ನೇರ ಪ್ರಸಾರದಲ್ಲಿ ಹನಿಮೂನ್ ಬಗ್ಗೆ ಪ್ರಶ್ನೆ: ಹಾಸ್ಯ ಕಲಾವಿದನಿಗೆ ಗಾಯಕಿ ಕಪಾಳಮೋಕ್ಷ
ಖ್ಯಾತ ಪಾಕ್ ಗಾಯಕಿ ಶಾಜಿಯಾ ಮಂಜೂರ್ ಗೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹನಿಮೂನ್ ಬಗ್ಗೆ ಪ್ರಶ್ನೆ ಮಾಡಿದ ಹಾಸ್ಯ ಕಲಾವಿದನಿಗೆ ಕಪಾಳಮೋಕ್ಷ ಉಂಟಾಗಿದೆ.

ಇಸ್ಲಾಮಾಬಾದ್: ಖ್ಯಾತ ಪಾಕ್ ಗಾಯಕಿ ಶಾಜಿಯಾ ಮಂಜೂರ್ ಗೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹನಿಮೂನ್ ಬಗ್ಗೆ ಪ್ರಶ್ನೆ ಮಾಡಿದ ಹಾಸ್ಯ ಕಲಾವಿದನಿಗೆ ಕಪಾಳಮೋಕ್ಷ ಉಂಟಾಗಿದೆ. ಹಾಸ್ಯಕಲಾವಿದ ಶೆರ್ರಿ ನನ್ಹಾಗೆ ಸ್ವತಃ ಗಾಯಕಿ ಶಾಜಿಯಾ ಮಂಜೂರ್ ಕಪಾಳ ಮೋಕ್ಷ ಮಾಡಿದ್ದು, ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.
ಗಾಯಕಿ "ಸಾರ್ವಜನಿಕ ಬೇಡಿಕೆ" ಯ ಹಿನ್ನೆಲೆಯಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು ಮತ್ತು ಹಾಸ್ಯನಟ "ಹನಿಮೂನ್" ಬಗ್ಗೆ ಪ್ರಶ್ನೆಯನ್ನು ಕೇಳಿದ ಬೆನ್ನಲ್ಲೇ ಗಾಯಕಿ ತೀವ್ರ ಆಕ್ರೋಶಗೊಂಡರು. ಗಾಯಕಿ ಹಾಸ್ಯ ಕಲಾವಿದನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.
"ನಾವು ಮದುವೆಯಾದ ನಂತರ, ಶಾಜಿಯಾ, ನಾನು ತಕ್ಷಣ ನಿನ್ನನ್ನು ನಮ್ಮ ಹನಿಮೂನ್‌ಗೆ ಮಾಂಟೆ ಕಾರ್ಲೋಗೆ ಕರೆದುಕೊಂಡು ಹೋಗುತ್ತೇನೆ. ನೀವು ಯಾವ ವಿಮಾನದ ವಿಭಾಗದಲ್ಲಿ (ಕ್ಲಾಸ್ ನಲ್ಲಿ) ಸಂಚರಿಸಲು ಬಯಸುತ್ತೀರಿ ಎಂದು ನನಗೆ ತಿಳಿಸುವಿರಾ?, ಎಂದು ಶೆರ್ರಿ ನನ್ಹಾ ತಮಾಷೆಯಾಗಿ ಕೇಳಿದ್ದಕ್ಕೆ ಮಂಜೂರ್ ಕೋಪಗೊಂಡು ಕಪಾಳಮೋಕ್ಷ ಮಾಡಿದ್ದಾರೆ. ಈ ಪ್ರಶ್ನೆ ಕೇಳಿದ ಹಾಸ್ಯಕಲಾವಿದನನ್ನು ಮೂರನೇ ದರ್ಜೆಯ ವ್ಯಕ್ತಿ ಎಂದು ಗಾಯಕಿ ನಿಂದಿಸಿದ್ದಾರೆ.
ಮಹಿಳೆಯರೊಂದಿಗೆ ಮಾತನಾಡುವ ರೀತಿ ಇದೇನಾ? ನೀವು ಹನಿಮೂನ್ ಎಂದು ಹೇಳುತ್ತಿದ್ದೀರ, ಇದೇ ರೀತಿ ಮಹಿಳೆಯರೊಂದಿಗೆ ಮಾತನಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಕಾರ್ಯಕ್ರಮ ಹೋಸ್ಟ್ ಮೊಹ್ಸಿನ್ ಅಬ್ಬಾಸ್ ಹೈದರ್ ಮಧ್ಯಪ್ರವೇಶಿಸಿ ಇಂತಹ ಘಟನೆಗಳನ್ನು ತಡೆಯಲು ಸ್ಕ್ರಿಪ್ಟ್‌ಗೆ ಸೀಮಿತವಾಗಿರುವಂತೆ ನನ್ಹಾಗೆ ಕಟ್ಟುನಿಟ್ಟಾಗಿ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



