ಸೊಮಾಲಿಯಾ ಕಡಲ್ಗಳ್ಳರ ದಾಳಿಯಿಂದ ಇರಾನ್-ಪಾಕ್ ಪ್ರಜೆಗಳಿದ್ದ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ!
ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಇರಾನ್ ಧ್ವಜದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರ ಸಂಭಾವ್ಯ ದಾಳಿಯೊಂದನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ.

ನವದೆಹಲಿ: ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಇರಾನ್ ಧ್ವಜದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರ ಸಂಭಾವ್ಯ ದಾಳಿಯೊಂದನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ.
ಭಾರತೀಯ ಯುದ್ಧನೌಕೆ ಐಎನ್‌ಎಸ್ ಶಾರದಾ ನೌಕೆ ಎಫ್‌ವಿ ಒಮರಿಲ್ ನೌಕೆಯನ್ನು ರಕ್ಷಣೆ ಮಾಡಿದ್ದು, 11 ಇರಾನ್ ಮತ್ತು ಎಂಟು ಪಾಕಿಸ್ತಾನಿ ಸಿಬ್ಬಂದಿಗಳಿದ್ದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರು ದಾಳಿಗೆ ಮುಂದಾಗಿದ್ದರು. ಆದರೆ ನೌಕಾಪಡೆಯ ಪ್ರವೇಶದೊಂದಿಗೆ ಈ ದಾಳಿ ವಿಫಲವಾಗಿದೆ ಎಂದು ಹೇಳಲಾಗಿದೆ.
"ಇರಾನ್ ಮೂಲದ ಎಫ್‌ವಿ ಒಮರಿಲ್ ಹಡಗನ್ನು ಏಳು ಕಡಲ್ಗಳ್ಳರು ದಾಳಿ ಮಾಡಿ ಅದನ್ನು ವಶಕ್ಕೆ ಪಡೆಯಲು ಯತ್ನಿಸಿದ್ದರು. ಅವರು ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದ ಕೂಡಲೇ ಐಎನ್‌ಎಸ್ ಶಾರದಾ ಶುಕ್ರವಾರ ಮುಂಜಾನೆ ಹಡಗನ್ನು ತಡೆಯಿತು.
ಹಡಗಿನ ಜೊತೆಗೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಕಡಲ್ಗಳ್ಳರಿಗೆ ಸೂಚಿಸಲಾಗಿತ್ತು. ಈ ಹಡಗಿನಲ್ಲಿ 11 ಇರಾನ್ ಮತ್ತು ಎಂಟು ಪಾಕಿಸ್ತಾನಿ ಸಿಬ್ಬಂದಿಯನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


