ಅಮೆರಿಕಾದಲ್ಲಿ ಗುಂಡಿಕ್ಕಿ ಭಾರತೀಯ ಮೂಲದ ವೃದ್ಧನ ಹತ್ಯೆ
ಅಮೆರಿಕದ ಅಲಬಾಮಾ ರಾಜ್ಯದಲ್ಲಿ 76 ವರ್ಷದ ಭಾರತೀಯ ಮೂಲದ ಮೋಟೆಲ್ (ರಸ್ತೆ ಪಕ್ಕದ ಹೋಟೆಲ್) ಮಾಲೀಕನನ್ನು ಗ್ರಾಹಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ವಾಷಿಂಗ್ಟನ್: ಅಮೆರಿಕದ ಅಲಬಾಮಾ ರಾಜ್ಯದಲ್ಲಿ 76 ವರ್ಷದ ಭಾರತೀಯ ಮೂಲದ ಮೋಟೆಲ್ (ರಸ್ತೆ ಪಕ್ಕದ ಹೋಟೆಲ್) ಮಾಲೀಕನನ್ನು ಗ್ರಾಹಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ರೂಮಿನ ವಿಚಾರವಾಗಿ ಗ್ರಾಹಕ ಹಾಗೂ ಪ್ರವೀಣ್ ನಡುವೆ ಜಗಳವಾದ ಸಂಬಂಧ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಶೆಫೀಲ್ಡ್‌ನಲ್ಲಿ ಹಿಲ್‌ಕ್ರೆಸ್ಟ್ ಮೋಟೆಲ್ ಮಾಲೀಕರಾಗಿದ್ದ ಪ್ರವೀಣ್ ರಾವ್ಜಿಭಾಯ್ ಪಟೇಲ್ ಅವರನ್ನು ಕಳೆದ ವಾರ ಗುಂಡಿಕ್ಕಿ ಹತ್ಯೆ ಮಾಡಿದ ವಿಲಿಯಂ ಜೆರಮಿ ಮೂರ್ (34) ಎಂಬಾತನನ್ನು ಬಂಧಿಸಲಾಗಿದೆ ಎಂದು ಶೆಫೀಲ್ಡ್ ಪೊಲೀಸ್ ಮುಖ್ಯಸ್ಥ ರಿಕಿ ಟೆರಿ ಹೇಳಿದ್ದಾರೆ ಎಂದು ಡಬ್ಲ್ಯೂಎಎಫ್ ಎಫ್ ಸುದ್ದಿ ವಾಹಿನಿ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



