್ಗೆ ಯಾವುದೇ ಸ್ಪಷ್ಟ ಸುಳಿವುಗಳಿಲ್ಲದ ಪೊಲೀಸರು ಘಟನೆಯನ್ನು ಕೊಲೆ ಎಂದು ಪರಿಗಣಿಸುತ್ತಿದ್ದಾರೆ. ನಿವೃತ್ತ ಬ್ರಿಗೇಡಿಯರ್ ಅಮೀರ್ ಹಮ್ಜಾ ಅವರು ತುರ್ತು ಸೇವೆಗಳ ಅಕಾಡೆಮಿ 1122ರ ಮಾಜಿ ಮಹಾನಿರ್ದೇಶಕರಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಸುಂಜ್ವಾನ್ ಸೇನಾ ಶಿಬಿರದ ಮೇಲೆ 2018ರ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಒಬ್ಬ ಎಂದು ಹೇಳಲಾಗಿದೆ. ಈ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಉಗ್ರರು ನಡೆಸಿರುವ ಶಂಕೆ ವ್ಯಕ್ತವಾಗಿದೆ.

2018ರ ಫೆಬ್ರವರಿ 10ರಂದು ನಡೆದ ದಾಳಿಯಲ್ಲಿ ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು (ಜೆಸಿಒ) ಮತ್ತು ಸೈನಿಕನ ತಂದೆ ಸೇರಿದಂತೆ ಐವರು ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದರು. ಜತೆಗೆ ಆರು ಜನ ಮಹಿಳೆಯರು, ಮಕ್ಕಳು ಸೇರಿದಂತೆ ಹತ್ತು ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.